ವಿಲಾಸ ಮೇಲಗಿರಿ ಬೆಂಗಳೂರು
ಕೋವಿಡ್-19 ನಿಯಂತ್ರಣ, ಜನಜಾಗೃತಿ, ಚಿಕಿತ್ಸಾ ವಿಧಾನ, ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯ ವೈಶಿಷ್ಟ್ಯ ಮೆರೆದಿದೆ. ಸರ್ಕಾರಿ ವಲಯದಲ್ಲಿ ಟಿಕ್​ಟಾಕ್ ಮೂಲಕ ಜನರಿಗೆ ಕರೊನಾ ಸೋಂಕು ಕುರಿತು ಮಾಹಿತಿ ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅದಕ್ಕೂ ವಿಭಿನ್ನವಾಗಿ ಟೆಲಿ ಐಸಿಯು ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಇಡೀ ದೇಶಕ್ಕೆ ರಾಜ್ಯ ಮಾದರಿಯಾಗಿದೆ. ರಾಜ್ಯದಲ್ಲಿ ಕೋವಿಡ್ -19ಕ್ಕೆಂದೇ ಪ್ರತ್ಯೇಕ 31 ಆಸ್ಪತ್ರೆ ತೆರೆಯಲಾಗಿದೆ. ಈ ಆಸ್ಪತ್ರೆಗಳಲ್ಲಿ 5,786 ಹಾಸಿಗೆ ಮೀಸಲಿರಿಸಲಾಗಿದೆ. ಇಲ್ಲಿ 268 ಕರೊನಾ ಸೋಂಕಿತರು ದಾಖಲಾಗಿದ್ದಾರೆ. ಈ ಪೈಕಿ ಕರೊನಾ ವೈರಸ್ ಸೋಂಕಿನ ಜತೆಗೆ ಟಿಬಿ, ಎಚ್​ಐವಿ, ಅಸ್ತಮಾ, ಕಿಡ್ನಿ, ಲಿವರ್, ಕ್ಯಾನ್ಸರ್.. ಹೀಗೆ ಹಲವು ಹತ್ತು ಕಾಯಿಲೆ ಉಳ್ಳ 83ಕ್ಕೂ ಹೆಚ್ಚು ಹೈ ರಿಸ್ಕ್ ರೋಗಿಗಳು ದಾಖಲಾಗಿದ್ದಾರೆ.
ಈ ರೋಗಿಗಳಿಗೆ ಕರೊನಾ ಸೋಂಕಿನ ಜತೆಗೆ ಮೊದಲಿದ್ದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸ. ಈ ರೀತಿಯ ರೋಗಿಗಳ ಚಿಕಿತ್ಸೆಗೆ ಬಹುವಿಧದ ಚಿಕಿತ್ಸಾ ಪದ್ಧತಿ ಅಳವಡಿಕೆ ಅವಶ್ಯ. ಅದಕ್ಕೆ ಪೂರಕವಾಗಿ ಬಹುಮುಖ ಪ್ರತಿಭೆಯ ತಜ್ಞ ವೈದ್ಯರೂ ಅಗತ್ಯ. ರಾಜ್ಯದ ಮೂಲೆ ಮೂಲೆಯಲ್ಲಿರುವ ಹೈ ರಿಸ್ಕ್ ರೋಗಿಗಳಿಗೆ ಸೂಪರ್ ಸ್ಪೆಷಾಲಿಟಿ ಮತ್ತು ಏಕರೂಪದ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಟೆಲಿ ಐಸಿಯು ಅದ್ವಿತೀಯ ಸೌಲಭ್ಯ ಒದಗಿಸುತ್ತಿದೆ. ಇದು ಈಗ ದೇಶಕ್ಕೇ ಮಾದರಿಯಾಗಿದೆ. ಕೇಂದ್ರ ಸರ್ಕಾರದ ಡಾ.ಅವದೇಶ್ ಕುಮಾರ್ ಮತ್ತು ಡಾ.ಆರ್.ಕೆ. ಗುಪ್ತಾ ನೇತೃತ್ವದ ತಜ್ಞರ ತಂಡ ಭೇಟಿ ನೀಡಿ ಶಹಬ್ಬಾಶ್ ಗಿರಿ ನೀಡಿದೆಯಲ್ಲದೆ, ಈ ವಿನೂತನ ವಿಧಾನವನ್ನು ಬೇರೆ ರಾಜ್ಯಗಳು ಅನುಸರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಏನು ವಿಶೇಷತೆ?: ಪ್ರತಿಷ್ಠಿತ ಆಸ್ಪತ್ರೆಗಳಾದ ಮಣಿಪಾಲ್ ಮತ್ತು ಕೊಲಂಬಿಯಾ ಏಷ್ಯಾ ಜತೆ ಒಡಂಬಡಿಕೆ ಮಾಡಿಕೊಂಡು ಅಲ್ಲಿನ ತಜ್ಞ ವೈದ್ಯರಿಂದ ರಾಜ್ಯದ ಬೇರೆ ಬೇರೆ ಆಸ್ಪತ್ರೆಗಳಲ್ಲಿರುವ ಹೈ ರಿಸ್ಕ್ ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರಿಗೆ ವೀಡಿಯೊ ಕಾನ್ಪರೆನ್ಸ್ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಈ ಕೇಂದ್ರದಲ್ಲಿ ಕಿಮ್ಸ್, ಎಂ.ಎಸ್. ರಾಮಯ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳ ತಜ್ಞ ವೈದ್ಯರು ದಿನದ 24 ಗಂಟೆಯೂ 3 ಸರದಿಯಲ್ಲಿ ಉಪಸ್ಥಿತರಿದ್ದು ಎಲ್ಲ ಕೋವಿಡ್-19 ಆಸ್ಪತ್ರೆಗಳ ಜತೆಗೆ ಕೋ-ಆರ್ಡಿನೇಟ್ ಮಾಡಿ ಚಿಕಿತ್ಸಾ ವ್ಯವಸ್ಥೆ ದೊರಕಿಸಿ ಕೊಡುತ್ತಾರೆ. ಈ ಕೇಂದ್ರ ಆನಂದರಾವ್ ವೃತ್ತದ ಗ್ರಾಮೀಣಾಭಿವೃದ್ಧಿ ಭವನದಲ್ಲಿ ಕಾರ್ಯಾಚರಣೆ ಮಾಡುತ್ತದೆ.
ಅನುಕೂಲಗಳೇನು?
ಕರೋನಾ ಸೋಂಕಿತ ರೋಗಿಗಳಿಗೆ ಉನ್ನತ ಮಟ್ಟದ ಮತ್ತು ಏಕರೂಪದ ಚಿಕಿತ್ಸೆ ದೊರೆಯುತ್ತದೆ.
ಸಾವು ಸಂಭವಿಸದಂತೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ, ಕೋವಿಡ್-19 ಆಸ್ಪತ್ರೆಗಳ ಜತೆ ಸಂಪರ್ಕ ಸಾಧಿಸಿ ಸಲಹೆ-ಸೂಚನೆ ನೀಡಲಾಗುತ್ತದೆ.
ದಿನದ 24 ಗಂಟೆ ಕಾರ್ಯನಿರ್ವಹಣೆ
6ಕ್ಕೂ ಹೆಚ್ಚು ವಿಭಾಗಗಳ ತಜ್ಞ ವೈದ್ಯರ ಮಾರ್ಗದರ್ಶನ, ರೋಗಿ ದಾಖಲಾದ ದಿನದಿಂದ ಬಿಡುಗಡೆ ತನಕ ನಿಗಾ.
ಮಹಾರಾಷ್ಟ್ರದ ವಸತಿ ಸಚಿವರಿಗೂ ಕರೊನಾ ಸೋಂಕು; ಏ.13ರಿಂದಲೇ ಕ್ವಾರಂಟೈನ್​ನಲ್ಲಿದ್ರು ಜಿತೇಂದ್ರ ಅವದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 2 =
Remember me
