ಬೆಂಗಳೂರು:ಕ್ಷುಲ್ಲಕ ಕಾರಣಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ತಲೆಗೆ ರಾಡ್​ನಿಂದ ಹಲ್ಲೆ ಮಾಡಿರುವ ಘಟನೆ ನಗರದ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ನೇಹಾ ಸಿಕ್ತ ಚಟರ್ಜಿ (26) ಎಂಬಾಕೆಯ ಮೇಲೆ ಆಕೆಯ ಪ್ರಿಯಕರ ಪ್ರಿಯತಮ ರವಿಕುಮಾರ್ (28) ಎಂಬಾತ ಹಲ್ಲೆ ಮಾಡಿದ್ದಾರೆ. ಇಬ್ಬರು ಸಹ ಟೆಕ್ಕಿಗಳು. ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ರವಿಕುಮಾರ್​ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಸ್ನೇಹಾ ಇಂಟರ್ನ್ ಆಗಿ ಸೇರಿಕೊಂಡಿದ್ದಳು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿತ್ತು.
ಇತ್ತೀಚೆಗೆ ಸ್ನೇಹಾ ಬೇರೆ ಕಂಪನಿ‌ ಸೇರಿಕೊಂಡಿದ್ದಳು. ರವಿಕುಮಾರ್ ಕರೆ ಮಾಡಿದಾಗಲೆಲ್ಲ ಅದನ್ನು ನಿರ್ಲಕ್ಷಿಸುತ್ತಿದ್ದಳು ಎನ್ನಲಾಗಿದೆ. ಕರೆ ಸ್ವೀಕರಿಸಿದರೂ ಸರಿಯಾಗಿ ಮಾತನಾಡುತ್ತಿಲ್ಲವೆಂದು ಆಕೆಯ ಮೇಲೆ ಕೋಪಗೊಂಡಿದ್ದ. ಅಲ್ಲದೆ, ಆಕೆಯ ನಡೆಯಿಂದ ರವಿಕುಮಾರ್​ ಅನುಮಾನಗೊಂಡಿದ್ದ.
ಇದನ್ನೂ ಓದಿ:ಕಡತದಲ್ಲುಳಿದ ಮೆಗಾ ಟೆಕ್ಸ್ ಟೈಲ್ ಪಾರ್ಕ್ : ಗೊಂದಲದಲ್ಲಿ ಔಟರ್ ರಿಂಗ್ ರೋಡ್ ; ಕಲಬುರಗಿ ಜನರ ಸಮಸ್ಯೆಯತ್ತ ಹರಿಯಲಿ ಸಿಎಂ ಚಿತ್ತ
ಆಗಸ್ಟ್ 2ರ ಬುಧವಾರ ಮುಂಜಾನೆ 3.30ರ ಸುಮಾರಿಗೆ ರವಿಕುಮಾರ್, ತನ್ನ​ ಪ್ರೇಯಸಿಯನ್ನು ಮೈಕೋ ಲೇಔಟ್​ನಲ್ಲಿರುವ ಪಿಜಿ ಬಳಿ ಕರೆಸಿಕೊಂಡಿದ್ದ. ಈ ವೇಳೆ ಕಬ್ಬಿಣದ ರಾಡ್​ನಿಂದ ಸ್ನೇಹಾ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ರಕ್ತಸ್ರಾವ ಸ್ಥಿತಿಯಲ್ಲಿದ್ದ ಸ್ನೇಹಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ನಿಮ್ಹಾನ್ಸ್​ನಲ್ಲಿ ಆಕೆಗೆ‌ ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ರವಿಕುಮಾರ್​ನನ್ನು ಬಂಧಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಅಶ್ಲೀಲ ವಿಡಿಯೋ ಸೃಷ್ಟಿಸಿ ಪ್ರಕರಣ ದಾಖಲಾಗಿದ್ದರೂ ಚಾಳಿ ಬಿಡದ ಕಿರಾತಕರಿಂದ ವಿವಾದ ಸೃಷ್ಟಿಸುವ ಹುನ್ನಾರ?

ಅಂಡರ್​ 21 ಸ್ನೂಕರ್ ವಿಶ್ವ ಚಾಂಪಿಯನ್​ ಶಿಪ್​ ಟೂರ್ನಿಯಲ್ಲಿ ಚಿನ್ನ ಗೆದ್ದ ಕೋಲಾರದ ಯುವತಿಗೆ ಅದ್ಧೂರಿ ಸನ್ಮಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − ten =
Remember me
