|ರಮೇಶ್ ಮೈಸೂರುಬೆಂಗಳೂರು
ಪರಿಷ್ಕರಣೆ ವಿವಾದದಿಂದಾಗಿ ಪಠ್ಯಪುಸ್ತಕಗಳಿನ್ನೂ ಶಾಲೆಗಳನ್ನು ತಲುಪದೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದರೆ ಇನ್ನೊಂದೆಡೆ, ಶಿಕ್ಷಕರು ಬೇರೊಂದು ಸಮಸ್ಯೆಗೆ ಹೈರಾಣಾಗುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಮಧ್ಯರಾತ್ರಿ ಕೆಲಸ ಮಾಡಿ ಎಂದು ಅಧಿಕಾರಿಗಳೇ ತಾಕೀತು ಮಾಡುತ್ತಿದ್ದಾರೆ.
ಶೈಕ್ಷಣಿಕ ವರ್ಷ ಶುರುವಿಗೆ ಮುನ್ನ ಯಾವ್ಯಾವ ಸಿದ್ಧತೆ ಮಾಡಿಕೊಳ್ಳಬೇಕು? ಮುಂಗಾರಿಗೆ ಏನೆಲ್ಲ ಮುಂಜಾಗ್ರತೆ ಬೇಕು ಎಂದೆಲ್ಲ ಸುತ್ತೋಲೆ ಹೊರಡಿಸುವ ಸಾರ್ವಜನಿಕ ಶಿಕ್ಷಣ ಇಲಾಖೆ ತಾನು ಮಾಡಬೇಕಿರುವ ಕೆಲಸವನ್ನೇ ಮರೆಯುವುದು ವಿಪರ್ಯಾಸ.
ಶಾಲೆ ಆರಂಭವೆಂದರೆ ಸರ್ವರ್ ಸಮಸ್ಯೆ:ಪ್ರವೇಶ, ದಾಖಲಾತಿ, ಉತ್ತೀರ್ಣತೆ, ಹಾಜರಾತಿ, ಪುಸ್ತಕ ವಿತರಣೆ, ಬಿಸಿಯೂಟ ಮೊದಲಾದ ಕಾರ್ಯಗಳನ್ನೆಲ್ಲ ವಿದ್ಯಾರ್ಥಿ ಸಾಧನೆಯ ಟ್ರಾ್ಯಕಿಂಗ್ ವ್ಯವಸ್ಥೆ (ಸ್ಟುಡೆಂಟ್ ಅಚೀವ್​ವೆುಂಟ್ ಟ್ರಾ್ಯಕಿಂಗ್ ಸಿಸ್ಟಮ್ (ಎಸ್​ಎಟಿಎಸ್) ತಂತ್ರಾಂಶದಲ್ಲಿ ನಮೂದು ಮಾಡಲಾಗುತ್ತದೆ. ಶಾಲೆಗಳು ಆರಂಭವಾಗುತ್ತಿದ್ದಂತೆ ಈ ತಂತ್ರಾಂಶ ಹಾಗೂ ಸರ್ವರ್ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಬೇಕಾದ ಇಲಾಖೆ ಪ್ರತಿಬಾರಿಯೂ ಶಿಕ್ಷಕರನ್ನು ಗೋಳು ಹೊಯ್ದುಕೊಳ್ಳುತ್ತದೆ.
ಶಾಲೆ ಆರಂಭವೆಂದರೆ ಸರ್ವರ್ ಸಮಸ್ಯೆ ಎಂಬಂತಾಗಿದೆ. ರಾಜ್ಯಾದ್ಯಂತ ಈ ಕಾರ್ಯ ನಡೆಯುವುದರಿಂದ ಸಹಜವಾಗಿಯೇ ಸರ್ವರ್ ಮೇಲೆ ಒತ್ತಡವಿರುತ್ತದೆ. ಆದರೆ, ಇದಕ್ಕೆ ತಕ್ಕ ಸಿದ್ಧತೆಯನ್ನೇ ಇಲಾಖೆ ಮಾಡಿಕೊಳ್ಳುವುದಿಲ್ಲ ಎಂದು ಶಿಕ್ಷಕರು ಆಕ್ಷೇಪಿಸುತ್ತಿದ್ದಾರೆ.
ಗಂಟೆಗಟ್ಟಲೇ ಕಾಯಬೇಕು:ವಿದ್ಯಾರ್ಥಿಯ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗೆ ಅರ್ಹನೆಂದು ಆನ್​ಲೈನ್​ನಲ್ಲಿ ಘೋಷಿಸಬೇಕಾಗುತ್ತದೆ. ಉದಾಹರಣೆಗೆ 5ನೇ ತರಗತಿ ಮಕ್ಕಳನ್ನು 6ನೇ ತರಗತಿಗೆ ಪ್ರಮೋಟ್ ಮಾಡಿ ಅಡ್ಮಿಟ್ ಎಂದು ತಂತ್ರಾಂಶದಲ್ಲಿ ನಮೂದಿಸಬೇಕಾಗುತ್ತದೆ. ಪ್ರತಿ ವಿದ್ಯಾರ್ಥಿ ಮಾಹಿತಿಯನ್ನು ಸಬ್ಮಿಟ್ ಮಾಡಿದಾಗಲೂ ಓಕೆ ಆಗಲು ಗಂಟೆಗಟ್ಟಲೇ ಬೇಕಾಗುತ್ತದೆ. ಹೀಗಾಗಿ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಆನ್​ಲೈನ್ ಕೆಲಸ ಮಾಡಿಕೊಳ್ಳಬೇಕಾಗಿದೆ. ಸರ್ವರ್ ಸಮಸ್ಯೆ ಇರುವುದರಿಂದ ಮಧ್ಯರಾತ್ರಿ ಕೆಲಸ ಮಾಡಿ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಹೀಗಿರುವಾಗ ನಮ್ಮ ಕಷ್ಟವನ್ನು ಯಾರಿಗೆ ಹೇಳಿಕೊಳ್ಳೋಣ ಎನ್ನುತ್ತಿದ್ದಾರೆ ಶಿಕ್ಷಕರು.
ಏನೇನು ದಾಖಲಿಸಬೇಕು?:ಮಗುವೊಂದು ಶಾಲೆಗೆ ಪ್ರವೇಶ ಪಡೆಯುತ್ತಿದ್ದಂತೆ ಆ ವಿವರಗಳನ್ನು ಆನ್​ಲೈನ್​ನಲ್ಲಿ ನಮೂದಿಸಬೇಕಾಗುತ್ತದೆ. ಬಳಿಕ ಆ ಮಗುವಿಗೆ ಎಸ್​ಎಟಿಎಸ್ ಸಂಖ್ಯೆ ಸೃಷ್ಟಿಯಾಗುತ್ತದೆ. ಶಾಲಾ ಶಿಕ್ಷಣದ ಹಂತದುದ್ದಕ್ಕೂ ಇದೇ ಸಂಖ್ಯೆ ಶಾಶ್ವತವಾಗಿರುತ್ತದೆ.
ನಂತರದ ಹಂತವಾಗಿ ಆ ಮಗುವಿನ ಬ್ಯಾಂಕ್ ಖಾತೆಯ ವಿವರಗಳನ್ನು ದಾಖಲಿಸಬೇಕು. ಆ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿದೆಯೋ ಇಲ್ಲವೋ ಎಂಬುದನ್ನು ಶಿಕ್ಷಕರೇ ನಿಭಾಯಿಸಬೇಕು. ಇಲ್ಲದಿದ್ದರೆ ಆ ಮಗುವಿಗೆ ವಿದ್ಯಾರ್ಥಿ ವೇತನ ಸೇರಿ ಸರ್ಕಾರದ ಇತರ ಸೌಲಭ್ಯಗಳು ದೊರೆಯುವುದಿಲ್ಲ. ಶಾಲೆಗೆ ಪಠ್ಯಪುಸ್ತಕಗಳು ರವಾನೆಯಾದಾಗ ಮಗುವಿಗೆ ಪೂರೈಸಿ ಆ ವಿವರಗಳನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಬೇಕು. ವರ್ಗಾವಣೆ ಪತ್ರವನ್ನು ಆನ್​ಲೈನ್​ನಲ್ಲಿಯೇ ದೊರೆಯವಂತೆ ಮಾಡಲಾಗಿದೆ.
ಶಿಕ್ಷಕರೇ ಹೆಣಗಾಡಬೇಕು:ಶಾಲೆಗಳಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಬೋಧಕೇತರ ಸಿಬ್ಬಂದಿ ಕೊರತೆ ಇದ್ದೇ ಇದೆ. ಹೀಗಾಗಿ ಎಲ್ಲ ಕೆಲಸಗಳನ್ನು ಶಿಕ್ಷಕರೇ ನಿರ್ವಹಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದದ್ದೇ. ಹೀಗಿರುವಾಗ ಸರ್ವರ್ ಕೈಕೊಟ್ಟರೆ ಮತ್ತೊಂದು ತಲೆಬೇನೆ. ಟಿಸಿಗಾಗಿ ಕಾಯುತ್ತಿರುವ ಪಾಲಕರ ಒತ್ತಡ, ಇತ್ತ ಸರ್ವರ್ ಸಮಸ್ಯೆಯಿಂದಾಗಿ ಶಿಕ್ಷಕರು ಹೈರಾಣಾಗಿದ್ದಾರೆ.
ಎಸ್​ಎಸ್​ಎಲ್​ಸಿ ಪರೀಕ್ಷಾ ಅರ್ಜಿಯಲ್ಲಿ ಲೋಪ ತಿದ್ದುಪಡಿಗೆ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋದರೆ ಕಂಪ್ಯೂಟರ್ ಆಪರೇಟರ್​ಗಳು ಹಣ ನೀಡದೆ ಕೆಲಸವನ್ನೇ ಮಾಡುವುದಿಲ್ಲ. ಸರ್ಕಾರದ ಶುಲ್ಕವೆಂಬಂತೆ ದುಡ್ಡು ಕೊಟ್ಟು ಬರಬೇಕಾಗುತ್ತದೆ.
|ಸರ್ಕಾರಿ ಶಾಲೆ ಶಿಕ್ಷಕ
ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತರೂ ಆನ್​ಲೈನ್ ಕೆಲಸಗಳನ್ನು ಮಾಡಲಾಗುತ್ತಿಲ್ಲ. ಸಬ್ಮಿಟ್ ಎಂದು ಕೊಟ್ಟರೆ ಸರ್ವರ್ ಗಿರಕಿ ಹೊಡೆಯುತ್ತಲೇ ಇರುತ್ತದೆ. ಸಮಸ್ಯೆ ಎಂದು ಎಂದು ಹೇಳಿದರೆ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಕೆಲಸವಾಗದಿದ್ದಾಗ ಮೆಮೋ ಕಳುಹಿಸುತ್ತಾರೆ.
|ನೊಂದ ಶಿಕ್ಷಕಬೆಂಗಳೂರು
ಭ್ರಷ್ಟಾಚಾರಕ್ಕೂ ದಾರಿ:ಆನ್​ಲೈನ್ ಮಾಹಿತಿಯಲ್ಲಿ ಲೋಪವಾದರೆ ಸಂಬಂಧಿಸಿದ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಸರಿಪಡಿಸಬೇಕಿರುತ್ತದೆ. ಇಲ್ಲಿ ದುಡ್ಡು ನೀಡದೇ ಕೆಲಸ ಆಗುವುದಿಲ್ಲ. ಇಲ್ಲಿನ ಸಿಬ್ಬಂದಿ ಪ್ರತಿ ತಪ್ಪಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ವಸೂಲು ಮಾಡುತ್ತಾರೆ. ಆರ್​ಟಿಒ, ನೋಂದಣಿ ಕಚೇರಿಗಳಂತೆ ಇಲ್ಲಿಯೂ ರೇಟ್ ಕಾರ್ಡ್ ಇದೆ ಎಂದು ಶಿಕ್ಷಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ತಪು್ಪ ದೊಡ್ಡದಾದಷ್ಟು ಇವರಿಗೆ ನೀಡಬೇಕಾದ ಹಣದ ಮೊತ್ತ ಹೆಚ್ಚಿರುತ್ತದೆ. ಕಂಪ್ಯೂಟರ್ ಕೆಲಸ ಅಷ್ಟಾಗಿ ತಿಳಿಯದವರು ಇವರಿಗೆ ಸುಲಭದ ತುತ್ತಾಗುತ್ತಾರೆ.
ಸಿಆರ್​ಪಿಗಳ ದಬ್ಬಾಳಿಕೆ:ಕಲಿಸೋದನ್ನು ಬಿಟ್ಟು ಕ್ಲಸ್ಟರ್ ರಿಸೋರ್ಸ್ ಪರ್ಸನ್ (ಸಿಆರ್​ಪಿ) ಹುದ್ದೆಗೆ ಅಂಟಿ ಕೊಳ್ಳುವ ಶಿಕ್ಷಕರ ದಬ್ಬಾಳಿಕೆ ಹೇಳತೀರದು. ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳ ಬಗ್ಗೆ ಶಿಕ್ಷಕರು ಹೇಳಿಕೊಂಡರೆ, ಸರ್ವರ್ ಸರಿಯಿದ್ದಾಗ ಕೆಲಸ ಮಾಡಿ ಎಂದು ತಾಕೀತು ಮಾಡುತ್ತಾರೆ. ತಪ್ಪಿದಲ್ಲಿ ನೋಟಿಸ್, ಮೆಮೋ ಎಂದು ಶಿಸ್ತುಕ್ರಮದ ಎಚ್ಚರಿಕೆ ತೋರಿಸಿ ಹೆದರಿಸುತ್ತಾರೆ ಎಂಬ ಆಕ್ರೋಶ ಶಿಕ್ಷಕರದ್ದು. ಸರ್ಕಾರಿ ಶಿಕ್ಷಕರು ಇವರಿಗೆ ಕೆಲವೊಮ್ಮೆ ಸೊಪು್ಪ ಹಾಕದಿದ್ದರೂ, ಅನುದಾನಿತ ಶಾಲೆ ಸಿಬ್ಬಂದಿ ಮಣಿಯಲೇಬೇಕು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × five =
Remember me
