ಬೆಂಗಳೂರಿನ ಭಾರತೀಯ ದೂರವಾಣಿ ಉದ್ಯಮ ನಿಗಮದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಸ್ಥೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಭಾರತೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬೆಂಗಳೂರಿನವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಐದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಹುದ್ದೆಗಳ ವಿವರ:ಕಾರ್ಪೋರೇಟ್​ ವಿಜಿಲೆನ್ಸ್​ ವಿಭಾಗದಲ್ಲಿ ಕೆಲಸ ಮಾಡಲು ಕನ್ಸಲ್​ಟೆಂಟ್ಸ್​-2, ಮೆಡಿಕಲ್​ ಸರ್ವೀಸ್​ (ಜಿಎಂ/ಎಜಿಎಂ)-1, ಜನರಲ್​ ಮ್ಯಾನೇಜರ್​ ಆರ್​ ಆ್ಯಂಡ್​ ಡಿ-1, ಮ್ಯಾನೇಜರ್​/ಚೀಫ್​ ಮ್ಯಾನೇಜರ್​/ಮಟೀರಿಯಲ್​ ಮ್ಯಾನೇಜ್​ಮೆಂಟ್​-3, ಮ್ಯಾನೇಜರ್​ (ಡೇಟಾ ಸೆಂಟರ್​)-1, ಮ್ಯಾನೇಜರ್​ (ಸೈಬರ್​ ಸೆಕ್ಯುರಿಟಿ)-1 ಮತ್ತು ಚೀಫ್​ ಮ್ಯಾನೇಜರ್​ (ಡೇಟಾ ಸೆಂಟರ್​ ಸೇಲ್ಸ್​ ಆ್ಯಂಡ್​ ಮಾರ್ಕೆಟಿಂಗ್​)-1 ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ:ಕನ್ಸಲ್​ಟೆಂಟ್ಸ್​ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಪಡೆದಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್​/ಸ್ನಾತಕೋತ್ತರ ಪದವಿ/ಬಿಇ/ಎಂಬಿಎ/ಡಿಪ್ಲೊಮಾ ಪದವಿ ಕೇಳಲಾಗಿದೆ. ಸಾಮಾನ್ಯ ಅಭ್ಯರ್ಥಿಗೆ ಶೇ.60 ಅಂಕ ಕೇಳಲಾಗಿದ್ದು, ಮೀಸಲಾತಿ ಅಭ್ಯರ್ಥಿಗೆ ಅಂಕದಲ್ಲಿ ಸಡಿಲಿಕೆ ಇದೆ. ಎಲ್ಲ ಹುದ್ದೆಗಳಿಗೂ ನಾಲ್ಕರಿಂದ ಹತ್ತು ವರ್ಷ ವೃತ್ತಿ ಅನುಭವ ಕೇಳಲಾಗಿದೆ. ಹಾರ್ಡ್​ವೇರ್​, ಸಾಫ್ಟ್​ವೇರ್​, ನೆಟ್​ವರ್ಕ್​ ಸೇರಿ ಇತರ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗಿದೆ.
ವಯೋಮಿತಿ:ಕನ್ಸಲ್​ಟೆಂಟ್ಸ್​ ಹುದ್ದೆಗೆ 19.4.2022ಕ್ಕೆ ಅನ್ವಯವಾಗುವಂತೆ 62 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಉಳಿದ ಹುದ್ದೆಗಳಿಗೆ 40ರಿಂದ 52 ವರ್ಷ ವಯೋಮಿತಿ ಇದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗೆ 10 ವರ್ಷ ಮತ್ತು ಇತರ ಅಭ್ಯರ್ಥಿಗೆ 3 ವರ್ಷ ವಯೋಸಡಿಲಿಕೆ ಇದೆ.
ವೇತನ:ಕನ್ಸಲ್​ಟೆಂಟ್ಸ್​ಗಳಿಗೆ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಮತ್ತು ಹಳೆಯ ವೇತನದ ಆದಾರದ ಮೇಲೆ ಮಾಸಿಕ ವೇತನ ನಿಗದಿಪಡಿಸಲಾಗುವುದು. ಜಿಎಂ ಹುದ್ದೆಗೆ 1,04,898, ಎಜಿಎಂ ಹುದ್ದೆಗೆ 94,664, ಡಿಜಿಎಂಗೆ 89,547, ಸಿಎಂಆರ್​ ಹುದ್ದೆಗೆ 81,872, ಮ್ಯಾನೇಜರ್​ಗೆ 74, 196, ಡಿವೈ ಮ್ಯಾನೇಜರ್​ಗೆ 66,521 ರೂ. ಮಾಸಿಕ ವೇತನದೊಂದಿಗೆ ಮೆಡಿಕಲ್​, ಇನ್ಶುರೆನ್ಸ್​, ಮ್ಯಾಗಜಿನ್​, ಕ್ಯಾಂಟೀನ್​ ಭತ್ಯೆ ಸೇರಿ ಇತರ ಸೌಲಭ್ಯ ಇರಲಿದೆ.
ಅರ್ಜಿ ಸಲ್ಲಿಕೆ ವಿಧಾನ:ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇರವಾಗಿ ಬಂದ ಅರ್ಜಿ ಸ್ವೀಕರಿಸುವುದಿಲ್ಲ. ಹಾಗೂ ಅಪೂರ್ಣ ಅರ್ಜಿ, ದಾಖಲೆ ನೀಡದ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಸಂಸ್ಥೆಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:ಅರ್ಜಿದಾರರು ಉತ್ತಮ ಆರೋಗ್ಯ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯಿಂದ ಫಿಟ್​ನೆಸ್​ ಪರೀಕ್ಷೆ ನಡೆಸಿ ನಂತರ ನೇಮಕ ಮಾಡಿಕೊಳ್ಳಲಾಗುವುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಮತ್ತು ವೃತ್ತಿ ಅನುಭವ ಆಧರಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 4.5.2022ಮಾಹಿತಿಗೆ:https://itiltd.in/ಅಧಿಸೂಚನೆಗೆ:https://bit.ly/36vyzKR, https://bit.ly/36vyRRZ
35 ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕ: ಅರ್ಜಿ ಸಲ್ಲಿಸಲು ಮೇ 19 ಕೊನೇ ದಿನ

ತಡರಾತ್ರಿ ಪಂಪ್​ಸೆಟ್ ಕದಿಯಲು ಬಂದ ಯುವಕರಿಬ್ಬರನ್ನು ಅಮಾನುಷವಾಗಿ ಕೊಂದ ತೋಟದ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
