ಕೊಪ್ಪಳ:ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ ಟೆಂಪೋ ಸಾಗಿ ಒಬ್ಬ ಸಾವಿಗೀಡಾಗಿದ್ದರೆ, ಮೂವರಿಗೆ ಗಂಭೀರ ಗಾಯಗಳಾಗಿವೆ. ಕೊಪ್ಪಳದ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದ ಬಳಿ ಈ ಅವಘಡ ನಡೆದುಹೋಗಿದೆ.
ಈ ಅಪಘಾತದಲ್ಲಿ ತಿಪ್ಪಣ್ಣ (75) ಸಾವಿಗೀಡಾಗಿದ್ದು, ಬಳ್ಳಾರಿಯ ಮಲ್ಲಮ್ಮ, ಕುಕನೂರಿನ ಹನುಮವ್ವ, ಕಾರಟಗಿಯ ತುಕಾರಂ ಗಾಯಗೊಂಡಿದ್ದಾರೆ. ದೇವಸ್ಥಾನಕ್ಕೆಂದು ಬಂದಿದ್ದ ಇವರು ಇಲ್ಲಿನ ಬಳೆ ಅಂಗಡಿಯ ಮುಂದೆ ಮಲಗಿದ್ದರು. ನಿನ್ನೆ ತಡರಾತ್ರಿ ಈ ಅಪಘಾತ ಸಂಭವಿಸಿದೆ.
ಮಲಗಿದ್ದವರ ಮೇಲೇ ಟೆಂಪೋ ಸಾಗಿ ಹೋದ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನ ತಮ್ಮತ್ತ ಬರುವುದನ್ನು ಕಂಡು ಕೆಲವರು ತಕ್ಷಣ ಎದ್ದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜನರು ಎದ್ದೇಳುತ್ತಿರುವುದು ಕಾಣಿಸಿದರೂ ಚಾಲಕ ವಾಹನ ವೇಗ ತಗ್ಗಿಸದಿರುವುದು ವಿಡಿಯೋ ತುಣುಕಲ್ಲಿ ಕಂಡುಬಂದಿದೆ.
ಇದನ್ನೂ ಓದಿ:ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ, ಒಕ್ಕಲಿಗ ಸ್ವಾಮೀಜಿ: ಜಮೀರ್ ಅಹ್ಮದ್
ಇಷ್ಟಾಗಿಯೂ ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ಆತನ ವಿರುದ್ಧ ಗಾಯಾಳುಗಳು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಯರಂಗಳಿಯ ಚಾಲಕ ಶ್ರೀನಿವಾಸ ಎಂಬಾತನೇ ಆರೋಪಿ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
