ಬೆಂಗಳೂರು : ಬಹು ನಿರೀತ ಶಿಕ್ಷಕರ ವರ್ಗಾವಣೆಗೆ ಈ ಬಾರಿ ನಿರೀತ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಕಳೆದ ವರ್ಷಕ್ಕಿಂತ ಕಡಿಮೆ ಅರ್ಜಿಗಳು ಬಂದಿವೆ. 2020ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದ್ದು, 69,380 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷ 1,09,782 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು.
ಈ ವರ್ಷ ಶಿಕ್ಷಕರ ವರ್ಗಾವಣೆ ಕಾಯ್ದೆಯನ್ನು ಹೊಸದಾಗಿ ರೂಪಿಸಿರುವುದರಿಂದ ಅರ್ಜಿಗಳು ಸಹ ಹೆಚ್ಚಿಗೆ ಬರಲಿದೆ ಎಂಬುದನ್ನು ಶಿಕ್ಷಣ ಇಲಾಖೆಯು ನಿರೀೆ ಮಾಡಿತ್ತು. ಆದರೆ, ಈ ವರ್ಷದ ಅಂಕಿ&ಅಂಶಗಳು ಈ ನಿರೀಕ್ಷೆಯನ್ನು ಹುಸಿ ಮಾಡಿದೆ. ಆದರೆ, ಯಾವ ಕಾರಣಕ್ಕೆ ಅರ್ಜಿ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಯಾವುದೇ ನಿಖರವಾದ ಅಂಶ ತಿಳಿದು ಬಂದಿಲ್ಲ.
ಕೋರಿಕೆ ವರ್ಗಾವಣೆ(ಜಿಲ್ಲೆ ಒಳಗೆ)& 46,666, ಜಿಲ್ಲೆ ಹೊರಗೆ ವಲಯದ ಒಳಗೆ& 9,160, ವಲಯದ ಹೊರಗೆ& 5,397, ವಲಯದ ಒಳಗೆ& 714, ಪರಸ್ಪರ ವರ್ಗಾವಣೆ: ಜಿಲ್ಲೆ ಒಳಗೆ & 2,448, ಜಿಲ್ಲೆ ಹೊರಗೆ ಹಾಗೂ ವಲಯದ ಒಳಗೆ& 610, ವಲಯದ ಹೊರಗೆ& 279, ವಲಯದ ಒಳಗೆ& 18, ವಿಶೇ ಪ್ರಕರಣ& 1055 ಮತ್ತು ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ& 3033 ಸೇರಿದಂತೆ 69,380 ಅರ್ಜಿಗಳು ಸಲ್ಲಿಕೆಯಾಗಿವೆ.
ಇದಾದ ನಂತರ ಡಿ.1ರಿಂದ 11ರವರೆಗೆ ತಂತ್ರಾಂಶದಲ್ಲಿ ಅರ್ಜಿಗಳನ್ನು ಅಂತಿಮಗೊಳಿಸಲಾಗುತ್ತದೆ. ಡಿ.15ರಂದು ಕರಡು ಆದ್ಯತಾ ಪಟ್ಟಿ ಪ್ರಕಟಿಸಲಿದೆ. ವಿವಿಧ ಪ್ರಕ್ರಿಯೆಗಳು ಮುಗಿದು ಜ.4ರಂದು ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 19 =
Remember me
