|ಎನ್.ಎಲ್.ಶಿವಮಾದುಬೆಂಗಳೂರು
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಶಿಕ್ಷಕರಾಗಿ ನೇಮಕವಾದರೆ ಹತ್ತಾರು ವರ್ಷಗಳು ವರ್ಗಾವಣೆ ಸಿಗದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ತಂದೆ-ತಾಯಿ, ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ ಎಂಬ ಕಾರಣದಿಂದಲೇ ಕಲ್ಯಾಣ ಕರ್ನಾಟಕ (ಕ-ಕ) ಜಿಲ್ಲೆಗಳಲ್ಲಿ ಹುದ್ದೆ ಪಡೆಯಲು ಶಿಕ್ಷಕರು ಹಿಂದೇಟು ಹಾಕಿರುವ ವಿಚಾರವೀಗ ಬೆಳಕಿಗೆ ಬಂದಿದೆ.
ಹೌದು, ಹೀಗೆಂದು ರಾಯಚೂರಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹಾಲಿ ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ಪರೀಕ್ಷೆ ಬರದು ಮಂಡ್ಯ ಜಿಲ್ಲೆಯಲ್ಲಿ 1:1 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಶಿಕ್ಷಕರೊಬ್ಬರು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ, ಬಹುತೇಕ ಮಂದಿ ವರ್ಗಾವಣೆ ಸಿಗದೆ ಸಮಸ್ಯೆಗೆ ಸಿಲುಕುವುದರಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಹುದ್ದೆ ಬಯಸುವುದಿಲ್ಲ. ಅಲ್ಲದೆ, ಈಗ ನಡೆಸಿರುವ ಪ್ರಕ್ರಿಯೆಯಲ್ಲಿ ಮರು ಆಯ್ಕೆಯಾಗಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಶಿಕ್ಷಕರು ಕ.ಕ. ಜಿಲ್ಲೆಯವರೇ ಆಗಿದ್ದಾರೆಂದು ಶಿಕ್ಷಕರೊಬ್ಬರು ಅನಿಸಿಕೆ ಹಂಚಿಕೊಂಡರು.
ಶಿಕ್ಷಕ ಹುದ್ದೆ ಭರ್ತಿಯಲ್ಲಿ ಉತ್ತರ ಕರ್ನಾಟಕದ ಆದರಲ್ಲಿಯೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿವೆ. 15 ಸಾವಿರ ಹುದ್ದೆಗಳಲ್ಲಿ 13,363 ಹುದ್ದೆ ಭರ್ತಿಯಾಗಿವೆ. 1,637 ಖಾಲಿ ಉಳಿದಿವೆ. ಈ ಪೈಕಿ 1,200ಕ್ಕೂ ಹೆಚ್ಚಿನ ಹುದ್ದೆಗಳು ಉತ್ತರ ಕರ್ನಾಟಕದಲ್ಲಿಯೇ ಖಾಲಿ ಉಳಿದಿವೆ. ಪ್ರಮುಖವಾಗಿ ಚಿಕ್ಕೋಡಿಯಲ್ಲಿ 141, ಬೀದರ್​ನಲ್ಲಿ 143, ಯಾದಗಿರಿ- 138, ಬೆಳಗಾವಿ- 75, ಬಾಗಲಕೋಟೆ- 72 ಮತ್ತು ರಾಯಚೂರಿನಲ್ಲಿ 73 ಹುದ್ದೆಗಳು ಭರ್ತಿಯಾಗಿಲ್ಲ ಎಂದು ಶಿಕ್ಷಣ ಇಲಾಖೆ ದತ್ತಾಂಶ ನೀಡಿದೆ.
ಶಿವಮೊಗ್ಗ ಮುಂದು:ಹೆಚ್ಚಿನ ಹುದ್ದೆಗಳು ಭರ್ತಿಯಾಗಿರುವ ಜಿಲ್ಲೆಗಳಲ್ಲಿ ಶಿವಮೊಗ್ಗ ಮುಂದಿದೆ. ಕೇವಲ 2 ಹುದ್ದೆಗಳನ್ನು ಮಾತ್ರ ಬಿಟ್ಟುಕೊಟ್ಟಿದೆ. ನಂತರದ ಸ್ಥಾನದಲ್ಲಿ ಚಿತ್ರದುರ್ಗ- 4, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ತಲಾ 5 ಮತ್ತು ಹಾಸನ 9 ಸೇರಿ ಒಂದಂಕಿ ಹುದ್ದೆಗಳನ್ನು ಬಿಟ್ಟುಕೊಟುವ ಮೂಲಕ ಭಾಗಶಃ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿವೆ.
ಸೇವಾನಿರತ ಶಿಕ್ಷಕರಿಗೆ ಅವಕಾಶ: ಸೇವಾನಿರತ ಶಿಕ್ಷಕರಿಗೆ ಮತ್ತೆ ಶಿಕ್ಷಕರಾಗಿ ಪರೀಕ್ಷೆ ಬರೆಯಲು ಆವಕಾಶ ನೀಡಬಾರದು. 2008ರಲ್ಲಿ ಸೇವಾ ನಿರತರಿಗೆ ಅವಕಾಶ ನೀಡಿರಲಿಲ್ಲ, ಅದೇ ನಿಯಮವನ್ನು ಮತ್ತೆ ಜಾರಿಗೆ ತರಬೇಕು, ಇದರಿಂದ ಕಲ್ಯಾಣ ಕರ್ನಾಟಕ ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಹುದ್ದೆ ಭರ್ತಿಯಾಗುವ ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ ಎಂದು ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಒತ್ತಾಯವಾಗಿದೆ.
ಜಿಲ್ಲಾವಾರು, ವಿಷಯವಾರು ಮತ್ತು ರೋಸ್ಟರ್ ನಿಯಮಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಲಭ್ಯವಾಗದಿರುವುದರಿಂದ ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರ ಆನುಮತಿ ನೀಡಿದರೆ, ಮುಂದಿವ ದಿನಗಳಲ್ಲಿ ಭರ್ತಿ ಮಾಡಲಾಗುತ್ತದೆ.
|ಡಾ. ಆರ್. ವಿಶಾಲ್ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fourteen =
Remember me
