ಬೆಂಗಳೂರು:ಲಾಕ್​ಡೌನ್ ಬಳಿಕ ಪಕ್ಷವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಹಾಗೂ ಸರ್ಕಾರ ವಿರುದ್ಧ ಯಾವ ವಿಚಾರದಲ್ಲಿ ಹೋರಾಟ ನಡೆಸಿ ಜನರಿಗೆ ಹತ್ತಿರವಾಗಬೇಕೆಂದು ನೀಲಿನಕ್ಷೆ ಸಿದ್ಧಪಡಿಸಿರುವ ಕೆಪಿಸಿಸಿ, ಪಕ್ಷ ಸಂಘಟನೆಗೆ ಪುನಾರಚನೆಯತ್ತಲೂ ಗಮನ ಹರಿಸಿದೆ.
ಅಧ್ಯಕ್ಷರಾಗುತ್ತಿದ್ದಂತೆ ಪಕ್ಷವನ್ನು ಹೋರಾಟದ ಮೋಡ್​ಗೆ ಕೊಂಡೊಯ್ದ ಡಿ.ಕೆ.ಶಿವಕುಮಾರ್, ಸಂಘಟನೆಗಳನ್ನು ಪುನಾರಚಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ತಿಂಗಳೊಳಗೆ ರಾಜ್ಯ ಘಟಕ ರಚಿಸುವ ಇರಾದೆ ಹೊಂದಿದ್ದು, ಪಕ್ಷಕ್ಕಾಗಿ ಸಮಯ ಕೊಡುವವರು, ಶ್ರಮ ಹಾಕುವವರನ್ನು ಹೆಕ್ಕಿ ಅಂತವರಿಗೆ ಮಣೆ ಹಾಕಲು ತೀರ್ವನಿಸಿದ್ದಾರೆ. ಈಗಾಗಲೆ ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ನಿಗಮ-ಮಂಡಳಿಗಳ ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿರುವ ಡಿಕೆಶಿ, ಮುಂದಿನ ಹಂತದಲ್ಲಿ ಪದಾಧಿಕಾರಿಗಳ ಆಯ್ಕೆಗೆ ಭೂಮಿಕೆ ಸಜ್ಜು ಮಾಡಿಕೊಂಡಿದ್ದಾರೆ. ರಾಜ್ಯ ಘಟಕ ರಚನೆ ಬಳಿಕ ಜಿಲ್ಲಾ ಉಸ್ತುವಾರಿಗಳ ನೇಮಕ, ಜಿಲ್ಲಾ ಘಟಕಗಳ ಪುನಾರಚನೆ, ಬಳಿಕವಷ್ಟೇ ಬ್ಲಾಕ್ ಘಟಕಗಳಿಗೆ ಹೊಸ ನೇಮಕ ನಡೆಯುವುದು. ಮಹಿಳಾ ಘಟಕ, ಯುವ ಕಾಂಗ್ರೆಸ್, ಎನ್​ಎಸ್​ಯುುಐ, ಸೇವಾದಳಕ್ಕೂ ಹೊಸ ನೇಮಕಕ್ಕೆ ನಿರ್ಧರಿಸಲಾಗಿದೆ. ಒಟ್ಟಾರೆ ಟೀಮ್ ಕಾಂಗ್ರೆಸ್ ಸಿದ್ಧವಾಗುತ್ತಿದ್ದಂತೆ ಗ್ರಾಪಂ ಚುನಾವಣೆಗೆ ಇಡೀ ತಂಡ ಬಳಸಿಕೊಂಡು, ಪಕ್ಷದ ಗ್ರಾಫ್ ಏರುಗತಿಗೆ ಕೊಂಡೊ ಯ್ಯಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಲಾಕ್​ಡೌನ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುವುದು ಸದ್ಯದ ಗುರಿಯಾಗಿದೆ.
ಇದನ್ನೂ ಓದಿ:ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸಿಲ್ಲ
ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಪ್ರಾತಿನಿಧ್ಯದ್ದೇ ದೊಡ್ಡ ಸವಾಲಾಗುವ ಸಾಧ್ಯತೆ ಇದೆ. ಸದ್ಯ ರಾಜ್ಯದಲ್ಲಿ 7-8 ಹಿರಿಯ ಮುಂಚೂಣಿ ನಾಯಕರಿದ್ದು, ತಮ್ಮ ಅನುಯಾಯಿಗಳನ್ನು ಪದಾಧಿಕಾರಿ ವರ್ಗದಲ್ಲಿ ಸೇರಿಸಲು ಒತ್ತಡ ತರುವುದಂತೂ ಖಚಿತ. ಜತೆಗೆ ಜಾತಿ, ಪ್ರಾದೇಶಿಕ ಪ್ರಾತಿನಿಧ್ಯ ನೀಡುವುದು ಅನಿವಾರ್ಯ. ರಾಜ್ಯ ಘಟಕದಲ್ಲೂ ಪದಾಧಿಕಾರಿಗಳ ಮಿತಿಯನ್ನು 100ರೊಳಗೆ ಸೀಮಿತಗೊಳಿಸಬೇಕೆಂದು ನಿಶ್ಚಯಿಸಿದ್ದು, ಇದರಲ್ಲಿ ಶಿಫಾರಸು, ಪ್ರಾತಿನಿಧ್ಯಗಳಿಗೆ ಅವಕಾಶ ನೀಡಬೇಕಾಗುವುದರಿಂದ ಅರ್ಹರು ಮತ್ತು ಅಗತ್ಯ ಇರುವವರನ್ನು ಬಳಸಿಕೊಳ್ಳಲು ಕಷ್ಟವಾಗಲೂ ಬಹುದೆಂಬ ಅಭಿಪ್ರಾಯ ಪಕ್ಷದಲ್ಲಿದೆ.
ಕೇಡರ್ ಬೇಸ್ ಪಕ್ಷ ಕಟ್ಟವುದು ನನ್ನ ಉದ್ದೇಶ. ಈ ದಿಕ್ಕಿನಲ್ಲಿ ಪ್ರಯತ್ನ ಆರಂಭವಾಗಿದೆ. ಕಾರ್ಯಕರ್ತರೇ ಪಕ್ಷದ ಆಸ್ತಿ. ಅವರಿಲ್ಲದಿದ್ದರೆ ಪಕ್ಷ, ನಾಯಕ ಯಾರೂ ಇಲ್ಲ. ಬೇರು ಮಟ್ಟದಿಂದ ಪಕ್ಷ ಬಲಪಡಿಸುವ ಕಾರ್ಯ ಆರಂಭಿಸುತ್ತಿದ್ದೇವೆ.
| ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + two =
Remember me
