ತುಮಕೂರು:ದೇವಸ್ಥಾನದ ವಿಚಾರಕ್ಕೆ ಗಲಾಟೆ ನಡೆದಿದ್ದು, ಓರ್ವ ಮಹಿಳೆ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.ರಾಮಾಂಜನಯ್ಯ (48), ಶಿಲ್ಪಾ (38), ಮೃತ ದುರ್ದೈವಿಗಳಾಗಿದ್ದು, ಮಲ್ಲಿಕಾರ್ಜುನ (42) ಎಂಬುವನ ಸ್ಥಿತಿ ಗಂಭೀರವಾಗಿದೆ.
ಘಟನೆ ಹಿನ್ನೆಲೆ:ಮಿಡಿಗೇಶಿ ಗ್ರಾಮದ ಶ್ರೀಧರ್ ಗುಪ್ತ ಎಂಬಾತ ಗಣಪತಿ ದೇವಸ್ಥಾನ ಜಾಗ ಕಬಳಿಸಲು ಯತ್ನಿಸಿದ್ದ. ಈ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ಗ್ರಾಮಸ್ಥರ ಪರವಾಗಿ ನ್ಯಾಯಾಲಯದ ತೀರ್ಪು ಬಂದಿತ್ತು.
ಮೃತ ರಾಮಾಂಜನಯ್ಯ ಹಾಗೂ ಶಿಲ್ಪಾ, ದೇವಸ್ಥಾನದ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸಿದ್ರು. ಇದೇ ವಿಚಾರಕ್ಕೆ ರಾಮಾಂಜನಯ್ಯ ಹಾಗೂ ಶಿಲ್ಪಾ ವಿರುದ್ಧ ದ್ವೇಷಕಾರಿದ್ದ ಜೆಡಿಎಸ್​​ ಮುಖಂಡ ಶ್ರೀಧರ್ ಗುಪ್ತ, ಇಂದು ಮನೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ಸಹಚರರ ಜತೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಮೋಹನ್​ ಭಾಗವತ್​ ‘ರಾಷ್ಟ್ರಪಿತ, ರಾಷ್ಟ್ರ ಋಷಿ’ ಇದ್ದಂತೆ: ಇಮಾಮ್​ ಮುಖ್ಯಸ್ಥ ಅಹ್ಮದ್ ಇಲ್ಯಾಸಿ ಬಣ್ಣನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
