ಬೆಂಗಳೂರು:ಓಎಲ್​ಎಕ್ಸ್​ನಲ್ಲಿ 1947ರ ಇಸವಿ 1 ರೂ. ನಾಣ್ಯ ಮಾರಾಟಕ್ಕಿಟ್ಟ ಶಿಕ್ಷಕಿಗೆ ಸೈಬರ್​ ವಂಚಕರು 1 ಕೋಟಿ ರೂ.ಗೆ ಖರೀದಿ ಮಾಡುವ ನೆಪದಲ್ಲಿ 1 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
ಸರ್ಜಾಪುರ ರಸ್ತೆ ವಿಪ್ರೋ ಗೇಟ್​ನಲ್ಲಿ ನೆಲೆಸಿರುವ 38 ವರ್ಷದ ಶಿಕ್ಷಕಿ ವಂಚನೆಗೆ ಒಳಗಾದವರು.
ಶಿಕ್ಷಕಿಯು ಜೂನ್​ 15ರಂದು ಓಎಲ್​ಎಕ್ಸ್​ನಲ್ಲಿ 1947ನೇ ಇಸವಿಯ 1 ರೂ. ನಾಣ್ಯವೊಂದು ಮಾರಾಟಕ್ಕೆ ಇರುವುದಾಗಿ ಜಾಹೀರಾತು ಹಾಕಿ ತನ್ನ ಮೊಬೈಲ್​ ನಂಬರ್​ ಅಪ್​ಲೋಡ್​ ಮಾಡಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ, 1 ರೂ. ನಾಣ್ಯವನ್ನು 1 ಕೋಟಿ ರೂ.ಗೆ ಖರೀದಿ ಮಾಡುವುದಾಗಿ ನಂಬಿಸಿದ್ದ. ಆನಂತರ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ಸ್ಕ್ರೀನ್​ ಶಾಟ್​ ತೆಗೆದು ಶಿಕ್ಷಕಿಗೆ ವಾಟ್ಸ್​ಆ್ಯಪ್​ ಮಾಡಿದ್ದ. ಇದನ್ನು ನಂಬಿದ್ದ ಶಿಕ್ಷಕಿಗೆ ಎಷ್ಟು ಹೊತ್ತಾದರು ಹಣ ಖಾತೆಗೆ ಬಂದಿಲ್ಲ. ಆಗ ಶಿಕ್ಷಕಿ, ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ವಂಚಕ, ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಶುಲ್ಕ ಪಾವತಿ ಮಾಡಬೇಕೆಂದು ನಂಬಿಸಿ ಹಣವನ್ನು ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದಾದ ಮೇಲೆ ಮತ್ತೆ ಆರ್​ಬಿಐ ಶುಲ್ಕ, ತೆರಿಗೆ ಹೀಗೆ ನಾನಾ ನೆಪದಲ್ಲಿ ಹಂತ ಹಂತವಾಗಿ ವಿವಿಧ ಬ್ಯಾಂಕ್​ ಖಾತೆಗೆ 1 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಶಿಕ್ಷಕಿ ಬ್ಯಾಂಕ್​ ಖಾತೆಗೆ ಯಾವುದೇ ಹಣ ವರ್ಗಾವಣೆ ಆಗಿಲ್ಲ. ವಂಚಕ ಮತ್ತೆ ಹಣ ಕೇಳಿದಾಗ ಅನುಮಾನ ಬಂದ ಶಿಕ್ಷಕಿ, ಹಣ ಪಡೆದ ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊವ್ಯಾಕ್ಸಿನ್​ ಶೇ. 77.8ರಷ್ಟು ಪರಿಣಾಮಕಾರಿ; ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ನ ವರದಿ ಸಲ್ಲಿಕೆ

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − four =
Remember me
