ಬೆಂಗಳೂರು:ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆತನ ಸಂಬಂಧಿಕರೇ ಕಿಡ್ನಾಪ್ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕ ಶಶಾಂಕ್​(19) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯೂ ಜುಲೈ 16ರಂದು ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿ ನಡೆದಿತ್ತು. ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಕಿಡ್ನ್ಯಾಪ್​ ಮಾಡಿ ಯುವತಿ ದೊಡ್ಡಪ್ಪ ಮಹೇಶ್​ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ.
ಬಳಿಕ ಮಣ್ಣಿನಲ್ಲಿ ಹೊರಳಾಡಿ ಬೆಂಕಿ ನಂದಿಸಿಕೊಂಡಿದ್ದ ಶಶಾಂಕ್‌. ಬ್ಯಾಗ್​ನಲ್ಲಿದ್ದ ಮೊಬೈಲ್‌ ತೆಗೆದು ಅತ್ತೆಗೆ ಕರೆ ಮಾಡಿ ತನ್ನ ಅತ್ತೆಗೆ ವಿಚಾರವನ್ನು ತಿಳಿಸಿದ್ದ. ಗಾಯಾಳು ಶಶಾಂಕ್​ನನ್ನು ಅವರ ಅತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.
ಶೇ. 85ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಶಶಾಂಕ್​ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕುಂಬಳಗೋಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸೂತಕದ ಸಂಪ್ರದಾಯ; ಬಾಣಂತಿಯನ್ನು ಊರಿನಿಂದ ಹೊರಗಿಟ್ಟ ಸಮುದಾಯ
ಶಶಾಂಕ್‍, ತನ್ನ ಸಂಬಂಧಿಕರ ಮಗಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಈ ವಿಚಾರ ಯುವತಿಯ ಮನೆಯವರಿಗೆ ಇತ್ತೀಚೆಗಷ್ಟೇ ತಿಳಿದಿದ್ದು ವಿರೋಧ ವ್ಯಕ್ತವಾಗಿತ್ತು. ಯುವತಿ, 11ನೇ ತಾರೀಕಿನಂದು ಮೈಸೂರಿನಿಂದ ಬೆಂಗಳೂರಿಗೆ ಒಬ್ಬಳೇ ಬಂದಿದ್ದು ಶಶಾಂಕ್ ಮನೆಗೆ ತೆರಳಿದ್ದಳು. ಈ ವಿಚಾರ ಗೊತ್ತಾಗಿ ಶಶಾಂಕ್ ಯುವತಿಯ ಮನೆಯವರು ಮನೆಗೆ ಬಂದಿದ್ದರು ಎನ್ನಲಾಗಿದೆ.
ಇವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಶಶಾಂಕ್ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕರೆದೊಯ್ದಿದ್ದಾರೆ. ನಂತರ ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದು ಇನೋವಾ ಕಾರಿನಲ್ಲಿ ಶಶಾಂಕನನ್ನು ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರೆ. ನಂತರ, ಈ ದುಷ್ಕರ್ಮಿಗಳು ಕುಂಬಳಗೋಡು ಕಡೆ ಕರೆದೊಯ್ದು ಪೆಟ್ರೋಲ್ ಹಾಕಿ ಯುವಕನನ್ನು ಸುಟ್ಟಿದ್ದಾರೆ. ಈ ವಿಚಾರವಾಗಿ ಶಶಾಂಕ್ ಅಜ್ಜಿ ಜಯಲಕ್ಷ್ಮಿ ಹೇಳಿಕೆ ನೀಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
