ಬೆಂಗಳೂರು:ರಾಜ್ಯದಲ್ಲಿ ದಿಢೀರ್​ ರಾಜಸ್ಥಾನ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ. ಸೋಮವಾರ 23 ಜಿಲ್ಲೆಗಳಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ.ಆ ಭಾಗದ ಜನರಿಗೆ ಶಾಖಾಘಾತ ಎಚ್ಚರಿಕೆ ಕೊಡಲಾಗಿದೆ.
ರಾಯಚೂರಿನಲ್ಲಿ 46.1 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ತಾಪಮಾನ ಇದಾಗಿದೆ.ಯಾದಗಿರಿ 45.1, ಕಲಬುರಗಿ 45.1, ಬಳ್ಳಾರಿ 44.8, ವಿಜಯಪುರ 44.6, ಬಾಗಲಕೋಟೆ 44.6, ಗದಗ 43.6, ಬೆಳಗಾವಿ 44.4, ಕೊಪ್ಪಳ 44.1, ಬೀದರ್​ 44.4, ಚಿತ್ರದುರ್ಗ 43.2, ಚಿಕ್ಕಮಗಳೂರು 42.9, ಹಾವೇರಿ 42.5, ಮಂಡ್ಯ 42.5, ತುಮಕೂರು 42.3, ದಾವಣಗೆರೆ 42.4, ರಾಮನಗರ 42.4, ಚಾಮರಾಜನಗರ 42, ಧಾರವಾಡ 42, ಶಿವಮೊಗ್ಗ 41.6, ಮೈಸೂರು 40.9, ಹಾಸನ 40.5, ಕೋಲಾರ 40.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್​ ಅರ್ಲಟ್​ ಘೋಷಿಸಿದೆ. ಮುಂದಿನ ಐದುವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ರಾಯಚೂರಿನಲ್ಲಿ ಬಿಸಿ ವಾತಾವರಣ ಇರಲಿದೆ.
2-3 ದಿನಗಳಿಂದ ಹಿಂದೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಲ್ಲಿ 40-41ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಸೋಮವಾರ ವಾಡಿಕೆಗಿಂತ 4-6 ಡಿ.ಸೆ.ಹೆಚ್ಚು ಉಷ್ಣಾಂಶ ಕಂಡುಬಂದಿದೆ. ದಕ್ಷಿಣ ಕರ್ನಾಟಕ ಭಾಗದ ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ರಾಮನಗರ ಕೋಲಾರ, ತುಮಕೂರು, ಚಿಕ್ಕಮಗಳೂರಿನಲ್ಲಿ ವಾಡಿಕೆಗಿಂತ 7-8 ಡಿ.ಸೆ. ಹೆಚ್ಚು ಉಷ್ಣಾಂಶ ವರದಿಯಾಗಿದೆ. ಇಡೀ ಕರುನಾಡು ಕಾದ ಕೆಂಡವಾಗಿದ್ದು, ಜನರು, ಜಾನುವಾರು, ಕೃಷಿ, ಪ್ರಾಣಿ ಸಂಕುಲ ಮೇಲೆ ಗಂಭೀರ ಪರಿಣಾಮ ಬೀರಿದೆ.
ಆಸ್ಪತ್ರೆಯಲ್ಲಿನ ಶಸ್ತ್ರ ಚಿಕಿತ್ಸಾ ಕೊಠಡಿ ಮೇಲ್ದರ್ಜೆ: 176 ಕೋಟಿ ರೂ.ವೆಚ್ಚದಲ್ಲಿ 114 ಮಾಡ್ಯೂಲರ್​ ಒಟಿ ಖರೀದಿ
ಜನರೇ ಎಚ್ಚರಿಕೆವಹಿಸಿದೀರ್ಘಾವಧಿವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಶಾಖ ಅಲೆ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ. ಬಿಸಿಲಿನ ಪ್ರಖರತೆ ಇರುವಾಗ ರೈತರು,ಕೃಷಿ ಕಾರ್ಮಿಕರು, ಕ್ರೀಡಾಪಟುಗಳು ಶ್ರಮದಾಯಕ ಚಟುವಟಿಕೆ ತಪ್ಪಿಸಬೇಕು. ಚಿಕ್ಕ ಮಕ್ಕಳು, ವೃದ್ಧರು, ಗಂಭೀರ ಕಾಯಿಲೆಗಳಿಂದ ಒಳಲುತ್ತಿರುವ ರೋಗಿಗಳು ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಯಾಣದ ಜತೆಗೆ ಕುಡಿಯವ ನೀರನ್ನು ಒಯ್ಯಬೇಕು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty − one =
Remember me
