ಬೆಂಗಳೂರು:ಕರೊನಾ ಕಾರಣಕ್ಕೆ ಎಸ್​ಎಸ್​ಎಸ್​ಸಿ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಪಿಯು ಒಂದು ವಿಷಯದ ಪರೀಕ್ಷೆ ಮುಂದೆ ಹೋಗಿ ವಿದ್ಯಾರ್ಥಿಗಳ ತಲೆಭಾರ ಹಾಗೆಯೇ ಉಳಿದಿದೆ. ಇದು ಈ ಶೈಕ್ಷಣಿಕ ವರ್ಷದ ಕಥೆಯಾದರೆ, ಮುಂದಿನ ವರ್ಷದ ಶಿಕ್ಷಣದ ಮೇಲೂ ಕರೊನಾ ಕಾರ್ವೇಡ ಕವಿಯುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1.04 ಕೋಟಿ ಮಕ್ಕಳಿಗೆ 2020-21ನೇ ಸಾಲಿನ ಪಠ್ಯಪುಸ್ತಕಗಳು ಸಕಾಲಕ್ಕೆ ಸಿಗುವುದು ಅನುಮಾನ. 2006ರಿಂದ ಪಠ್ಯಪುಸ್ತಕ ಮುದ್ರಣ ಮತ್ತು ವಿತರಣೆಗೆಂದೇ ಕರ್ನಾಟಕ ಪಠ್ಯಪುಸ್ತಕ ಸಂಘವನ್ನು ಸರ್ಕಾರ ಸ್ಥಾಪಿಸಿ ನಿರ್ವಹಣೆ ಮಾಡುತ್ತಿದೆ. ಕಳೆದ ವರ್ಷ ನೆರೆಪೀಡಿತ ಜಿಲ್ಲೆಗಳ ಮಕ್ಕಳಿಗೆ 11 ಲಕ್ಷ ಪಠ್ಯಪುಸ್ತಕ ಮರುಮುದ್ರಣ ಮಾಡಿಕೊಡುವಲ್ಲಿ ತುಸು ಎಡವಟ್ಟಾಗಿದ್ದು ಬಿಟ್ಟರೆ, ಮಕ್ಕಳಿಗೆ ಸಕಾಲಿಕವಾಗಿ ಪಠ್ಯ ಒದಗಿಸಲಾಗಿತ್ತು. 2020-21ನೇ ಶೈಕ್ಷಣಿಕ ವರ್ಷಕ್ಕೂ ಪಠ್ಯ ಒದಗಿಸಲು ಸಂಘ ನವೆಂಬರ್​ನಲ್ಲಿ ಏರ್ಪಾಡು ಮಾಡಿಕೊಂಡು ಟೆಂಡರ್ ಕರೆದು ಬಿಡ್​ದಾರನ್ನು ಅಂತಿಮಗೊಳಿಸಿತ್ತು.
ಒಟ್ಟು 545 ಶೀರ್ಷಿಕೆಯ 120 ಪ್ಯಾಕೇಜ್​ನಲ್ಲಿ ಸುಮಾರು 8 ಕೋಟಿ ಪುಸ್ತಕ ಮುದ್ರಣ ಪ್ರಕ್ರಿಯೆ ಶುರುವಾಗಿತ್ತು. ಬೆಂಗಳೂರು, ಮುಂಬೈ, ಕೋಲ್ಕತದಿಂದ ಈಗಾಗಲೇ ಶೇ.14ರಿಂದ 5 ಪುಸ್ತಕಗಳು ನೂರಕ್ಕೂ ಹೆಚ್ವು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತಲುಪಿವೆ. ಲಾಕ್​ಡೌನ್ ಆದ ಕಾರಣ ಮುದ್ರಣಾಲಯಳಿಗೆ ಬೀಗಮುದ್ರೆ ಬಿದ್ದಿದ್ದು, ಪಠ್ಯಪುಸ್ತಕ ನಿರ್ದಿಷ್ಟ ಅವಧಿಯಲ್ಲಿ ಮುದ್ರಣಗೊಂಡು ಮಕ್ಕಳ ಕೈಸೇರುತ್ತದೆಯೇ ಎನ್ನುವ ಅನುಮಾನ ಕಾಡುತ್ತಿದೆ.
ಹಳೆಯ ಪುಸ್ತಕಗಳೇ ಗತಿ!: ಮೇ 29ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದೆ. 1ರಿಂದ 10ನೇ ತರಗತಿಯ 54,01,876 ಗಂಡು ಹಾಗೂ 50,17,400 ಹೆಣ್ಣು ಮಕ್ಕಳು ಸೇರಿ ಸುಮಾರು 1,04,19,279 ಮಕ್ಕಳಿಗೆ ಪಠ್ಯ ಪೂರೈಕೆ ಮಾಡಬೇಕಿದೆ. ಲಾಕ್​ಡೌನ್ ಅವಧಿ ಅನಿಶ್ಚಿತವಾಗಿರುವುದರಿಂದ ಪಠ್ಯಪುಸ್ತಕ ಸಕಾಲದಲ್ಲಿ ವಿತರಣೆಯಾಗುವ ಭರವಸೆ ಅಧಿಕಾರಿಗಳಲ್ಲಿ ಇಲ್ಲದಾಗಿದೆ. ಈ ಶೈಕ್ಷಣಿಕ ವರ್ಷ ಮುಂದುವರಿಯುವುದರಿಂದ ಬೋಧನೆಗೆ ಅಷ್ಟಾಗಿ ಸಮಸ್ಯೆ ಆಗುವುದಿಲ್ಲ. ಹಳೆಯ ವಿದ್ಯಾರ್ಥಿಗಳ ಪುಸ್ತಕಗಳನ್ನು ಗ್ರಂಥಾಲಯಕ್ಕೆ ವಾಪಸ್ ಪಡೆದು ಬೆಂಚ್ ಒಂದಕ್ಕೆ 1-2 ಮಕ್ಕಳಿಗೆ ಕೊಟ್ಟು ಪಾಠ ಬೋಧನೆ ಮಾಡಲಡ್ಡಿ ಇಲ್ಲ ಎಂದು ಶಿಕ್ಷಕರೊಬ್ಬರು ಪ್ರತಿಕ್ರಿಯಿಸುತ್ತಾರೆ. ತರಗತಿ ಆರಂಭದಿಂದ ಒಂದು ತಿಂಗಳ ಕಾಲ ಸೇತುಬಂಧ ಕಾರ್ಯ ನಡೆಯುತ್ತದೆ. ಅಷ್ಟರಲ್ಲಿ ಪಠ್ಯಪುಸ್ತಕ ಬಂದರೆ ಅನುಕೂಲವಾಗುತ್ತದೆ. ಅದಕ್ಕೂ ವಿಳಂಬವಾದರೆ ಬೋಧನಾ ಕ್ರಿಯೆಯಲ್ಲಿ ವ್ಯತ್ಯಯವಾಗುತ್ತದೆ ಎನ್ನುತ್ತಾರವರು.
ಜೂನ್ ಅಂತ್ಯಕ್ಕೆ ಪುಸ್ತಕ?
ಪಠ್ಯಪುಸ್ತಕ ಮುದ್ರಣಕ್ಕಾಗಿ ಸರ್ಕಾರ 190 ಕೋಟಿ ರೂ. ಮೀಸಲಿಟ್ಟಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆ ಮತ್ತು ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗುವ ಮಕ್ಕಳಿಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ ಒದಗಿಸುತ್ತದೆ. ಲಾಕ್​ಡೌನ್ ಅವಧಿ ಪೂರ್ಣಗೊಂಡ ಬಳಿಕ ಮುದ್ರಣ ಪ್ರಕ್ರಿಯೆ ಶುರುವಾದರೂ ಮಕ್ಕಳ ಕೈ ಸೇರಲು ಜೂನ್ ಅಂತ್ಯ ತಲುಪಬಹುದೆಂದು ಮೂಲಗಳು ಹೇಳುತ್ತಿವೆ.
| ವಿಲಾಸ ಮೇಲಗಿರಿ
ಮಹಾಮಾರಿ ಕರೊನಾ ಸೋಂಕಿತರ ಸೇವೆಗೆ ನಿಂತ ಭಾರತ ಮೂಲದ ಇಂಗ್ಲೆಂಡ್‌ ಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
