ಬೆಂಗಳೂರು:ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ನೇತೃತ್ವದ ರಾಜ್ಯ ಸರ್ಕಾರ 10 ಐಎಎಸ್​ ಅಧಿಕಾರಿಗಳನ್ನು ಇಂದು (ಜೂ. 16) ವರ್ಗಾವಣೆ ಮಾಡಿದೆ.
ಐಎಎಸ್​ ಅಧಿಕಾರಿಗಳಾದ ಪಲ್ಲವಿ ಅಕುರಥಿ, ಡಾ. ವೆಂಕಟೇಶ್​ ಎಂ, ರವೀಂದ್ರ ಪಿ.ಎನ್​, ಶ್ರೀನಿವಾಸ್​ ಕೆ, ಜಾನಕಿ ಕೆ.ಎಂ., ಮುಲ್ಲೈ ಮುಹಿಲನ್​ ಎ.ಪಿ., ಯೋಗೇಶ್​ ಎ.ಎಂ., ಡಾ. ಕುಮಾರ, ಪ್ರಭು ಜಿ ಮತ್ತು ನವೀನ್​ ಕುಮಾರ್​ ರಾಜು ಅವರನ್ನು ತಕ್ಷಣ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹಣಕಾಸು ನೀತಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕರಾಗಿದ್ದ ಪಲ್ಲವಿ ಅಕುರಥಿ ಅವರನ್ನು ಸಕಾಲ ಮಿಷನ್​ನ ಹೆಚ್ಚುವರಿ ಮಿಷನ್​ ನಿರ್ದೇಶಕರಾಗಿ ಮುಂದಿನ ಆದೇಶದವರೆಗೂ ವರ್ಗಾವಣೆ ಮಾಡಲಾಗಿದೆ. ಇದಕ್ಕೂ ಮೊದಲು ಸಕಾಲ ಮಿಷನ್​ನ ಹೆಚ್ಚುವರಿ ಮಿಷನ್​ ನಿರ್ದೇಶಕರಾಗಿದ್ದ ಜಾನಕಿ ಕೆ. ಎಂ. ಅವರನ್ನು ಬಾಗಲಕೋಟೆಯ ಡೆಪ್ಯುಟಿ ಕಮಿಷನರ್​ ಆಗಿ ವರ್ಗಾಯಿಸಲಾಗಿದೆ.
ಬೆಂಗಳೂರಿನ ಜಲಾನಯನ ಅಭಿವೃದ್ಧಿ ಇಲಾಖೆಯ ಕಮಿಷನರ್​ ಆಗಿದ್ದ ಡಾ. ವೆಂಕಟೇಶ್​ ಎಂ.ವಿ. ಅವರನ್ನು ಬೆಂಗಳೂರಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಕಮಿಷನರ್​ ಆಗಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಜನರು ಬಡಿಗೆ ಹಿಡೀತಾರೆ : ಶಾಸಕ ಬಿ.ವೈ.ವಿಜಯೇಂದ್ರ
ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಯೋಜನೆ)ರಾಗಿದ್ದ ರವೀಂದ್ರ ಪಿ.ಎನ್​. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಡೆಪ್ಯುಟಿ ಕಮಿಷನರ್​ ಆಗಿ, ಬೆಂಗಳೂರಿನ ಸ್ಮಾರ್ಟ್​ ಸಿಟಿ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀನಿವಾಸ್​ ಕೆ. ಅವರನ್ನು ತುಮಕೂರು ಜಿಲ್ಲೆಯ ಡೆಪ್ಯುಟಿ ಕಮಿಷನರ್​ ಆಗಿ, ಸ್ಮಾರ್ಟ್ ಆಡಳಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಮುಲ್ಲೈ ಮುಹಿಲಾನ್​ ಎಂ.ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಿಷನರ್​ ಆಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ. ಕುಮಾರ್ ಅವರನ್ನು ಮಂಡ್ಯ ಜಿಲ್ಲೆಯ ಡೆಪ್ಯುಟಿ ಕಮಿಷನರ್​ ಆಗಿ ವರ್ಗಾಯಿಸಲಾಗಿದೆ. ​​
ಬೆಂಗಳೂರಿನ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರಾಗಿದ್ದ ಯೋಗೇಶ್​ ಎ.ಎಂ. ಅವರನ್ನು ಬೆಂಗಳೂರಿನ ರಸ್ತೆ ಮತ್ತು ಸಾರಿಗೆ ಸುರಕ್ಷತಾ ಕಮಿಷನರ್​ ಆಗಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಪ್ರಭು ಜಿ. ಅವರನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಿಷನರ್​ ಆಗಿ ಮತ್ತು ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದ ನವೀನ್​ ಕುಮಾರ್​ ರಾಜು ಎಸ್​. ಅವರನ್ನು ಕರ್ನಾಟಕ ವಸತಿ ಸಂಸ್ಥೆಗಳ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಮಹಿಳಾ ಐಪಿಎಸ್​ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ: ಮಾಜಿ ಡಿಜಿಪಿಗೆ 3 ವರ್ಷ ಶಿಕ್ಷೆ ಪ್ರಕಟ

ಕೋಳಿ ಮೊದಲಾ, ಮೊಟ್ಟೆ ಮೊದಲಾ?; ಮಿಲಿಯನ್​ ಡಾಲರ್​ ಪ್ರಶ್ನೆಗೆ ಸಿಕ್ಕಿತು ಉತ್ತರ!

ಕೇಂದ್ರದ ದ್ವೇಷ ರಾಜಕಾರಣ, ಬಡವರ ವಿರೋಧಿ ನೀತಿ ವಿರುದ್ಧ ಜೂ. 20ರಂದು ಪ್ರತಿಭಟನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eighteen =
Remember me
