ಬೆಂಗಳೂರು:ಚಿತ್ರನಟರೊಬ್ಬರ ವಿಷಯ ಇಬ್ಬರು ರಾಜಕಾರಣಿಗಳ ನಡುವಿನ ಟೀಕೆ ಪ್ರತಿಕ್ರಿಯೆಗೆ ವೇದಿಕೆಯಾಗಿದೆ. ಒಂದು ಸಣ್ಣ ಫೋಟೋ ಸುರೇಶ್​ ವರ್ಸಸ್ ಸುರೇಶ್ ಎಂಬಂಥ ವಾತಾವರಣ ಸೃಷ್ಟಿಸಿದೆ.
ರಾಜ್ಯದ ತರಗತಿಯೊಂದರ ಪುಸ್ತಕದಲ್ಲಿ ‘ಅಂಚೆಯಣ್ಣ’ ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಬಿಜೆಪಿ ಸರ್ಕಾರದ ಕಾರ್ಯ ಎಂದು ಬಣ್ಣಿಸಿ, ಇದು ಯಾರ ನಿರ್ದೇಶನದಲ್ಲಿ ಮಾಡಿರುವುದು ಎಂದು ಕೇಳಿ ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದರು. ಅದಕ್ಕೆ ಮಾಜಿ ಶಿಕ್ಷಣ ಸಚಿವ ಎಸ್​. ಸುರೇಶ್​ಕುಮಾರ್​ ಪ್ರತಿಕ್ರಿಯಿಸಿ, ಡಿ.ಕೆ.ಸುರೇಶ್​ ಅವರನ್ನು ಮಾತಿನಲ್ಲೇ ಕುಟುಕಿದ್ದಾರೆ.
ಇದನ್ನೂ ಓದಿ:ಅಮ್ಮನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದವ ಬಾವಿಯಲ್ಲಿ ಶವವಾಗಿ ಪತ್ತೆ!
ಸಂಸದ ಡಿ.ಕೆ.ಸುರೇಶ್ ಅವರ ಅವಸರದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಇಂದಿನ ಮಾಧ್ಯಮಗಳಲ್ಲಿ ವರದಿಯಾಗಿರುವ ಸಂಸದ ಸುರೇಶ್ ಅವರ ಆರೋಪ ಹಾಗೂ ಅವರು ಸ್ಪಷ್ಟೀಕರಣ ನಿರೀಕ್ಷಿಸಿರುವುದಕ್ಕೆ ಎಸ್​.ಸುರೇಶ್​ಕುಮಾರ್​ ಪ್ರತಿಕ್ರಿಯೆ ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ:ಮನೆಯಲ್ಲಿ ಸಿಲಿಂಡರ್ ಸ್ಫೋಟ: ಸಹೋದರರಿಬ್ಬರ ಸಾವು, ಇನ್ನು ಮೂವರ ಸ್ಥಿತಿ ಚಿಂತಾಜನಕ..
ಡಿ.ಕೆ.ಸುರೇಶ್​ರವರೇ.. ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು. ಇದು ಖಂಡಿತ ನಮ್ಮ ರಾಜ್ಯದ ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ. (ಇದರ ಫೋಟೋ ಲಗತ್ತಿಸಿದ್ದೇನೆ). ರಾಜ್ಯ ಪಠ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲದ‌, ಯಾವುದೋ ಖಾಸಗಿ ಸಂಸ್ಥೆಯವರು ಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರ ತೋರಿಸಿ ಅದನ್ನೂ ಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣವೆಂದು ಬಣ್ಣಿಸುವ ನಿಮ್ಮ ಪ್ರಯತ್ನಕ್ಕೆ‌ ಅರ್ಥವಿಲ್ಲ. ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು ಅಥವಾ ನೀವೇ ದಾರಿ ತಪ್ಪಿರಬೇಕು! ಎಂದು ಸುರೇಶ್​ಕುಮಾರ್​ ಟೀಕಿಸಿದ್ದಾರೆ.
ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
