ಬೆಂಗಳೂರು:ಕಚೇರಿಯೊಂದರ ಉದ್ಘಾಟನೆ ವೇಳೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗ್ಯಾಂಗ್​ವೊಂದು ದೃಷ್ಟಿ ತೆಗೆಯುವ ನೆಪದಲ್ಲಿ ಚಿನ್ನಾಭರಣ, ಲಕ್ಷಾಂತರ ರೂ. ನಗದು ಮತ್ತು ಮೊಬೈಲ್​ ದೋಚಿ ಪರಾರಿಯಾಗಿದೆ.
ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ಈ ಘಟನೆ ಸಂಭವಿಸಿದ್ದು, ಆಟೋದಲ್ಲಿ ಬಂದಿದ್ದ ನಾಲ್ವರು ಮಂಗಳಮುಖಿಯರು ಚಿನ್ನ, ಹಣ ಲೂಟಿ ಮಾಡಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿರಿಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ಸೆ.23ರಂದು ಅನುವೃದ್ಧಿ ಕೋ ಆಪರೇಟಿವ್ ಕಚೇರಿಯ ಉದ್ಘಾಟನೆ ಕಾರ್ಯಕ್ರಮವಿತ್ತು. ಈ ವೇಳೆ ಶಾಖೆಯ ದ್ವಾರಕ್ಕೆ ದೃಷ್ಟಿ ತೆಗೆಯುವ ನೆಪದಲ್ಲಿ ಮಂಗಳಮುಖಿಯರ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ನಿಂಬೆಹಣ್ಣಿನಿಂದ ದ್ವಾರಕ್ಕೆ ದೃಷ್ಟಿ ತೆಗೆದು ನಂತರ ದೇವರ ಫೋಟೋಗೆ ಅಕ್ಷತೆ ಹಾಕುವ ನೆಪದಲ್ಲಿ ಕಚೇರಿಯ ಒಳಗೆ ಹೋದ ಆ ಗ್ಯಾಂಗ್, ಅಲ್ಲಿದ್ದ 1.65 ಲಕ್ಷ ರೂ. ನಗದು, 23 ಗ್ರಾಂ ತೂಕದ 1 ಚಿನ್ನದ ಸರ, 1 ಮೊಬೈಲ್ ಎಗರಿಸಿಕೊಂಡು ಸಿನಿಮೀಯ ರೀತಿಯಲ್ಲಿ ಆಟೋ ಹತ್ತಿ ಎಸ್ಕೇಪ್ ಆದರು.
ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡು ಆಟೋದಲ್ಲಿ ಈ ಖರ್ತನಾಕ್ ಗ್ಯಾಂಗ್ ಬಂದಿತ್ತು. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸೆ.23ರಂದು ಅನುವೃದ್ಧಿ ಕೋ ಆಪರೇಟಿವ್ ಕಚೇರಿ ಉದ್ಘಾಟನೆ ವೇಳೆ ದೃಷ್ಟಿ ತೆಗೆಯುವ ನೆಪದಲ್ಲಿ ಬಂದ ಮಂಗಳಮುಖಿಯರ ಗ್ಯಾಂಗ್, ಕಚೇರಿಯಲ್ಲಿದ್ದ 1.65 ಲಕ್ಷ ರೂ. ನಗದು, 23 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ಎಗರಿಸಿಕೊಂಡು ಸಿನಿಮೀಯ ರೀತಿಯಲ್ಲಿ ಆಟೋದಲ್ಲಿ ಎಸ್ಕೇಪ್ ಆಗಿದೆ.#TertiaryGender#Robberypic.twitter.com/O40v3lLEDS
— Vijayavani (@VVani4U)September 27, 2020

4 ತಿಂಗಳ ಭ್ರೂಣ ಹೊಟ್ಟೆಯಲ್ಲಿರುವಾಗಲೇ ಗೃಹಿಣಿ ಆತ್ಮಹತ್ಯೆ!

ಹಾಲು ತರಲು ಹೋಗುತ್ತಿದ್ದವನ ಎದುರಿಗೆ ಬಂತು ಮೃತ್ಯು!

ಈ ಮನೆಯಲ್ಲಿ ಮೂವರ ಸಾವಾಯ್ತು… ದೋಷವೆಂದು ಕೆಲ ತಿಂಗಳು ಹೊರಗಿದ್ದ ಮಗ ವಾಪಸ್ ​ಬರುಷ್ಟರಲ್ಲಿ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
