ವಿಜಯಪುರ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮನಾದ ನಾಯಕ ಕಾಂಗ್ರೆಸ್​ನಲ್ಲಿ ಯಾರಿದ್ದಾರೆ ಹೇಳಿ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಸಿಂದಗಿಯಲ್ಲಿ ಶನಿವಾರ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬಿಎಸ್​ವೈ, ಆ ಇಬ್ಬರು ನಾಯಕರು ಮತ್ತೊಮ್ಮೆ ಮೋದಿ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಆ ಕೆಲಸ ಮಾಡ್ತಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಇರೋದಿಲ್ಲ. ಎಲ್ಲಿದೆಯಪ್ಪಾ ಕಾಂಗ್ರೆಸ್​? ನಿಮ್ಮ ನಾಯಕ ಯಾರು? ಎಂದು ಕಾಂಗ್ರೆಸ್ ಪಡೆಯನ್ನು ಅಣಕಿಸಿದರು.
ವಿಜಯಸಂಕಲ್ಪ ಅಭಿಯಾನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮೂಲಕ ಆರಂಭ ಆಗಿರೋದು ನಮ್ಮ ಸೌಭಾಗ್ಯ. ಹಣಬಲ, ತೋಳ್ಬಲದಿಂದ ಅಧಿಕಾರಕ್ಕೆ ಬರೋ ಕಾಲವಿಲ್ಲ, ಇದನ್ನು ಕಾಂಗ್ರೆಸ್​ನವರು ಮರೆಯಬೇಕು. ಮೋದಿಜಿ ಅವರು ಜೆ.ಪಿ. ನಡ್ಡಾ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ನಾನೇ ಮುಂದಿನ ಮುಖ್ಯಮಂತ್ರಿ ಆಗ್ತೀನಿ ಎಂದು ಕೆಲವರು ತಿರುಕನ ಕನಸು ಕಾಣುತ್ತಿದ್ದಾರೆ. ಮೋದಿ, ನಡ್ಡಾ, ಅಮಿತ್​ ಶಾ ಅವರ ನೇನೃತ್ವದಲ್ಲಿ 140ಕ್ಕೂ ಸ್ಥಾನ ಗೆದ್ದು ಮತ್ತೊಮ್ಮೆ ಬಿಜೆಪಿಯನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇವೆ. ದೇಶದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ ಎಂದರು.
ಜೆ.ಪಿ. ನಡ್ಡಾ ಅವರು ಇಂದು ಕರ್ನಾಟಕಕ್ಕೆ ಬಂದು ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರೂ ಮನೆಮನೆಗೆ ಹೋಗಿ ಬಿಜೆಪಿಯ ಸಾಧನೆ-ಕಾರ್ಯಗಳನ್ನು ತಿಳಿಸಬೇಕು. ಮಹಿಳಾ ಸಬಲೀಕರಣದ ಬಗ್ಗೆ ತಿಳಿ ಹೇಳಬೇಕಿದೆ ಎಂದು ಕಾರ್ಯಕರ್ತರಿಗೆ ಬಿಎಸ್​ವೈ ಕರೆ ನೀಡಿದರು.
ಯಂಕಾ, ‌ನಾಣಿ, ಸೀಣಿ ಅಂತ ಅಲ್ಲೊಬ್ಬ ಇಲ್ಲೊಬ್ಬ ಬಿಟ್ಟರೆ ಕಾಂಗ್ರೆಸ್​ನಲ್ಲಿ ಯಾರಿದ್ದಾರೆ. ಮೋದಿ ಅವರಿಗೆ ಸಮನಾಗಿ ಕಾಂಗ್ರೆಸ್​ನಲ್ಲಿ ಯಾವ ನಾಯಕ ಇದ್ದಾರೆ ಹೇಳಲಿ ನೋಡೋಣ? ಎಂದು ಯಡಿಯೂರಪ್ಪ ಸವಾಲು ಹಾಕಿದರು.
ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ@JPNaddaಅವರು ವಿಜಯಪುರದ ನಾಗಠಾಣಾ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಶ್ರೀ@BSYBJP, ಸಚಿವ@drashwathcn& ಪ್ರಮುಖರೊಂದಿಗೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು.#VijayaSankalpaAbhiyana#ವಿಜಯಸಂಕಲ್ಪಅಭಿಯಾನ1/2pic.twitter.com/auiOEVmH0q
— BJP Karnataka (@BJP4Karnataka)January 21, 2023

ನಟಿ ರಚಿತಾ ರಾಮ್ ವಿರುದ್ಧ ಮದ್ದೂರು ಠಾಣೆಯಲ್ಲಿ ಕೇಸ್​!

ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ್​ ನಿಧನ: ಅಗಲಿದ ನಾಯಕನಿಗೆ ಎಚ್​ಡಿಕೆ ಅಂತಿಮ ನಮನ

ಕರ್ನಾಟಕ ಕಾಂಗ್ರೆಸ್​ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ… ಎನ್ನುತ್ತಲೇ ಜಮೀರ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
