ಬೆಂಗಳೂರು:ಅನ್ನಭಾಗ್ಯ ಯೋಜನೆ ಅಕ್ಕಿ ಪೂರೈಕೆಗೆ ಸಂಬಂಧಿಸಿ ಕೇಂದ್ರ ಸರ್ಕಾರದೊಂದಿಗೆ ಜಟಾಪಟಿ ನಡುವೆಯೇ ತೆಲಂಗಾಣದ ಕಡೆಯಿಂದ ರಾಜ್ಯಕ್ಕೆ ಶುಭ ಸುದ್ದಿ ಸಿಕ್ಕಿದೆ.
ಪಂಜಾಬ್ ಅಕ್ಕಿಯ ಕಣಜ ಎಂದೇ ಹೆಸರಾಗಿತ್ತು. ಆದರೆ, ಇದೀಗ ತೆಲಂಗಾಣದಲ್ಲಿಯೂ ಭತ್ತ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆ ರಾಜ್ಯವನ್ನು ಸಹ ಅಕ್ಕಿಯ ಕಣಜವೆಂದೇ ಕರೆಯಲಾಗುತ್ತಿದೆ. ತೆಲಂಗಾಣದಲ್ಲಿ ಸಾಕಷ್ಟು ಅಕ್ಕಿಯ ದಾಸ್ತಾನು ಇರುವುದರಿಂದ ರಾಜ್ಯಕ್ಕೆ ಬೇಕಾಗುವಷ್ಟು ನೀಡಲು ಮುಂದೆ ಬಂದಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.
ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಸಿಗುವುದಿಲ್ಲವೆಂಬುದು ಖಚಿತವಾಗುತ್ತಿದ್ದಂತೆ ರಾಜ್ಯ ಸರ್ಕಾರ ತೆಲಂಗಾಣ, ಛತ್ತೀಸ್​ಘಡ, ಪಂಜಾಬ್ ಸೇರಿದಂತೆ ಭತ್ತ ಹೆಚ್ಚಾಗಿ ಬೆಳೆಯುವ ರಾಜ್ಯಗಳನ್ನು ಸಂರ್ಪಸಿತ್ತು. ತೆಲಂಗಾಣ ಹಾಗೂ ಛತ್ತೀಸ್​ಘಡ ಕಡೆಯಿಂದ ಪೂರಕ ಸ್ಪಂದನೆ ಕಂಡುಬಂದಿತ್ತು. ತೆಲಂಗಾಣವಾದರೆ ಸಾಗಾಟ ವೆಚ್ಚ ಕಡಿಮೆಯಾಗಲಿದೆ.
ಕೇಂದ್ರದಿಂದ ಎಷ್ಟು ಅಕ್ಕಿ ಸಿಗುತ್ತಿದೆ?:ಕೇಂದ್ರ ಸರ್ಕಾರ 2013 ರಲ್ಲಿ ರೂಪಿಸಿದ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ರಾಜ್ಯಕ್ಕೆ ತಿಂಗಳಿಗೆ 2.29 ಲಕ್ಷ ಟನ್ ಅಕ್ಕಿಯನ್ನು ಸರಬರಾಜು ಮಾಡಬೇಕು. ಕಾರ್ಡದಾರರ ಪೈಕಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿಯಂತೆ ನೀಡಲಾಗುತ್ತದೆ.
ವರ್ಷಕ್ಕೆ 25.56 ಲಕ್ಷ ಟನ್​ಗಳನ್ನು ರಾಜ್ಯಕ್ಕೆ ಆಹಾರ ಭದ್ರತಾ ಕಾಯ್ದೆಯಡಿ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 1.14 ಕೋಟಿ ಬಿಪಿಎಲ್ ಕಾರ್ಡದಾರರಿದ್ದಾರೆ. ಅದರಲ್ಲಿ, ಕೇಂದ್ರ ಬಿಪಿಎಲ್ ಪಟ್ಟಿಯಲ್ಲಿ ಇಲ್ಲದ 14.90 ಲಕ್ಷ ಕಾರ್ಡಗಳ ಅಂದಾಜು 40 ಲಕ್ಷ ಜನರಿಗೆ ರಾಜ್ಯ ಸರ್ಕಾರ ಖರೀದಿ ಮಾಡಿ ಅಕ್ಕಿ ಸರಬರಾಜು ಮಾಡುತ್ತಿದೆ.
ತೆಲಂಗಾಣದಲ್ಲಿ ಇದೆ ಅಕ್ಕಿ:ತೆಲಂಗಾಣದಲ್ಲಿ ಕಳೆದ ಎರಡು ವರ್ಷದಿಂದ ಬಂಪರ್ ಬೆಳೆ ಬರುತ್ತಿದೆ. ಆದ್ದರಿಂದ ಅಲ್ಲಿ ಹೆಚ್ಚುವರಿಯಾಗಿ ಅಂದಾಜು 36 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿರುವ ಮಾಹಿತಿ ಇದೆ. ಖರೀದಿ ಮಾಡುವಂತೆ ತೆಲಂಗಾಣ ಸರ್ಕಾರ ಕೇಂದ್ರ ಆಹಾರ ನಿಗಮಕ್ಕೆ ಮನವಿ ಮಾಡಿತ್ತು. ಆದರೆ, ಖರೀದಿಸದ ಕಾರಣ ದಾಸ್ತಾನು ಉಳಿದಿದೆ. ರಾಜ್ಯ ಸರ್ಕಾರ ಮನವಿ ಮಾಡಿದಾಗ ಅಕ್ಕಿ ಸರಬರಾಜಿಗೆ ಅಲ್ಲಿನ ಸರ್ಕಾರ ಒಪ್ಪಿದೆ ಎಂದು ಮೂಲಗಳು ಖಚಿತಪಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿಗಾಗಿ ನಡೆಸಿರುವ ಮಾತುಕತೆಯನ್ನು ಅಲ್ಲಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಧಿಕಾರಿಗಳ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೇಂದ್ರಕ್ಕೆ ನೀಡಬೇಕಿದ್ದ ದರವೇ ನಿಗದಿ:ಕೇಂದ್ರ ಸರ್ಕಾರದಿಂದ ಯಾವ ದರದಲ್ಲಿ ಅಕ್ಕಿ ಖರೀದಿ ಮಾಡಬೇಕಾಗಿತ್ತೋ ಅದೇ ದರದಲ್ಲಿಯೇ ತೆಲಂಗಾಣ ಸಹ ನೀಡಲಿದೆ ಎಂದು ಮೂಲಗಳು ಹೇಳುತ್ತವೆ. ಕೇಂದ್ರದಿಂದ ಪ್ರತಿ ಕೆಜಿಗೆ 34 ರೂ.ನಂತೆ ಖರೀದಿ ಮಾಡಲಾಗುತ್ತದೆ. ಅದೇ ದರದಲ್ಲಿಯೇ ನೀಡಲು ತೆಲಂಗಾಣ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ. ಸಾಗಣೆ ವೆಚ್ಚ ಪ್ರತಿ ಕೆಜಿಗೆ 1 ರೂ. ಆಗಬಹುದೆಂದು ಅಂದಾಜು ಮಾಡಲಾಗುತ್ತಿದೆ. ತೆಲಂಗಾಣದಿಂದ ರಾಜ್ಯದ ಗಡಿ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿತ್ತು ಅಕ್ಕಿ:ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಆಹಾರ ನಿಗಮದ ಗೋದಾಮುಗಳಲ್ಲಿ ಅಂದಾಜು 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿರುವ ಅಂದಾಜು ಇದೆ.
ಮುಕ್ತ ಮಾರುಕಟ್ಟೆ ಇಲ್ಲ:ತೆಲಂಗಾಣ, ಛತ್ತೀಸ್​ಘಡದಲ್ಲೂ ಲಭ್ಯವಾಗದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಇದೀಗ ತೆಲಂಗಾಣದಿಂದ ಸಿಗುತ್ತಿರುವುದರಿಂದ ಮುಕ್ತ ಮಾರುಕಟ್ಟೆಗೆ ಹೋಗುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ.
ಹೆಚ್ಚುವರಿ ಎಷ್ಟು ಬೇಕು?:ಕೇಂದ್ರದಿಂದ ರಾಜ್ಯ ಹೆಚ್ಚುವರಿಯಾಗಿ ಕೇಳಿರುವುದು ವರ್ಷಕ್ಕೆ 1.66 ಲಕ್ಷ ಟನ್ ಎಂದು ಮೂಲಗಳು ಹೇಳುತ್ತವೆ. ಪ್ರತಿ ತಿಂಗಳು 13,819.5 ಟನ್ ಹೆಚ್ಚುವರಿ ಅಕ್ಕಿ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
ಎಷ್ಟು ವೆಚ್ಚವಾಗುತ್ತದೆ?:ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಸರಬರಾಜು ಮಾಡುವ ಸಂದರ್ಭದಲ್ಲಿ ವಾರ್ಷಿಕ ಅಂದಾಜು -ಠಿ;4,500 ಕೋಟಿ ಬೇಕಿತ್ತು. ಈಗ 9,600 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ತೆಲಂಗಾಣದಿಂದ ಖರೀದಿ, ಸಾಗಣೆ ವೆಚ್ಚ ಸೇರಿದಂತೆ ಒಟ್ಟಾರೆ -ಠಿ;10,000 ಕೋಟಿಗೆ ಮುಟ್ಟಬಹುದೆಂದು ಹೇಳಲಾಗುತ್ತಿದೆ.
ಎಫ್​ಸಿಐ ಪತ್ರ ಪ್ರದರ್ಶನ:ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಕ್ಕಿ ಕೊಡುತ್ತಿಲ್ಲವೆಂದು ಆರೋಪ ಮಾಡುತ್ತಿದ್ದಂತೆ ಬಿಜೆಪಿಯ ಮುಖಂಡರು ಕೇಂದ್ರದಿಂದ ಆ ರೀತಿಯ ಪತ್ರ ಬಂದಿದ್ದರೆ ತೋರಿಸಿ ಎಂಬ ಸವಾಲು ಹಾಕಿದ್ದರು. ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೇಂದ್ರ ಆಹಾರ ನಿಗಮ ಬರೆದಿರುವ ಪತ್ರವನ್ನು ಪ್ರದರ್ಶಿಸಿದ್ದಾರೆ.
ಬೆಂಗಳೂರು: ಹೆಚ್ಚುವರಿ ಅಕ್ಕಿ ಕೊಡದ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ನಿರ್ಧರಿಸಿದೆ. ಮಂಗಳವಾರ (ಜೂ.20) ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ರಾಜ್ಯ ಉಚಿತವಾಗಿ ಅಕ್ಕಿಯನ್ನು ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಸಂಸದರಿಗೂ ಪತ್ರ ಬರೆಯಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್​ನ ದುರಾಡಳಿತಕ್ಕೆ ಅವಕಾಶ ನೀಡುವುದಿಲ್ಲ. ಒಂದು ಸಮುದಾಯದ ಓಲೈಕೆಗೆ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲಾಗುತ್ತಿದೆ. ದಲ್ಲಾಳಿಗಳ ಲಾಭಕ್ಕೆ ಎಪಿಎಂಸಿ ಕಾಯ್ದೆ ರದ್ದು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು. 19ಕ್ಕೆ ಇದರ ರೂಪುರೇಷೆ ನಿರ್ಧಾರವಾಗಲಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಇದು ದೇಶದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲೇ ಪ್ರಥಮ: ಈ ಆಸ್ಪತ್ರೆಯ ವೈದ್ಯರು ದೇಹದೊಳಗೇ ಓಡಾಡಿ ಪರೀಕ್ಷಿಸುತ್ತಾರೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
