ಬೆಂಗಳೂರು:ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಂದುವರಿದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಯಾವ ಪಾಠವನ್ನು ಬೋಧಿಸಬೇಕು ಮತ್ತು ಯಾವ ಪಾಠವನ್ನು ಬೋಧಿಸಬಾರದು ಎನ್ನುವ ಬಗ್ಗೆ ಶಿಕ್ಷಕರಲ್ಲಿ ಗೊಂದಲ ಮೂಡಿವೆ. ಈ ಮಧ್ಯೆ ಜನಾಭಿಪ್ರಾಯ ಮೊರೆ ಹೋಗಿರುವ ಶಿಕ್ಷಣ ಇಲಾಖೆ, ಪಠ್ಯವನ್ನು ಮರು ಮುದ್ರಿಸದೇ ಸರಿಪಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಲೋಪವಾದ ಪಾಠಗಳನ್ನಷ್ಟೇ ಪ್ರತ್ಯೇಕವಾಗಿ ಮುದ್ರಿಸಿ ಮಕ್ಕಳಿಗೆ ನೀಡುವ ಯೋಜನೆ ರೂಪಿಸಿದೆ. ಆದರೆ, ಹೆಚ್ಚಿನ ಭಾಗ ತಪು್ಪ ಕಂಡುಬಂದಿರುವುದರಿಂದ ಹೇಗೆ ಪಾಠಗಳನ್ನು ಮಾರ್ಪಡಿಸುವುದು. ಪರ್ಯಾಯ ಪಠ್ಯ ಮುದ್ರಿಸಿ ನೀಡುವುದು ಹೇಗೆ ಎನ್ನುವ ಗೊಂದಲ ಸರ್ಕಾರಕ್ಕೂ ಕಾಡಿದೆ. ಮರುಮುದ್ರಣಕ್ಕೆ ಮುಂದಾದರೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಹೊರೆ ಬೀಳುತ್ತದೆ. ಈಗಾಗಲೆ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ಮುದ್ರಣಕ್ಕೆ ಅಂದಾಜು 158 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ಪುಸ್ತಕ ಮತ್ತೆ ಮರು ಮುದ್ರಣ ಮಾಡುವ ನಿರ್ಧಾರ ತೆಗೆದುಕೊಂಡರೆ ಅಷ್ಟೇ ಹಣ ಖರ್ಚಾಗುತ್ತದೆ. ಈಗಾಗಲೆ ರಾಜ್ಯದಲ್ಲಿ ಶಾಲೆಗಳು ಶುರುವಾಗಿದ್ದು, ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಈ ನಡುವೆ ಮತ್ತೆ ಮರು ಮುದ್ರಣ ಮಾಡಿದರೆ ಕೆಲ ಸಮಸ್ಯೆಗಳು ಎದುರಾಗುತ್ತವೆ.
ಪರಿಷ್ಕರಣೆಗೂ ಅಪಸ್ವರ: ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪರಿಷ್ಕರಣೆಗೂ ಹಾಗೂ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪರಿಷ್ಕರಣೆಗೂ ಅಂತಹ ಬದಲಾವಣೆಯಿಲ್ಲ. ಕೇವಲ ಎರಡು ಸಾಲಿನ ಬದಲಾವಣೆ ಅಷ್ಟೇ. ಈ ಹಿಂದಿನ ಪಠ್ಯ ಪುಸ್ತಕದಲ್ಲಿ ಬಸವಣ್ಣ ಉಪನಯನ ಆದ ಮೇಲೆ ಜನಿವಾರ ಕಿತ್ತು ಹಾಕಿ ಹೋದರು ಅಂತಾ ಇತ್ತು. ಈಗಿನ ಪಠ್ಯ ಪುಸ್ತಕದಲ್ಲಿ ಉಪನಯನವಾದ ಮೇಲೆ ಹೋದರು ಎಂದಿದೆ. ಮತ್ತೊಂದು ವಿಷಯವೆಂದರೆ ಬಸವಣ್ಣ ವೈದಿಕ ಸಂಸ್ಕೃತಿಗಳ ನೀಚ ಪದ್ಧತಿಗಳನ್ನು ವಿರೋಧಿಸಿದರು ಎಂದು ಇತ್ತು. ನೀಚ ಪದ್ಧತಿ ಎಂಬ ಪದವನ್ನು ಬಸವಣ್ಣ ಅಂತಹವರಿಗೆ ಬಳಕೆ ಮಾಡಬಾರದು ಎಂಬುದು ಪರಿಷ್ಕರಣಾ ಸಮಿತಿಯ ಅಭಿಪ್ರಾಯವಾಗಿತ್ತು. ಹೀಗಾಗಿ ನೀಚ ಎಂಬ ಪದವನ್ನು ತೆಗೆದು ಹಾಕಿದ್ದೇವೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಬಸವಣ್ಣ ಇರುವ ವ್ಯವಸ್ಥೆಯನ್ನು ಸರಿಪಡಿಸಲು ಮನೆ ಬಿಟ್ಟು ಹೋಗಿದ್ದಾರೆ. ಬಸವಣ್ಣ ನೀಚ ಮತ್ತು ಉಚ್ಚ ಪದಗಳನ್ನು ಬಳಕೆ ಮಾಡಿರಲಿಲ್ಲ ಎಂದು ಸಮಿತಿಯವರ ಅಭಿಪ್ರಾಯವಾಗಿದೆ. ಇದಕ್ಕೆ ಆಕ್ಷೇಪಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಪನಯನ ಮತ್ತು ಲಿಂಗ ದೀಕ್ಷೆ ಬಗ್ಗೆ ತೆಗೆಯಲು ಮುಂದಾಗಿದ್ದೇವೆ. ಇದಕ್ಕೂ ಕೂಡ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದು ಕೂಡ ತಪು್ಪ ಎಂದು ಕೆಲವರು ಹೇಳುತ್ತಿದ್ದಾರೆ. ಮುಂದೆ ಏನಾಗುತ್ತೊ ಗೊತ್ತಿಲ್ಲ. ಕಳೆದ 5 ವರ್ಷ ಅದೇ ಪಠ್ಯ ಪುಸ್ತಕವಿತ್ತು ಅಂದು ಯಾರದ್ದು ಕೂಡ ವಿರೋಧ ಇರಲಿಲ್ಲ. ಆದರೆ ಇಂದು ಪಠ್ಯ ಪುಸ್ತಕ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಕಾರಣಕ್ಕಾಗಿ ವಿರೋಧ ಮಾಡ ಲಾಗುತ್ತಿದೆ. ಬಸವಣ್ಣನ ಒಂದು ಪಾಠದ ಬಗ್ಗೆ ಮಾತ್ರ ಗೊಂದಲವಿದೆ. ಉಳಿದ 677 ಪಾಠಗಳಲ್ಲಿ ಗೊಂದಲವಿಲ್ಲ. ಆ ಪಾಠ ಮಾಡುವ ಸಮಯ ಡಿಸೆಂಬರ್ ಅಥವಾ ಜನವರಿಗೆ ಬರಲಿದೆ ಅಷ್ಟರ ಹೊತ್ತಿಗೆ ಎಲ್ಲ ಗೊಂದಲ ಮುಗಿಯಲಿವೆ ಎಂದು ನಾಗೇಶ್ ವಿಜಯವಾಣಿಗೆ ತಿಳಿಸಿದ್ದಾರೆ.
ಪಠ್ಯ ಮರು ಮುದ್ರಿಸುವುದಿಲ್ಲ:ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಸಂಪೂರ್ಣ ವಾಗಿ ಮುಗಿದಿದೆ. ಪಠ್ಯವನ್ನು ಮರುಮುದ್ರಿಸು ವುದಿಲ್ಲ. ಈ ಬಗ್ಗೆ ಅಂತಿಮ ನಿರ್ಣಯಗಳನ್ನು ಕೈಗೊಳ್ಳ ಲಾಗಿದೆ. ಈಗಾಗಲೆ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಸಣ್ಣ-ಪುಟ್ಟ ಆಕ್ಷೇಪಗಳು ಕೇಳಿ ಬಂದಿವೆ ಅದನ್ನು ಸರಿಪಡಿಸುತ್ತೇವೆ. 3-4 ಪುಟವಷ್ಟೇ ಸರಿಪಡಿಸ ಬೇಕಿದೆ. ಮುಂದಿನ ನಿರ್ಧಾರವನ್ನು ಮುಖ್ಯಮಂತ್ರಿ ಗಳಿಗೆ ಬಿಟ್ಟಿದ್ದೇವೆ ಎಂದು ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
