ನವದೆಹಲಿ:ಕೆಲ ದಿನಗಳ ಹಿಂದೆ ವಿಧಾನಪರಿಷತ್​ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಶಾಕ್​ ನೀಡಿದ್ದ ತೇಜಸ್ವಿನಿ ಗೌಡ ಶನಿವಾರ (ಮಾರ್ಚ್​ 30) ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹಿರಿಯ ಕಾಂಗ್ರೆಸ್​ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್​ ಸೇರ್ಪಡೆಯಾದ ಬಳಿಕ ಮಾತನಾಡಿದ ತೇಜಸ್ವಿನಿ, ಸಾಮಾನ್ಯ ಪತ್ರಕರ್ತೆಯಾಗಿದ್ದ ನಾನು 2004ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಅಂದು ನನ್ನನ್ನು ನಂಬಿ ಟಿಕೆಟ್ ಕೊಟ್ಟು ದೇವೇಗೌಡ ಅವರ ವಿರುದ್ಧ ಸ್ಪರ್ಧೆ ಮಾಡಲು ಹೇಳಿದ್ದರು. ಕರ್ನಾಟಕದ ಜನರು ಹಾಗೂ ಕನಕಪುರ ಜನರು ಪತ್ರಕರ್ತೆಯಾಗಿ ನಾನು ಮಾಡಿದ ಕೆಲಸವನ್ನು ಗುರುತಿಸಿ ಅಂದು ನನ್ನನ್ನು ಆಯ್ಕೆ ಮಾಡಿದ್ದರು
ಇಂದು ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ, ಸುರ್ಜೆವಾಲಾ ಮತ್ತು ಜೈ ರಾಮ್ ರಮೇಶ್ ಅವರು ಪಕ್ಷ ಸಂಘಟನೆಯಾಗಿ ದುಡಿಯುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷ 136 ಸೀಟು ಗೆದ್ದು ಅಧಿಕಾರಕ್ಕೆ ಬಂದಿದೆ. ಇಂತಹ ಹೈ ಟೈಮ್​​ನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ.
LIVE: Eminent personality joins the Indian National Congress at the AICC HQ, New Delhi.https://t.co/PxWalsTp9w
ಇದನ್ನೂ ಓದಿ:ಕೆಕೆಆರ್​ ವಿರುದ್ಧ 7 ವಿಕೆಟ್​ಗಳ ಸೋಲು; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ
ಏಕೆಂದರೆ ನಾನು 10 ವರ್ಷಗಳ ಕಾಲ ಕಾಂಗ್ರೆಸ್​ ಪಕ್ಷದಲ್ಲಿದ್ದೆ, ಆ ವೇಳೆ ಮೂರು ಬಾರಿ ಚುನಾವಣೆ ಎದುರಿಸಿದ್ದೇನೆ. ಅಂದು ನಾನು ಸ್ಪರ್ಧೆ ಮಾಡಿದ ವೇಳೆ ಕಾರ್ಯಕರ್ತರೇ ಡೆಪೋಸಿಟ್ ಕಟ್ಟಿದ್ದರು. ಆದರೆ ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಮೋದಿ ವಿಶ್ವದೆಲ್ಲೆಡೆ ಖ್ಯಾತಿ ಪಡೆದಿದ್ದಾರೆ ಅಂತ ಹೇಳ್ತೀರಿ, ಆದರೆ ಹಾಲಿ ಸಂಸದರಿಗೆ ಏಕೆ ಟಿಕೆಟ್ ಕೊಟ್ಟಿಲ್ಲ. ಸಂಸತ್ ಮೇಲೆ ದಾಳಿ ಆಯ್ತು, ಅಂದು ಪಾಸ್ ಕೊಟ್ಟಿದ್ದ ಸಂಸದರನ್ನು ರಕ್ಷಣೆ ಮಾಡಿದ್ದೀರಿ. ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದರೇ, ಆ ಭಾಗದಲ್ಲಿ ಕೆಲಸ ಮಾಡಿದ್ದ ನನಗೆ ಟಿಕೆಟ್ ಕೊಡಿ ಅಂತ ಹೇಳಿದ್ದೆ. ಆದರೆ ರಾಜರಿಗೆ ಈಗ ಟಿಕೆಟ್ ಕೊಟ್ಟಿದ್ದಾರೆ ಒಳ್ಳೆದಾಗಲಿ.
ನಾನು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ, ಪಕ್ಷದಲ್ಲಿ ಕೆಲಸ ಮಾಡಲು ಬಂದಿದ್ದೇನೆ. ಭಾರತೀಯರ ಕನಸು ನನಸು ಮಾಡುವ ಕೆಲಸವನ್ನು ಮಾಡೋಣಾ. ಈ ವೇಳೆ ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರಿಯಾಂಕಾ ಗಾಂಧಿ ಅವರು ಮಹಿಳೆಯರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ ಎಂದು ತೇಜಸ್ವಿನಿ ಗೌಡ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + five =
Remember me
