ಮಂಡ್ಯ:ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆರಂಭಕ್ಕೆ ವಿಳಂಬ ಮಾಡಿದ ಅಧಿಕಾರಿಗಳನ್ನು ಎಲ್ಲರ ಸಮ್ಮುಖದಲ್ಲೇ ಎಂಎಲ್‌ಸಿ ಅಪ್ಪಾಜಿಗೌಡ ತರಾಟೆಗೆ ತೆಗೆದುಕೊಂಡ ಘಟನೆ ನಾಗಮಂಗಲದ ಅಂಬೇಡ್ಕರ್ ಭವನದಲ್ಲಿ ಶನಿವಾರ ಸಂಭವಿಸಿದೆ.
ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ನಿಗದಿತ ಸಮಯಕ್ಕೆ ಆಗಮಿಸಿ ವೇದಿಕೆ ಮುಂಭಾಗ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಕುಳಿತಿದ್ದರು. ಆದರೆ, 12 ಗಂಟೆಯಾದರೂ ಶಾಸಕ ಸುರೇಶ್​ ಗೌಡ ಬಂದಿರಲಿಲ್ಲ. ಅವರ ಬರುವಿಕೆಗಾಗಿ ಕಾಯುತ್ತ ಕಾರ್ಯಕ್ರಮ ಆರಂಭಿಸಿರಲಿಲ್ಲ. ಸಮಯ ಆಗ್ತಿದೆ ಕಾರ್ಯಕ್ರಮ ಆರಂಭಿಸಿ ಎಂದು ಅಪ್ಪಾಜಿಗೌಡ ಹಲವು ಬಾರಿ ಸೂಚಿಸಿದರೂ ಆಯೋಜಕರು ಮತ್ತು ಅಧಿಕಾರಿಗಳು ಸುಮ್ಮನಿದ್ದರು.ಇದನ್ನೂ ಓದಿರಿvideo/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ
ನಿಗದಿತ ಅವಧಿ ಮೀರಿದರೂ ಕಾರ್ಯಕ್ರಮ ಆರಂಭಿಸದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅಪ್ಪಾಜಿಗೌಡ, ‘ಯಾರೇ ಜನಪ್ರತಿನಿಧಿಯಾಗಿರಲಿ ಅವರಿಗೆ ಬಕೆಟ್ ಹಿಡಿಯೋದು ಬಿಡಿ. ಎಥಿಕ್ಸ್ ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯಕ್ರಮ ಆರಂಭ ಮಾಡದಿದ್ದರೆ ಹೊರಹೋಗುತ್ತೇನೆ’ ಎಂದು ಏರುಧ್ವನಿಯಲ್ಲಿ ಎಚ್ಚರಿಸಿದರು. ಎಂಎಲ್​ಸಿ ಆಕ್ರೋಶಕ್ಕೆ ತಬ್ಬಿಬ್ಬಾದ ತಹಸೀಲ್ದಾರ್, ಬಿಇಒ, ತಾಪಂ ಇಒ ಅವರು ಕಾರ್ಯಕ್ರಮ ಆರಂಭಿಸಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದಿಯಾಗಿ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಾಗಿದ್ದರು.
ಶಿಕ್ಷಕ ಪ್ರಶಸ್ತಿಗೂ ಶಿಫಾರಸು ಬೇಕೇನ್ರಿ? ಶಿಕ್ಷಕರ ಮೇಲೆ ರೇಗಾಡಿದ ಡಿಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
