ಬೆಂಗಳೂರು: ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರ ನಡೆದಿದ್ದು, ಇದರ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈವಾಡವಿದೆ ಎಂದು ಆಮ್‌ಆದ್ಮಿ ಪಕ್ಷ ಗುರುತರ ಆರೋಪ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿ ನಾಗಣ್ಣ ಹಾಗೂ ವಕೀಲ ನಂಜಪ್ಪ ಕಾಳೇಗೌಡ ದಾಖಲೆ ಬಿಡುಗಡೆ ಮಾಡಿ, ನ್ಯಾಯಾಂಗ ಹೋರಾಟ ನಡೆಸುವುದಾಗಿಯೂ ಪ್ರಕಟಿಸಿದರು. ಜತೆಗೆ ಅಕ್ರಮ ನಡೆದಿದ್ದರೂ ಕ್ರಮಕೈಗೊಳ್ಳದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳರಾಜಕೀಯ ಮಾಡುತ್ತಿದ್ದಾರಾ ಎಂದೂ ಸಹ ಪ್ರಶ್ನಿಸಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಲಿಕ್ಯೂರ್ ಅಂಕಾಲಜಿ ಲ್ಯಾಬೋರೇಟರಿ ನಿರ್ಮಾಣಕ್ಕಾಗಿ ಹೊರಗುತ್ತಿಗೆ ನಿಡುವ ಪ್ರಕ್ರಿಯೆಯಲ್ಲಿ ಬಸವರಾಜ ಬೊಮ್ಮಾಯಿ ನೇರ ಹಸ್ತಕ್ಷೇಪ, ಸ್ವಜನಪಕ್ಷಪಾತ ಮಾಡಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬೊಮ್ಮಾಯಿಯವರು ತಮ್ಮ ಬಾವಮೈದುನ‌ ಸಿದ್ದಲಿಂಗಪ್ಪ ಫಾಲಲೋಚನ ರಕ್ಷಿತ್ ಮಾಲಿಕತ್ವದ ಮೆಂಗಳೂರು ಮೆಡಿಕಲ್ ಸಿಸ್ಟಮ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿ, ನೂರಾರು ಕೋಟಿ ರೂ. ಸಂಪೂರ್ಣ ಅವ್ಯವಹಾರ ಅಕ್ರಮವಾಗಿದೆ ಎಂದರು.
ಸಗಟು ಔಷಧ ಮಾರಾಟಗಾರ ಬಿಎಂ ಎಸ್ ಸಂಸ್ಥೆಯು ಕಿದ್ವಾಯಿ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿಯನ್ನು ತೆಗೆಯುವ ಯಾವುದೇ ಪೂರ್ವಾರ್ಹತೆ ಹೊಂದಿಲ್ಲ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೆಮಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ನೋಂದಾವಣೆ ಆಗಿಲ್ಲ. ಕೆಪಿಎಂ ಕಾಯ್ದೆಯಡಿಯಲ್ಲಿ ನೋಂದಣಿ ಆಗಿಲ್ಲ ಎಂದು ದಾಖಲೆ ಪ್ರದರ್ಶಿಸಿದರು.
ಈ ಲ್ಯಾಬ್ ಕೋವಿಡ್ ಟೆಸ್ಟ್ ಮಾಡುವ ಅರ್ಹತೆ ಹೊಂದಿಲ್ಲದಿದ್ದರೂ ಟೆಸ್ಟ್ ಮಾಡಿಸಲಾಗಿದೆ. ಇದಕ್ಕಾಗಿ ಸರ್ಕಾರ 119 ಕೋಟಿ ನೀಡಿದೆ. ಹಾಗೂ ಗುತ್ತಿಗೆ ಪಡೆದ ಸಂಸ್ಥೆ ಶೇ. ಐವತ್ತು ಲಾಭಾಂಶವನ್ನು ಕಿದ್ವಾಯಿಗೆ ನೋಡಬೇಕೆಂದಿದೆ. ಅದನ್ನೂ ನೀಡಿಲ್ಲ ಎಂದು ಆರೋಪಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 13 =
Remember me
