ಬೆಂಗಳೂರು:ಮನೆ ಮಾಲೀಕರು ತಿಗಣೆ ಮದ್ದು ಸಿಂಪಡಿಸಿದ್ದರಿಂದ ಬಾಡಿಗೆದಾರರ 6 ವರ್ಷದ ಪುತ್ರಿ ಅಹನಾ ಸಾವಿಗೀಡಾದ ಪ್ರಕರಣ ನಿನ್ನೆ ರಾತ್ರಿಯಷ್ಟೇ ನಡೆದಿತ್ತು. ಆದರೆ ಆ ಕುರಿತಂತೆ ಇದೀಗ ಇನ್ನೊಂದು ಮಾಹಿತಿ ಹೊರಬಿದ್ದಿದ್ದು, ತಪ್ಪಿತಸ್ಥರು ಯಾರು ಎಂಬ ಜಿಜ್ಱಸೆ ಮೂಡಿದೆ.
ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಪ್ರಸಾದ್​ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಬಾಡಿಗೆದಾರ ವಿನೋದ್ ನಾಯರ್ ಎಂಬವರ ಪುತ್ರಿ 6 ವರ್ಷದ ಪುತ್ರಿ ಅಹನಾ ಉಸಿರುಗಟ್ಟಿ ಸಾವಿಗೀಡಾಗಿದ್ದಳು. ಪಾಲಕರು ಕೂಡ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಹನಾ ಸಾವಿಗೆ ಮನೆ ಮಾಲೀಕರು ತಿಗಣೆ ಮದ್ದು ಸಿಂಪಡಿಸಿದ್ದೇ ಕಾರಣ ಎಂಬ ಆರೋಪ ಬಂದಿತ್ತು.
ಈ ಮಧ್ಯೆ ಮನೆ ಮಾಲೀಕರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೇರಳ ಮೂಲದ ವಿನೋದ್ ನಾಯರ್ 8 ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ವಸಂತನಗರದ ನಮ್ಮ ಮನೆಯಲ್ಲಿ ಬಾಡಿಗೆಗಿದ್ದರು ಎಂದಿರುವ ಮನೆ ಮಾಲೀಕ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯ ಸಾವಿಗೆ ಕಾರಣನಾದ ಮನೆ ಮಾಲೀಕ!
ಮನೆಯಲ್ಲಿ ತಿಗಣೆ ಜಾಸ್ತಿ ಆಗಿದೆ ಅಂತ ಅವರೇ ಹೇಳಿದ್ದರು. ಹೀಗಾಗಿ ಔಷಧ ಸಿಂಪಡಿಸಲು ನಾಲ್ಕು ದಿನ ಬೇಕಾಗುತ್ತದೆ ಎಂದಿದ್ದೆ. ತಿಗಣೆ ಔಷಧ ಹೊಡೆಯುವುದಾಗಿ ಅವರಿಗೆ ಮೂರು ದಿನ ಮುಂಚಿತವಾಗಿ ಹೇಳಿದ್ದೆ, ಹೀಗಾಗಿ ಅವರು ಊರಿಗೆ ಹೋಗಿದ್ದರು. ಅದರಂತೆ ನಾನು ಮನೆಗೆ ಪೆಸ್ಟ್​ ಕಂಟ್ರೋಲ್​ನವರನ್ನು ಕರೆಸಿ ಔಷಧ ಸಿಂಪಡಿಸಿದ್ದೆ. ನಂತರ ಮನೆಯ ಲಾಕ್ ಮಾಡಿದ್ದು, ಕೀ ಕೂಡ ನನ್ನ ಬಳಿಯೇ ಇತ್ತು.
ಹೀಗೆ ಕೇರಳಕ್ಕೆ ಹೋಗಿದ್ದ ಅವರು ನಿನ್ನೆ ನಮಗೆ ತಿಳಿಸದೇ ಬಂದು ಬಿಟ್ಟಿದ್ದರು. ಸ್ಪೇರ್ ಕೀ ಬಳಸಿ ಮನೆಗೆ ಪ್ರವೇಶಿಸಿದ್ದರು. ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಮಗು ಸಾವಿಗೆ ಪಾಲಕರೇ ಕಾರಣ. ಮಗು ಸೋಫಾ ಮಲಗಿದ್ದು, ಬಳಿಕ ವಾಂತಿ ಮಾಡಲಾರಂಭಿಸಿತ್ತಂತೆ. ನಂತರ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದೆ ಎಂದು ಮನೆ ಮಾಲೀಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
