ಹುಬ್ಬಳ್ಳಿ:ಲಂಡನ್​​ನಲ್ಲಿ ನೆಲೆಸಿದ್ದ ಹುಬ್ಬಳ್ಳಿ ಮೂಲದ ಟೆಕ್ಕಿಯೋರ್ವ ಅಲ್ಲಿ ಆತ್ಮಹತ್ಯೆ ಮಾಡಿಕೊಂಡು 50 ದಿನಗಳು ಕಳೆದಿವೆ. ಈಗ ಅವರ ಶವವನ್ನು ಭಾರತಕ್ಕೆ ತಂದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಹುಬ್ಬಳ್ಳಿ ನವನಗರದ ಟೆಕ್ಕಿ ಗದಿಗೆಪ್ಪಗೌಡ ಪಾಟೀಲ್​ ಲಂಡನ್​​ನಲ್ಲಿ ಪತ್ನಿ ಶಿವಲೀಲಾ, ಮಗ ಶಿವಾನಂದ್​ ಪಾಟೀಲ್​ ಹಾಗೂ ಪತ್ನಿಯ ಸಹೋದರನೊಂದಿಗೆ ಲಂಡನ್​​ನಲ್ಲಿ ವಾಸವಾಗಿದ್ದರು. ಮಾ.13ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ:ಮತ್ತೊಂದು ದುರಂತ: ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿ ಪಲ್ಟಿ, 5 ಮಂದಿ ಸಾವು
ಹುಬ್ಬಳ್ಳಿಯಲ್ಲಿರುವ ಅವರ ಕುಟುಂಬಸ್ಥರಿಗೆ ಗದಿಗೆಪ್ಪ ಅವರ ಅಂತ್ಯಕ್ರಿಯೆಯನ್ನು ಊರಲ್ಲೇ ಮಾಡಬೇಕು..ಕೊನೇ ಬಾರಿ ಅವರ ಮುಖ ನೋಡಬೇಕು ಎಂಬ ಆಸೆ. ಆದರೆ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ 50 ದಿನಗಳಾದರೂ ಶವವನ್ನು ಹಾಗೇ ಇಡಲಾಗಿದೆ. ಇಂದು ಬೆಂಗಳೂರಿಗೆ ಬರಲಿದ್ದು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಹುಬ್ಬಳ್ಳಿಗೆ ಕೊಂಡೊಯ್ಯಲಾಗುವುದು ಎನ್ನಲಾಗಿದೆ.
ಈಗ ಕೇಂದ್ರ ಸರ್ಕಾರ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್​ ಕರೆತರುವ ಪ್ರಯತ್ನ ಮಾಡುತ್ತಿದೆ. ಗದಿಗೆಪ್ಪ ಪಾಟೀಲ್​ ಅವರ ಕುಟುಂಬದವರೂ ಸಹ 15 ದಿನಗಳ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಬಳಿ ಮನವಿ ಮಾಡಿದ್ದರು. ಕೇಂದ್ರ ಆರೋಗ್ಯ ಇಲಾಖೆ, ಲಂಡನ್​ ಸರ್ಕಾರದ ಜತೆ ಮಾತುಕತೆ ನಡೆಸಿತ್ತು.
ಇದನ್ನೂ ಓದಿ:ವಲಸೆ ಕಾರ್ಮಿಕರನ್ನು ಕದ್ದುಮುಚ್ಚಿ ಕಳಿಸಲು ಪ್ರಯತ್ನಿಸಿ ಸಿಕ್ಕಿಬಿದ್ದ ಗ್ರಾಪಂ ಉಪಾಧ್ಯಕ್ಷ
ಇದೀಗ ಮೃತದೇಹವನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಹಾಗೇ ಗದಿಗೆಪ್ಪ ಅವರ ಪತ್ನಿ, ಮಗು ಕೂಡ ಭಾರತಕ್ಕೆ ಬರಲಿದ್ದಾರೆ.
ಪಿಯುಸಿವರೆಗಿನ ಪಾಠ ಇನ್ಮುಂದೆ ಮನೆಯಲ್ಲಿಯೇ ಉಚಿತವಾಗಿ ಕಲಿಯಬಹುದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
