ಕಲಬುರಗಿ:ರಸ್ತೆ ದಾಟುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಆತನ ದೇಹ ರಸ್ತೆಯಲ್ಲೇ ಛಿದ್ರಗೊಂಡಿದ್ದು, ಉದ್ರಿಕ್ತ ಜನರು ಟಿಪ್ಪರ್​ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ಈ ಅವಘಡ ಸಂಭವಿಸಿದೆ.
ಮನೀಷ್ ಮಲ್ಲಿಕಾರ್ಜುನ (10) ಸಾವಿಗೀಡಾದ ಬಾಲಕ. ಈತ ಇಂದು ಪಾಲಕರ ಜತೆ ರಸ್ತೆ ದಾಟುತ್ತಿದ್ದಾಗ ಮುಂದೆ ಓಡಿದ್ದ. ಅದೇ ಸಮಯಕ್ಕೆ ಮೇಲ್ಸೇತುವೆಯಿಂದ ವೇಗವಾಗಿ ಬರುತ್ತಿದ್ದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಬಾಲಕನ ದೇಹ ಛಿದ್ರಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ.
ಬಾಲಕ ಸಾವಿಗೀಡಾದ್ದನ್ನು ಕಂಡು ರೊಚ್ಚಿಗೆದ್ದ ಜನರು ಟಿಪ್ಪರ್​ಗೆ ಬೆಂಕಿ ಇಟ್ಟಿದ್ದು, ಅದು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮೊಬೈಲ್​ಫೋನ್​ ಎತ್ತಿಟ್ಟಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಎಂಟನೇ ತರಗತಿ ವಿದ್ಯಾರ್ಥಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
