ಬೆಂಗಳೂರು: ರಾಜ್ಯದಲ್ಲಿ ಹೆಚ್ಚಳವಾಗಿರುವ ಬಿಸಿಲು ಧಗೆಗೆ ಜನತೆ ತತ್ತರಿಸಿದ್ದು, ಭಾನುವಾರ 4 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಟಿದೆ.
ಬಾಗಲಕೋಟೆ 41.2, ರಾಯಚೂರು 40.4, ಕಲಬುರಗಿ 40.9, ಬೆಂ.ಗ್ರಾಮಾಂತರ ತಾಲೂಕಿನ ಚಿಕ್ಕನಹಳ್ಳಿ 40.2 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ದಾವಣಗೆರೆಯಲ್ಲಿ 40ರ ಅಸುಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದೆ. ಚಾಮರಾಜನಗರ 38.2, ಬೀದರ್​ 38, ಚಿತ್ರದುರ್ಗ 37.9, ಬೆಳಗಾವಿ 37.4, ಮಂಡ್ಯ 37.2, ಶಿವಮೊಗ್ಗ 37.2, ಚಿಂತಾಮಣಿ 36.8, ಬೆಂಗಳೂರು 36.6 ಡಿ.ಸೆ.ತಾಪಮಾನ ವರದಿಯಾಗಿದೆ. ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿ.ಸೆ.ಅಧಿಕ ಉಷ್ಣಾಂಶ ಕಂಡುಬಂದಿದೆ.
ಜ್ಞಾನಭಾರತಿ ಆವರಣದಲ್ಲಿ ಬೆಂಕಿ: ಆರಣ್ಯ ನಾಶಮುಂದಿನ 2-3 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 3 ಡಿ.ಸೆ.ಹೆಚ್ಚಾಗಲಿದೆ. ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳದಲ್ಲಿ ಹೀಟ್​ ವೇವ್​ ಉಂಟಾಗಲಿದೆ. ಈ ಮಧ್ಯೆಯೂ ರಾಜ್ಯದ ಕೆಲವೆಡೆ ಸಾಧಾರಣ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ.ಹಗಲು ವೇಳೆ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಭಾಗಿಯಾಗದಂತೆ ಸಾರ್ವಜನಿಕರಿಗೆ ಇಲಾಖೆ ಸಲಹೆ ಕೊಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
