ಬೆಂಗಳೂರು:ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮೇ 15 ರಂದು ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಣ್ಣಪುಟ್ಟ ಗೊಂದಲದಿಂದ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹೆಸರು ೋಷಣೆಯಾಗಿದೆ. ಈಗ ಕ್ಷೇತ್ರ ಬಿಟ್ಟುಕೊಡುವುದಾಗಿ ಬಿಜೆಪಿ ಹೈಕಮಾಂಡ್ ಹೇಳಿದೆ. ಹಿಂದೆಯೇ ಸಮನ್ವಯ ಸಮಿತಿ ಸಭೆ ನಡೆಸಿ ನಿಮ್ಮ ಎಂಎಲ್‌ಸಿ ಇರುವ ಕಡೆ ನಿಮಗೆ, ನಮ್ಮ ಎಂಎಲ್‌ಸಿ ಇರುವ ಕಡೆ ನಮಗೆ ಎಂದು ತೀರ್ಮಾನ ಮಾಡಲಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕರೂ ಒಪ್ಪಿಕೊಂಡಿದ್ದಾರೆ. ಸಂವಹನದ ಕೊರತೆಯಿಂದ ಸಮಸ್ಯೆಯಾಗಿದೆ. ದಕ್ಷಿಣ ಕ್ಷೇತ್ರ ಜೆಡಿಎಸ್‌ಗೆ ಸಿಗಲಿದೆ. ಮೇ 15ಕ್ಕೆ ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿ ಹೆಸರು ೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಮೇಲ್ಮನೆ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚೆ ನಡೆದಿದೆ. ಶ್ರೀಕಂಠೇಗೌಡ, ವಿವೇಕಾನಂದ ಇಬ್ಬರೂ ಸಮಬಲ ಹೊಂದಿದ್ದಾರೆ. ಶಿಕ್ಷಕರ ಪ್ರಿಯವಾಗಿರೋ ಅಭ್ಯರ್ಥಿಯನ್ನು ದೇವೇಗೌಡರು, ಕುಮಾರಸ್ವಾಮಿ ಅವರು ನಿರ್ಧರಿಸುತ್ತಾರೆ ಎಂದರು.
ರೇವಣ್ಣ ಪ್ರಕರಣದಲ್ಲಿ ಕಿಡ್ನ್ಯಾಪ್ ಆದ ಸಂತ್ರಸ್ತ ಮಹಿಳೆಯಿಂದ ಹೇಳಿಕೆ ವಿಡಿಯೋ ಕುರಿತ ಪ್ರಶ್ನೆಗೆ, ನಾವು ಇದನ್ನು ಮೊದಲೇ ಹೇಳಿದ್ದೆವು. ದೇವೇಗೌಡರ ಕುಟುಂಬದಲ್ಲಿ ಯಾರು ಹೀಗೆ ಮಾಡುವುದಿಲ್ಲ. ಇದು ವ್ಯವಸ್ಥಿತವಾಗಿ ಹಣೆದ ಬಲೆ. ಯಾವ ಸಂದರ್ಭದಲ್ಲೂ ದೇವೇಗೌಡರ ಕುಟುಂಬ ವಿಚಲಿತವಾಗುವುದಿಲ್ಲ. ಎಸ್‌ಐಟಿ ಸಂತ್ರಸ್ತ ಮಹಿಳೆಯಿಂದ ಬಲವಂತವಾಗಿ ಹೇಳಿಕೆ ದಾಖಲಿಸಿದೆ.
ಎಸ್‌ಐಟಿ ಮಾಡುತ್ತಿರುವ ಕೆಲಸ ಸತ್ಯಕ್ಕೆ ದೂರವಾದದ್ದು. ಸಂತ್ರಸ್ತರು ರೇವಣ್ಣ ಕುಟುಂಬದವರು ರೇಪ್ ಮಾಡಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಮಹಿಳೆಯರನ್ನು ಬಲವಂತವಾಗಿ ಎಳೆದುಕೊಂಡು ಬಂದು ಹೇಳಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ರೇವಣ್ಣ ಅವರನ್ನು ಜೈಲಿಗೆ ಕಳುಹಿಸುವ ಉದ್ದೇಶ ಸರ್ಕಾ ರದ್ದಾಗಿತ್ತು. ಹಾಗಾಗಿ ಕತೆ ಹೆಣೆದಿದ್ದಾರೆ. ಸರ್ಕಾರದ ಬಳಿ ಅಭಿವೃದ್ಧಿಗೆ ದುಡ್ಡಿಲ್ಲ. ಹಾಗಾಗಿ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಸಂತ್ತಸ್ತರನ್ನ ಟ್ರೈನ್‌ಅಪ್ ಮಾಡಿ ನಂತರ ಜಡ್ಜ್ ಬಳಿ ಕರೆದುಕೊಂಡು ಹೋಗುತ್ತಾರೆ. ಸತ್ಯ ಹೊರಗಡೆ ಬರುತ್ತದೆ. ಸಾ.ರಾ.ಮಹೇಶ್ತೋಟದ ಮನೆಯಿಂದ ಮಹಿಳೆ ಅಸ್ಟ್ ಆಗಿಲ್ಲ. ಒಂದು ವೇಳೆ ಅಲ್ಲೇ ಅರೆಸ್ಟ್ ಆಗಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಒಂದು ವಾರದ ಹಿಂದೆಯೇ ಹೇಳಿದ್ದಾರೆ. ತೋಟದ ಮನೆಯಲ್ಲಿನ ವಿಡಿಯೋ ಇವರು ರಿಲೀಸ್ ಮಾಡಲಿ. ಎಸ್‌ಐಟಿಯವರಿಗೆ ತೋರಿಸಲಿ ಬಿಡಿ. ಇದು ಕಣ್ಣಿಗೆ ಕಟ್ಟಿದ ಕತೆ ಅಷ್ಟೆ ಎಂದು ಸುರೇಶ್ ಗೌಡ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
