ಬೆಂಗಳೂರು:ಪ್ರಗತಿಪರ ಸಾಹಿತಗಳಾದ ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ದೇವನೂರು ಮಹಾದೇವ, ಮುಡ್ನಾಕೂಡು ಚಿನ್ನಸ್ವಾಮಿ, ನಾಗೇಶ್ ಹೆಗಡೆ ಸೇರಿ ಹಲವರ ಸಾಹಿತ್ಯ ಕೃತಿಗಳನ್ನು 2024-25ನೇ ಶೈಕ್ಷಣಿಕ ವರ್ಷದಿಂದಲೇ ಶಾಲಾ ಪಠ್ಯಪುಸ್ತಕಗಳಲ್ಲಿ ಮರು ಪರಿಚಯಿಸಲು ಸರ್ಕಾರ ತೀರ್ವನಿಸಿದೆ.
ನಿವೃತ್ತ ಪ್ರಾಧ್ಯಾಪಕ ಪೊ›.ಮಂಜುನಾಥ. ಜಿ.ಹೆಗಡೆ (ಎಂ.ಜಿ.ಹೆಗಡೆ) ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಕೈಬಿಟ್ಟಿದ್ದ ಕನ್ನಡದ ವಿವಿಧ ಪ್ರಗತಿಪರ ಲೇಖಕರ ಕೃತಿಗಳನ್ನು ಪಠ್ಯದಲ್ಲಿ ಮರು ಪರಿಚಯಿಸಲು ನಿರ್ಧರಿಸಿದೆ.
ಗಿರೀಶ್ ಕಾರ್ನಾಡರ ‘ಅಧಿಕಾರ’, ಪಿ.ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’, ಮುಡ್ನಾಕೂಡು ಚಿನ್ನಸ್ವಾಮಿ ಅವರ ‘ಸಮುದ್ರ ಚುಂಬನ’, ಮುಂತಾದ ಲೇಖಕರ ಗದ್ಯ ಮತ್ತು ಕವನಗಳನ್ನು ಮತ್ತೆ ಪರಿಚಯಿಸಲು ಸಮಿತಿ ನಿರ್ಧರಿಸಿದೆ.
ಚಂದ್ರಶೇಖರ ಕಂಬಾರರ ’ಸೀಮೆ’, ಅಕ್ಕಮಹಾದೇವಿಯವರ ’ವಚನಗಳು’ ಮತ್ತು 8 ರಿಂದ 10ನೇ ತರಗತಿವರೆಗಿನ ಭಾಷೆಯ ಕನ್ನಡ ಪಠ್ಯ ಪುಸ್ತಕಗಳಲ್ಲಿ ನಾಗೇಶ ಹೆಗಡೆಯವರ ಲೇಖನಗಳನ್ನು ಸೇರಿಸಲಾಗಿದೆ. ದೇವಿದಾಸರ ‘ಚಕ್ರಗ್ರಹಣ’, ಮರಿಯಪ್ಪ ಭಟ್ಟರ ‘ನಮ್ಮ ಭಾಷೆ’, ಎ.ಎನ್.ಮೂರ್ತಿ ರಾವ್ ಅವರ ‘ವ್ಯಾಘ್ರ ಗೀತೆ’ ಹೊಸದಾಗಿ ಸೇರ್ಪಡೆಗೊಂಡವು. 1 ರಿಂದ 5ನೇ ತರಗತಿಯ ಕನ್ನಡ ಭಾಷೆಯಲ್ಲಿ ಕೆ.ವಿ. ತಿರುಮಲೇಶ್ ಮತ್ತು ವಿ.ಜಿ. ಭಟ್ ಅವರ ಮಕ್ಕಳ ಕವಿತೆ ಸೇರಿಸಲಾಗಿದೆ.
ಯಥಾವತ್ ಮುದ್ರಣಕ್ಕೆ:ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಜಿ.ಹೆಗಡೆ ನೇತೃತ್ವದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಪರಿಷ್ಕೃತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, 2024-25ನೇ ಸಾಲಿನಿಂದ ಹೊಸ ಪಠ್ಯಪುಸ್ತಕವನ್ನು ಸರ್ಕಾರ ಮುದ್ರಿಸಿ ಶಾಲೆಗೆ ಹಂಚಿಕೆ ಮಾಡಲು ನಿರ್ಧರಿಸಿದೆ. 1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, 9-10ನೇ ತರಗತಿಯ ಕನ್ನಡ ತೃತೀಯ ಭಾಷೆ, 6-10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ. ಈ ವರದಿಯನ್ನು ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆಯು 2024-25ನೇ ಸಾಲಿನಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಪರಿಷ್ಕೃತ ಪಠ್ಯವನ್ನು ಯಥಾವತ್ ಮುದ್ರಣಕ್ಕೆ ಕಳುಹಿಸಿದೆ.
114 ಪಠ್ಯಗಳ ಪರಿಷ್ಕರಣೆ:6-10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯದ 7 ಮಾಧ್ಯಮಗಳ 70 ಪರಿಷ್ಕೃತ ಪಠ್ಯಪುಸ್ತಕವನ್ನು ಹಾಗೂ 1-10ನೇ ತರಗತಿಗಳ ಕನ್ನಡ ಭಾಷಾ ವಿಷಯದ 44 ಪರಿಷ್ಕೃತ ಪಠ್ಯಪುಸ್ತಕ ಸೇರಿ ಒಟ್ಟು 114 ಪಠ್ಯಪುಸ್ತಕವನ್ನು ಜಾರಿಗೆ ತರಲು ಅನುಮತಿ ನೀಡಿದೆ.
ಕನ್ನಡ ಭಾಷೆ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ವ್ಯಾಕರಣಾಂಶಗಳು, ಲೇಖಕರು, ಕವಿಗಳು, ಚಿತ್ರಗಳು, ಭೂಪಟಗಳು, ನಕ್ಷೆಗಳು, ಅಂಕಿ-ಅಂಶಗಳು ಹಾಗೂ ಆಧಾರಗಳಿಗೆ ಸಮಿತಿಯು ಸಂಯೋಜಕರು, ಅಧ್ಯಕ್ಷರು, ಹಾಗೂ ಸದಸ್ಯರು ಜವಾಬ್ದಾರರಾಗಿದ್ದು, ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆ ಬಂದಲ್ಲಿ ಸಮಿತಿಯ ಸಂಯೋಜಕರಾದ ಮಂಜುನಾಥ ಹೆಗಡೆ ಅವರೇ ಉತ್ತರಿಸುವ ಜವಾಬ್ದಾರಿ ಹೊಂದಿರುತ್ತಾರೆಂದು ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕಗಳು, ಸಂವಿಧಾನದ ಪ್ರಸ್ತಾವನೆ, ಲಿಂಗ ಸೂಕ್ಷ್ಮತೆ, ಮಕ್ಕಳ ಹಕ್ಕುಗಳ ಕುರಿತ ಮಾಹಿತಿ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳು, ವೈಜ್ಞಾನಿಕ ಮನೋಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಷ್ಕರಣೆ ಪ್ರಮುಖ ಅಂಶಗಳು:– ಕಂಬಾರ-‘ಸೀಮೆ’, ಕಾರ್ನಾಡ್- ‘ಅಧಿಕಾರ’, ದೇವಿದಾಸ- ‘ಚಕ್ರಗ್ರಹಣ’, ಮರಿಯಪ್ಪ ಭಟ್ಟ- ‘ನಮ್ಮ ಭಾಷೆ’, ಎ.ಎನ್.ಮೂರ್ತಿರಾವ್- ‘ವ್ಯಾಘ್ರ ಗೀತೆ’, ದೇವನೂರು ಮಹಾದೇವ- ‘ಎದೆಗೆ ಬಿದ್ದ ಅಕ್ಷರ’, ಅಕ್ಕಮಹಾದೇವಿ- ‘ವಚನಗಳು’ ಸೇರ್ಪಡೆ 9-10ನೇ ತರಗತಿ ಕನ್ನಡ: ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 19 =
Remember me
