ಬೆಂಗಳೂರು: ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಆನ್​ಲೈನ್ ಪಾಠಕ್ಕೆ ಅಥವಾ ಬೋಧನೆಗೆ ಆದ್ಯತೆ ನೀಡುವಂತೆ ಸರ್ಕಾರ ಹಾಗೂ ವಿವಿಧ ಶಿಕ್ಷಣ ಮಂಡಳಿಗಳು ಬೋಧಕರಿಗೆ ಮನವಿ ಮಾಡುತ್ತಿವೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ತಾಂತ್ರಿಕ ಶಿಕ್ಷಣ ಇಲಾಖೆ, ಲಾಕ್​ಡೌನ್​ ಅವಧಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಇಂಜಿನಿಯರಿಂಗ್​ ಹಾಗೂ ಪಾಲಿಟೆಕ್ನಿಕ್​ಗಳು ಕಾಲೇಜುಗಳ ಬೋಧಕರು ನಡೆಸಿದ ಆನ್​ಲೈನ್​ ತರಗತಿಗಳ ವಿವರವನ್ನು ನೀಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಆ ಮೂಲಕ ರಜಾ ಅವಧಿಯಲ್ಲೂ ಅವರ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿದೆ.
ಉಳಿದ ಶಾಲಾ- ಕಾಲೇಜುಗಳಿಗೆ ಹೋಲಿಸಿದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಆನ್​ಲೈನ್​ ತರಗತಿಗಳನ್ನು ನಡೆಸಲು ಅಗತ್ಯ ಮೂಲಸೌಕರ್ಯ ಹೊಂದಿವೆ. ಜತೆಗೆ, ವಿದ್ಯಾರ್ಥಿಗಳಲ್ಲೂ ಕಂಪ್ಯೂಟರ್​, ಲ್ಯಾಪ್​ಟಾಪ್​ ಹೊಂದಿರುತ್ತಾರೆ. ಇದಲ್ಲದೇ, ರಜೆಯ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕೆಂದು ಈಗಾಗಲೇ ಸರ್ಕಾರವೂ ನಿದೇರ್ಶನಗಳನ್ನು ನೀಡಿದೆ. ಹೀಗಾಗಿ ಆನ್​ಲೈನ್​ ತರಗತಿಗಳನ್ನು ನಡೆಸುವುದು ಅನಿವಾರ್ಯವಾಗಿದೆ.ಇಲಾಖೆ ಅಧೀನದಲ್ಲಿ 85 ಸರ್ಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಗಳು, 13 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು 9 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳಿವೆ.
ಆನ್​ಲೈನ್​ ತರಗತಿ ನಡೆಸಿ ಬೋಧಕರ ಹೆಸರು, ಹುದ್ದೆ, ಕಾಲೇಜು, ಭಾಗವಹಿಸಿದ ವಿದ್ಯಾರ್ಥಿಗಳು, ಕೋರ್ಸ್​, ವಿಷಯ, ಸಮಯ ಹಾಗೂ ಇದಕ್ಕಾಗಿ ಬಳಸಿದ ಮಾಧ್ಯಮ (ಆ್ಯಪ್​) ಮೊದಲಾದವುಗಳ ವಿವರವನ್ನು ಆನ್​ಲೈನ್​ನಲ್ಲಿಯೇ ಪಡೆಯಲು ತಂತ್ರಾಂಶ ರೂಪಿಸಿದೆ. ಅದನ್ನು ಭರ್ತಿ ಮಾಡಿ ಸಲ್ಲಿಸುವಂತೆ ಕಾಲೇಜು ಹಾಗೂ ಬೋಧಕರಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ರಜಾ ಅವಧಿಯಲ್ಲೂ ಬೋಧಕರ ಕಾರ್ಯ ನಿರ್ವಹಣೆಯ ಮೇಲೆ ನಿಗಾ ವಹಿಸುತ್ತಿದೆ.
ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಯುಪಿಎಸ್​ಸಿಯಿಂದ ಸಿಎಂಎಸ್​ ನೇಮಕಾತಿ ಅಧಿಸೂಚನೆ ವಿಳಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 15 =
Remember me
