ಬೆಂಗಳೂರು:ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯೊಬ್ಬಳ ಸಾವಿಗೆ ಮನೆ ಮಾಲೀಕನೊಬ್ಬ ಕಾರಣನಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಶಂಕರ್ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಶಿವಶಂಕರ್ ಅವರಿಗೆ ಸೇರಿದ್ದ ಕಟ್ಟಡದ ಮನೆಯಲ್ಲಿ ವಿನೋದ್ ಎಂಬವರ ಸಂಸಾರ ನೆಲೆಸಿತ್ತು.
ಇದನ್ನೂ ಓದಿ:ಮನೆ ಮೇಲೇ ಕುಸಿದ ಗುಡ್ಡ, ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಇಬ್ಬರು ಮಕ್ಕಳು…
ಮನೆಯಲ್ಲಿ ಜಿರಳೆ ಕಾಟ ಎಂದು ಮನೆ ಮಾಲೀಕ ಜಿರಳೆ ಔಷಧ ಸಿಂಪಡಿಸಿದ್ದ. ಆದರೆ ವಾರದ ಹಿಂದೆ ಊರಿಗೆ ಹೋಗಿದ್ದ ವಿನೋದ್, ಸಂಸಾರ ಸಮೇತರಾಗಿ ಮನೆಗೆ ಮರಳಿದ್ದಾಗ ಈ ವಿಚಾರ ಗೊತ್ತಿರದೆ ಹಾಗೇ ಮಲಗಿದ್ದರು. ಹೀಗಾಗಿ ಜಿರಳೆ ಔಷಧದಿಂದ ಉಸಿರುಗಟ್ಟಿ ಅವರ ಪುತ್ರಿ ಆರು ವರ್ಷದ ಅಹನಾ ಸಾವಿಗೀಡಾಗಿದ್ದಾಳೆ. ಇನ್ನು ಅಸ್ವಸ್ಥಗೊಂಡಿರುವ ಮನೆಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮನೆ ಮಾಲೀಕನ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ‘ವಿಜಯಾನಂದ’ ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

‘ಸರ್ಕಾರದಿಂದ’ ಮಹಿಳೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆ ವಿತರಣೆ; ಮುಜರಾಯಿ ದೇವಸ್ಥಾನಗಳಿಗೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − twelve =
Remember me
