ಮಂಗಳೂರು:ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡು ಆ. 5ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಅದೇ ದಿನ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸವೂ ನಿಗದಿಯಾಗಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ದುಷ್ಕೃತ್ಯ ನಡೆಸಲು ಉಗ್ರ ಸಂಘಟನೆಗಳು ಹೊಂಚು ಹಾಕುತ್ತಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಐಸಿಸ್ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಕರ್ನಾಟಕವೂ ಉಗ್ರರ ಟಾರ್ಗೆಟ್ ಎನ್ನಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕರ್ನಾಟಕ ಹಾಗೂ ಕೇರಳದಲ್ಲಿ ಉಗ್ರರ ಅಡಗುದಾಣಗಳು ಹೆಚ್ಚುತ್ತಿರುವ ವರದಿ ಬೆನ್ನಲ್ಲೇ ಈ ಎರಡು ರಾಜ್ಯಗಳಲ್ಲಿ ಉಗ್ರ ಕೃತ್ಯಗಳು ನಡೆಯುವ ಸಂಭಾವ್ಯತೆ ಹೆಚ್ಚಿದೆ. ಹೀಗಾಗಿ ಅನುಮಾನಾಸ್ಪದ ವ್ಯಕ್ತಿಗಳು, ಚಟುವಟಿಕೆಗಳು ಗಮನಕ್ಕೆ ಬಂದರೆ ಸ್ಥಳೀಯ ಪೊಲೀಸರ ಗಮನಕ್ಕೆ ತನ್ನಿ ಎಂದು ಭದ್ರತಾ ಸಂಸ್ಥೆಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಉಗ್ರರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಉಗ್ರರ ಗಮನ ಈಗ ದಕ್ಷಿಣ ರಾಜ್ಯಗಳತ್ತ, ಮುಖ್ಯವಾಗಿ ಕರ್ನಾಟಕ, ಕೇರಳ ಮೇಲೆ ಕೇಂದ್ರೀಕೃತವಾಗಿದೆ. ಹಿಂದೆಯೇ ಮಂಗಳೂರು, ಉಡುಪಿ ಇಂಡಿಯನ್ ಮುಜಾಹಿದ್ದೀನ್ ಕೇಂದ್ರವಾಗಿದ್ದವು. ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್ ಗ್ಯಾಂಗ್ ಇಲ್ಲಿ ಸಕ್ರಿಯವಾಗಿದ್ದು, 2015ರಲ್ಲಿ ಈ ಗ್ಯಾಂಗ್​ನ ಕೆಲವರನ್ನು ಮಂಗಳೂರಿನಿಂದ ಬಂಧಿಸಲಾಗಿತ್ತು. ಸದ್ಯ ಇಂಡಿಯನ್ ಮುಜಾಹಿದ್ದೀನ್ ಹೆಸರು ಸಕ್ರಿಯವಾದಂತಿಲ್ಲ. ಅದರಲ್ಲಿದ್ದವರು ಬೇರೆ ಸಂಘಟನೆಗಳೊಂದಿಗೆ ಸೇರಿಕೊಂಡಿದ್ದಾರೆ. ಐಸಿಸ್ ಕೂಡ ಕೇರಳ, ಕರ್ನಾಟಕದಲ್ಲೂ ಕ್ರಿಯಾಶೀಲವಾಗಿದೆ ಎನ್ನುವುದು ಭದ್ರತಾ ಮೂಲಗಳು ನೀಡುವ ಮಾಹಿತಿ.
ಶಿಲಾನ್ಯಾಸ ಸಂದರ್ಭದಲ್ಲೇ ಸ್ಕೆಚ್?:ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸ ಸಂದರ್ಭದಲ್ಲೇ ಕೇಂದ್ರ ಸರ್ಕಾರಕ್ಕೆ ಒಂದು ಎಚ್ಚರಿಕೆ ನೀಡಬೇಕು ಎಂದು ಕೆಲ ಉಗ್ರ ಸಂಘಟನೆಗಳು, ಮೂಲಭೂತವಾದಿ ಗುಂಪುಗಳು ನಿರ್ಧರಿಸಿವೆ ಎನ್ನಲಾಗಿದೆ. ಇದರ ಜತೆಗೆ, ಸಿಎಎ ಹಾಗೂ ಎನ್​ಆರ್​ಸಿ ಕುರಿತು ಒಂದು ಸಮುದಾಯಕ್ಕೆ ತಪು್ಪ ಮಾಹಿತಿ ನೀಡಿ, ಅವರನ್ನು ರೊಚ್ಚಿಗೆಬ್ಬಿಸುವ ಯತ್ನಗಳೂ ತೆರೆಮರೆಯಲ್ಲಿ ನಡೆಯುತ್ತಿವೆ. ಮಂಗಳೂರಿನಲ್ಲಿ ಕಳೆದ ಬಾರಿ ಸಿಎಎ, ಎನ್​ಆರ್​ಸಿ ವಿರೋಧಿ ಹಿಂಸಾಚಾರಗಳು ಭುಗಿಲೆದ್ದಿರುವುದೂ ಕೆಲವು ಮೂಲಭೂತವಾದಿ ಸಂಸ್ಥೆಗಳು ನೀಡಿರುವ ಕುಮ್ಮಕ್ಕಿನಿಂದ ಎನ್ನುವುದನ್ನು ಈಗಾಗಲೇ ಗುಪ್ತಚರ ಮೂಲಗಳು ದೃಢಪಡಿಸಿವೆ. ದೇಶಾದ್ಯಂತ ಇಂತಹ ಗಲಭೆ ಎಬ್ಬಿಸುವ ಯೋಜನೆ ಇತ್ತಾದರೂ, ಕರೊನಾ ಲಾಕ್​ಡೌನ್ ಇದಕ್ಕೆ ಅಡ್ಡಿಯಾಗಿತ್ತು. ಈಗ ಲಾಕ್​ಡೌನ್ ತೆರವಾದಂತೆಯೇ ಯತ್ನಗಳು ಚಿಗುರುವ ಹಂತದಲ್ಲಿವೆ.
ರಾಜ್ಯದಲ್ಲಿ ಉಗ್ರರಿಂದ ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯಲ್ಲೂ ಬಂದೋಬಸ್ತ್ ಮಾಡಲಾಗಿದೆ. ಉಗ್ರರ ನಿಗ್ರಹಕ್ಕೆ ಕೇಂದ್ರದಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತಿದೆ.
| ಬಸವರಾಜ ಬೊಮ್ಮಾಯಿಗೃಹ ಸಚಿವ
https://www.vijayavani.net/russia-preparing-mass-vaccination-against-coronavirus-in-october/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
