ಬೆಂಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಮೊದಲ ಕಂತಿನ ತಸ್ತೀಕ್ ಹಣವನ್ನು ಬಿಡುಗಡೆ ಮಾಡಿದೆ.77.85 ಕೋಟಿ ರೂ. ಬಿಡುಗಡೆ ಮಾಡಿರುವ ಇಲಾಖೆ, ತಸ್ತೀಕ್ ಮೊತ್ತವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಯಾವುದೇ ನಿಬಂಧನೆಗಳನ್ನು ವಿಧಿಸದೆ ತುರ್ತಾಗಿ ಸಂಬಂಧಪಟ್ಟ ಸಂಸ್ಥೆ, ದೇವಾಲಯಗಳಿಗೆ ವಿಳಂಬಕ್ಕೆ ಅವಕಾಶ ಕೂಡದೆ ವಿತರಿಸಬೇಕೆಂದು ಆಯುಕ್ತರು ತಹಶೀಲ್ದಾರರಿಗೆ ಸೂಚಿಸಿದ್ದಾರೆ.ಸಂಬಂಧಪಟ್ಟ ತಹಶೀಲ್ದಾರರು ಆಯಾಯ ಸಂಸ್ಥೆ,ದೇವಾಲಯಗಳ ಖಾತೆಯಿಂದ ಅರ್ಚಕರ ಖಾತೆಗೆ ನೇರವಾಗಿ ಜಮೆ ಮಾಡುವಂತೆ ಸೂಚಿಸಿದ್ದು, ಅನುದಾನ ವಿನಿಯೋಗಿಸಿಕೊಂಡ ಬಗ್ಗೆ ವರದಿ ನೀಡುವಂತೆಯೂ ತಿಳಿಸಲಾಗಿದೆ.ತಸ್ತೀಕ್ ಹಣ ಬಿಡುಗಡೆ ತಡವಾಗುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಇದು ಸಚಿವರ ಗಮನಕ್ಕೂ ಬಂದಿತ್ತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − two =
Remember me
