|ವಿಲಾಸ ಮೇಲಗಿರಿ/ದೇವರಾಜ್ ಎಲ್.ಬೆಂಗಳೂರು
ರಾಜ್ಯದಲ್ಲಿ ಜು.1ರಂದು ಶಾಲೆ ಆರಂಭಿಸಲು ದಾಖಲಾತಿ ಆಂದೋಲನ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದರೂ ಲಾಕ್​ಡೌನ್ ಕಾರಣದಿಂದ ಆಫ್​ಲೈನ್ ಬೋಧನೆಗೆ ಬೇಕಾದ ಪಠ್ಯಪುಸ್ತಕ 2 ತಿಂಗಳು ವಿಳಂಬವಾಗಿ ಮಕ್ಕಳ ಕೈಸೇರುವ ಸಾಧ್ಯತೆ ಗೋಚರಿಸಿದೆ. ಹೀಗಾಗಿ ಹೊಸ ಪುಸ್ತಕ ಕೈಸೇರುವವರೆಗೆ ಬುಕ್​ಬ್ಯಾಂಕ್ ರೂಪಿಸಿ ಹಳೆಯ ಪಠ್ಯಪುಸ್ತಕದಲ್ಲೇ ಅಭ್ಯಾಸ ಆರಂಭಿಸಲು ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘ ರಾಜ್ಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಈ ಬಾರಿ ಬಜೆಟ್​ನಲ್ಲಿ ಪಠ್ಯಪುಸ್ತಕ ಮುದ್ರಣಕ್ಕಾಗಿ 153 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪಠ್ಯ ಪುಸ್ತಕ ಸಂಘ 350ಕ್ಕೂ ಹೆಚ್ಚು ಶೀರ್ಷಿಕೆಯಡಿ 7 ಕೋಟಿ ಪುಸ್ತಕ ಮುದ್ರಣಕ್ಕೆ ಟೆಂಡರ್ ಕರೆದು, ಪ್ರಕ್ರಿಯೆಗೆ ಚಾಲನೆ ನೀಡಿದೆ. ಬೇರೆ ಬೇರೆ ರಾಜ್ಯಗಳ ಮುದ್ರಕರೂ ಇದರಲ್ಲಿ ಭಾಗವಹಿಸಲಿದ್ದಾರೆ. ಟೆಂಡರ್ ಅಂತಿಮಗೊಂಡ ಮುದ್ರಣಾಲಯಗಳಿರುವ ರಾಜ್ಯಗಳಲ್ಲಿ ಲಾಕ್​ಡೌನ್ ಇದ್ದಲ್ಲಿ ಪಠ್ಯಪುಸ್ತಕ ಮುದ್ರಣ ವಿಳಂಬವಾಗುವುದು ನಿಶ್ಚಿತವಾಗಿದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ 2-3 ತಿಂಗಳು ಹಿಡಿಯಬಹುದೆಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮೇ 29 ಅಥವಾ 30ರಂದು ಶಾಲಾ ಪ್ರಾರಂಭೋತ್ಸವ ಮಾಡಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಪರಿಪಾಠವಿದೆ. ಅದಕ್ಕೂ ಮುನ್ನ ಪ್ರತಿ ಶಾಲೆಗಳಿಗೂ ಪಠ್ಯಪುಸ್ತಕ ತಲುಪುತ್ತಿದ್ದವು.
ವರ್ಕ್ ಬುಕ್ ಇಲ್ಲ:ಪ್ರತಿ ವರ್ಷದಂತೆ ಈ ವರ್ಷ ಉಚಿತವಾಗಿ ವರ್ಕ್ ಬುಕ್ ಕೊಡದಿರಲು ಸರ್ಕಾರ ನಿರ್ಧರಿಸಿದೆ. ಕಾರಣ 8 ಕೋಟಿ ಪುಸ್ತಕ ವಿತರಿಸುತ್ತಿದ್ದ ಕರ್ನಾಟಕ ಪುಸ್ತಕ ಸಂಘ ಈ ವರ್ಷ 7 ಕೋಟಿ ಪಠ್ಯಪುಸ್ತಕಕ್ಕಷ್ಟೇ ಟೆಂಡರ್ ಕರೆದಿದೆ.
ಸಂಗ್ರಹ ಹೇಗೆ?:ಪ್ರತಿ ವರ್ಷ 50 ಸಾವಿರ ಶಾಲೆಗಳಿಗೆ 1.25 ಕೋಟಿ (ಅನುದಾನಿತ 1ರಿಂದ 8ನೇ ತರಗತಿ ಮಕ್ಕಳು ಸೇರಿ) ಪಠ್ಯಪುಸ್ತಕವನ್ನು ಸರ್ಕಾರ ಉಚಿತವಾಗಿ ವಿತರಿಸುತ್ತದೆ. ಈ ವರ್ಷ ಪುಸ್ತಕ ವಿತರಣೆ ವಿಳಂಬವಾಗುವುದರಿಂದ ಕಳೆದ ವರ್ಷ ಪಾಸ್ ಆಗಿರುವ ವಿದ್ಯಾರ್ಥಿಗಳ ಪಠ್ಯಪುಸ್ತಕವನ್ನು ಪಡೆದು ಶಾಲೆಗಳಲ್ಲಿ ಬುಕ್ ಬ್ಯಾಂಕ್ ರೂಪಿಸಿ ಇಟ್ಟುಕೊಳ್ಳಬೇಕು. ಹೊಸ ಪಠ್ಯಪುಸ್ತಕ ಬರುವವರೆಗೂ ಇದನ್ನೇ ವಿದ್ಯಾರ್ಥಿಗಳಿಗೆ ನೀಡಿ ಶೈಕ್ಷಣಿಕ ವರ್ಷಕ್ಕೆ ತೊಡಕಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ತರಗತಿ ಆರಂಭವಾದ ನಂತರ ಒಂದು ತಿಂಗಳು ಸೇತುಬಂಧ ಪುನರ್ ಮನನ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಶಾಲೆ ಆರಂಭವಾದ ತಕ್ಷಣವೇ ಹೊಸ ಪಠ್ಯ ಪುಸ್ತಕ ಅಗತ್ಯವೇನೂ ಇಲ್ಲ ಎಂದು ಶಿಕ್ಷಕರು ಹೇಳುತ್ತಾರೆ.
ಪಠ್ಯ ಕಡಿತಕ್ಕೆ ಮನವಿ:ಕರೊನಾ ಭೀತಿ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳಿಗಿಂತ ಆನ್​ಲೈನ್ ಸೇರಿ ಪರ್ಯಾಯ ಬೋಧನೆಗೆ ಆಲೋಚಿಸಿ ಕನಿಷ್ಠ ಮತ್ತು ಅವಶ್ಯ ಪಠ್ಯವನ್ನು ಮಾತ್ರ ಅಳವಡಿಸಬೇಕು. ಕಡಿಮೆ ಪಠ್ಯ ಒಳಗೊಂಡ 2-3 ಪುಸ್ತಕಗಳನ್ನು ಮಾತ್ರ ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನು ಶಿಕ್ಷಕರ ಸಂಘಟನೆಗಳು ಆಯುಕ್ತರ ಮುಂದಿಟ್ಟಿವೆ.
2021-22ನೇ ಸಾಲಿನಲ್ಲಿ ನಿಗದಿತ ಪ್ರಮಾಣದ ಶೈಕ್ಷಣಿಕ ದಿನಗಳು ಸಿಗುವುದು ಕಷ್ಟ. ಕಾರಣ ಪೂರ್ಣ ಪಠ್ಯ ಬೋಧನೆ ಇನ್ನೂ ಕಷ್ಟ. ಹಾಗಾಗಿ ಸರ್ಕಾರ ಪಠ್ಯ ಕಡಿತಗೊಳಿಸಿ ಅಗತ್ಯ ಪಠ್ಯವನ್ನು ಮಾತ್ರ ಅಳವಡಿಸಬೇಕು.
|ಶಂಭುಲಿಂಗನೌಡ ಪಾಟೀಲಅಧ್ಯಕ್ಷರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಕೋವಿಡ್ ಕಾರಣದಿಂದ ಪಠ್ಯಪುಸ್ತಕ ಮುದ್ರಣ ಟೆಂಡರ್ ಪ್ರಕ್ರಿಯೆ ತಡವಾಗಿದೆ. ಶೀಘ್ರದಲ್ಲೇ ಟೆಂಡರ್ ಅಂತಿಮಗೊಳಿಸಿ ತಿಂಗಳಲ್ಲಿ ಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
|ಎಂ.ಪಿ. ಮಾದೇಗೌಡವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪಠ್ಯಪುಸ್ತಕ ಸಂಘ
ಗೃಹಿಣಿ ಆಗುತ್ತಿರುವ ಬಾಲೆಯರು!; ಬಾಲ್ಯವನ್ನೇ ಕಸಿಯುತ್ತಿದೆ ಕರೊನಾ..

ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಡೈರೆಕ್ಟ್ ಮಾನೆಟೈಸೇಶನ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
