ಬೆಂಗಳೂರು:ಕಳೆದೊಂದು ವರ್ಷದಿಂದ ನೆಲೆಗುದಿಗೆ ಬಿದ್ದಿರುವ ಪಿಎಸ್​ಐ 402 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಲಿಖಿತ ಪರೀಕ್ಷೆ ನಡೆಯಲಿದೆ. ಈ ಕುರಿತು ಡಿಜಿ-ಐಜಿಪಿ ಪ್ರವಿಣ್​ ಸೂದ್​, ಟ್ವಿಟರ್​ನಲ್ಲಿ ಸುಳಿವು ನೀಡಿದ್ದು, ಎಸ್​ಐ ಆಕಾಂಕ್ಷಿಗಳಲ್ಲಿ ಆಶಾಭಾವನೆ ಮೂಡಿದೆ.
402 ಎಸ್​ಐ(ಸಿವಿಲ್​) ಹುದ್ದೆಗಳು, ಸಿಎಆರ್​/ಡಿಎಆರ್​ &ಆರ್​ಎಸ್​ಐ, ಕೆಎಸ್​ಆರ್​ಪಿ-ಪಿಎಸ್​ಐ, ಕೆಎಸ್​ಐಎಸ್​ಎಫ್​-ಪಿಎಸ್​ಐ ಹುದ್ದೆಗಳ ನೇಮಕಾತಿಗೆ 2021ರಲ್ಲಿ ಪೊಲೀಸ್​ ನೇಮಕಾತಿ ವಿಭಾಗ ಅಧಿಸೂಚನೆ ಹೊರಡಿಸಿತ್ತು. ಕೆಲವೇ ದಿನಗಳಲ್ಲಿ ದೇಹದಾರ್ಢ್ಯ ಪರೀಕ್ಷೆ ಸಹ ಪೂರ್ಣಗೊಳಿಸಿತ್ತು. ಅಷ್ಟರಲ್ಲಿ 545 ಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಕಾರಣಕ್ಕೆ 402 ಹುದ್ದೆಗಳ ನೇಮಕಾತಿ ಸೇರಿ ಎಲ್ಲ ಲಿಖಿತ ಪರೀಕ್ಷೆಗಳನ್ನು ಮಂದೂಡಲಾಗಿತ್ತು. ಮತ್ತೊಂದೆಡೆ 545 ಎಸ್​ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದವರು ಮತ್ತು ಪ್ರಾಮಾಣಿಕವಾಗಿ ಆಯ್ಕೆಗೊಂಡವರು ಹೋರಾಟದಲ್ಲಿ ತೊಡಗಿದ್ದರು. ಸಿಐಡಿ ತನಿಖೆ ವೇಳೆ ಹೋರಾಟದಲ್ಲಿ ಇದ್ದವರು ಮತ್ತು ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳೇ ಜೈಲಿಗೆ ಹೋದರು. ಸರ್ಕಾರ 545 ಎಸ್​ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡಿ ಆದೇಶಿಸಿತು. ಪೊಲೀಸ್​ ಉದ್ಯೋಗ ಆಕಾಂಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಹಲವು ವರ್ಷಗಳಿಂದ ವ್ಯಾಸಂಗದಲ್ಲಿ ತೊಡಗಿದ್ದವರಿಗೆ ಪೊಲೀಸ್​ ನೇಮಕಾತಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು.
ಪ್ರಾಮಾಣಿಕ ಅಭ್ಯರ್ಥಿಗಳು ಹೈಕೋರ್ಟ್​ ಮೊರೆ ಹೋದಾಗ, 545 ಎಸ್​ಐ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಸರ್ಕಾರ ಯಥಾಸ್ಥಿತಿ ಆಯ್ಕೆಗೊಳ್ಳುವಂತೆ ಆದೇಶಿಸಿತು. ಅಲ್ಲದೆ, ಸರ್ಕಾರ ಏನೇ ನಿರ್ಧರ ತೆಗೆದುಕೊಂಡರು ಹೈಕೋರ್ಟ್​ ಗಮನಕ್ಕೆ ತರಬೇಕೆಂದು ಸೂಚನೆ ನೀಡಿತು. ಇದರಿಂದ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿತ್ತು. ಓದಿಗ ಕಡೆ ಗಮನ ಅರಿಸಿದರು. ನ.14ರಂದು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವಿಣ್​ ಸೂದ್​, ಆರ್​ಎಸ್​ಐ, ಸಿಎಆರ್​/ಡಿಎಆರ್​, ಕೆಎಸ್​ಐಎಸ್​ಎ್​, ಕೆಎಸ್​ಆರ್​ಪಿ ಮತ್ತು ಪಿಎಸ್​ಐ 402 ಹುದ್ದೆಗಳ ಲಿಖಿತ ಪರೀೆಯನ್ನು ಶ್ರೀದಲ್ಲಿಯೇ ನಡೆಸುವುದಾಗಿ ಟ್ವಿಟರ್​ನಲ್ಲಿ ಸುಳಿವು ನೀಡಿದರು. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿದೆ.
ಹೋರಾಟದ ಹೆಸರಿನಲ್ಲಿ ಗೊಂದಲಕೆಲವರು 545 ಎಸ್​ಐ ನೇಮಕಾತಿ ಹಗರಣದ ವಿರುದ್ಧ ಹೋರಾಟದ ನೆಪದಲ್ಲಿ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೆ ಹೈಕೋರ್ಟ್​, ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ತಡೆಯಾಜ್ಞೆ ನೀಡಿದೆ. ಸರ್ಕಾರ ಸಹ ಸಿಐಡಿ ಅಂತಿಮ ವರದಿ ನೀಡುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಉಳಿದ ನೇಮಕಾತಿ ನಡೆಸಲು ಸರ್ಕಾರ ಮುಂದಾಗಿದೆ. ಆದರೆ, ಕೆಲವರು 545 ಹುದ್ದೆಗಳ ನೇಮಕಾತಿಗೆ ಮೊದಲು ಲಿಖಿತ ಪರೀೆ ನಡೆಸಬೇಕು. ಆನಂತರ ಉಳಿದ ನೇಮಕಾತಿಗೆ ಪ್ರಕ್ರಿಯೆ ಶುರು ಮಾಡಬೇಕೆಂದು ಹೋರಾಟಕ್ಕೆ ಮುಂದಾಗಿದ್ದಾರೆ. ಹೈಕೋರ್ಟ್​ ಆದೇಶ ಉಲ್ಲಂನೆ ಮತ್ತು ಸರ್ಕಾರ ಉದ್ದೇಶಿತ ಲಿಖಿತ ಪರೀೆಗೆ ಅಡ್ಡಿಯಾಗಲಿದೆ.
ಸದ್ಯಕ್ಕಿಲ್ಲ ಲಿಖಿತ ಪರೀಕ್ಷೆ545 ಎಸ್​ಐ ನೇಮಕಾತಿ ಹಗರಣ ಸಂಬಂಧ ರಾಜ್ಯದ ವಿವಿಧ ಠಾಣೆಗಳಲ್ಲಿ 12 ಎ್​ಐಆರ್​ ದಾಖಲಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ಕೋರ್ಟ್​ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ತನಿಖೆ ಕೊನೆ ಹಂತದಲ್ಲಿದೆ. ಸಿಐಡಿ ಅಧಿಕಾರಿಗಳು ಅಂತಿಮ ವರದಿ ನೀಡಿದ ಮೇಲೆ ಮುಂದಿನ ನಿರ್ಧರ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಾಕಿ ಇರುವ ಲಿಖಿತ ಪರೀಕ್ಷೆಆರ್​ಎಸ್​ಐ (ಸಿಎಆರ್​/ಡಿಎಆರ್​) 71, ಐಆರ್​ಬಿ (ಕೆಎಸ್​ಆರ್​ಪಿ) 70, ಕೆಎಸ್​ಐಎಸ್​ಎ್​ (ಪಿಎಸ್​ಐ) 63 ಮತ್ತು ಪಿಎಸ್​ಐ (ಸಿವಿಲ್​) 402 ಹುದ್ದೆಗಳು ಲಿಖಿತ ಪರೀೆ ನಡೆಯಬೇಕಿದೆ. ಇದಲ್ಲದೆ, ಸಿವಿಲ್​ ಕಾನ್​ಸ್ಟೆಬಲ್​ 1,591 ಹುದ್ದೆಗಳು ಮತ್ತು ಕಾನ್​ಸ್ಟೆಬಲ್​ (ಸಿಎಆರ್​/ಡಿಎಆರ್​) 3,484 ಹುದ್ದೆಗಳಿಗೆ ಲಿಖಿತ ಮತ್ತು ದೇಹದಾರ್ಢ್ಯ ಪರೀಕ್ಷೆ ಬಾಕಿ ಉಳಿದಿದೆ.
ಇಂತಹ ಹೆಂಗಸು ನನಗೆ ಬೇಡ, ಮಗನೇ ನಿನ್ನ ಅಮ್ಮ ಸರಿಯಿಲ್ಲ, ಆಕೆ ಜತೆ ಇರಬೇಡ… ಎಂದು ಮನದ ನೋವು ಬಿಚ್ಚಿಟ್ಟು ದುರಂತ ಅಂತ್ಯ ಕಂಡ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 19 =
Remember me
