ಮಳವಳ್ಳಿ:ಕೆರೆ ಕಾಮೇಗೌಡ ಅವರ ಸಾಧನೆಗಳ ಬಗ್ಗೆ ತನಿಖೆ ನಡೆಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಸೂರಜ್ ತಿಳಿಸಿದ್ದಾರೆ.
ದಾಸನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು. ಕಾಮೇಗೌಡರ ಬಗ್ಗೆ ನೀವು ಹೇಳಿರುವ ಎಲ್ಲ ದೂರುಗಳ ಬಗ್ಗೆ ಪರಿಶೀಲನೆ ನಡೆಸುವುದರ ಜತೆಗೆ ಅವರು ನಿರ್ವಿುಸಿದ್ದಾರೆ ಎನ್ನಲಾಗಿರುವ ಕೆರೆ-ಕಟ್ಟೆಗಳು ಹಾಗೂ ನೆಟ್ಟಿರುವ ಗಿಡಗಳ ಬಗ್ಗೆ ತನಿಖೆ ಮಾಡಲು ತಾಪಂ ಇಒ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಇನ್ನೆರಡು ದಿನಗಳಲ್ಲಿ ರಚಿಸಿ, ವಾಸ್ತವ ವರದಿ ಪಡೆದು ಗ್ರಾಮದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು. ಜತೆಗೆ ಕಾಮೇಗೌಡರ ಹಾಗೂ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಮತ್ತೊಂದು ಸುತ್ತಿನ ಶಾಂತಿಸಭೆ ನಡೆಸುವುದಾಗಿ ಭರವಸೆ ನೀಡಿದರು.
ನಡೆದಿದ್ದು ಕ್ರಾಂತಿ ಸಭೆ?: ಕಾಮೇಗೌಡರ ಸಾಧನೆ ಬಗ್ಗೆ ಮೊದಲು ಸೂಕ್ತ ತನಿಖೆ ನಡೆಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದರು. ಅದರಲ್ಲೂ ಪ್ರೇಮಮ್ಮ ಎಂಬವರು ಕಾಮೇಗೌಡರಿಂದ ತಮಗಾಗಿರುವ ಕಿರುಕುಳವನ್ನು ಕಣ್ಣೀರಿಡುತ್ತಲೇ ಉಪವಿಭಾಗಾಧಿಕಾರಿ ಮುಂದಿಟ್ಟರು. ಸುಮಾರು 200ಕ್ಕೂ ಹೆಚ್ಚು ಜನರಿದ್ದ ಸಭೆಯಲ್ಲಿ ಹಿರಿಯರು-ಕಿರಿಯರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಕಾಮೇಗೌಡ ಮಾಡಿರುವ ಸಾಧನೆಯ ಸತ್ಯಾಸತ್ಯತೆ ಬಗ್ಗೆ ತಾಲೂಕು ಮತ್ತು ಜಿಲ್ಲಾಡಳಿತ ಪರಿಶೀಲಿಸದೆ, ಗ್ರಾಮಸ್ಥರ ಹೇಳಿಕೆಯನ್ನೂ ಪಡೆಯದೆ ಸರ್ಕಾರಕ್ಕೆ ತಪ್ಪು ವರದಿ ನೀಡಲಾಗಿದೆ. ಎಲ್ಲ ಗೊಂದಲಗಳಿಗೆ ನೀವೇ ಕಾರಣ ಎಂದು ಉಪವಿಭಾಗಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿದ್ದ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಆಕ್ರೋಶದಿಂದ ಅಧಿಕಾರಿಗಳ ಮುಂದೆ ಹೇಳಿದರು.
ಕಾಮೇಗೌಡರ ಸೋದರನ ಮಗ ತಿಮ್ಮೇಗೌಡ, ‘ನಮ್ಮ ದೊಡ್ಡಪ್ಪ ಅಲ್ಪ ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ. ಪ್ರಶಸ್ತಿ ಕೊಡಿ ಎಂದು ಎಲ್ಲಿಯೂ ಅರ್ಜಿ ಹಾಕಿರಲಿಲ್ಲ. ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಬದಲಿಗೆ ತಪ್ಪು ಯಾರಿಂದ ಆಗಿದೆಯೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದರು.
ಕಾಮೇಗೌಡರ ಕಾಳಜಿ ಬಹಿರಂಗ, ಗ್ರಾಮಸ್ಥರು ನಿರಾಳ: ಸಾಧನೆ ಬೋಗಸ್ ಎಂದ ಶಾಸಕ ಅನ್ನದಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + one =
Remember me
