ರಾಯಚೂರು:ನಿವೃತ್ತಿ ನಂತರ ಬಂದ ಹಣದಲ್ಲಿ ಆರಾಮವಾಗಿ ಬದುಕು ಸಾಗಿಸಬೇಕು ಎನ್ನುವ ಮನೋಭಾವ ಹೊಂದಿರುವ ಜನರ ಮಧ್ಯೆ ನಿವೃತ್ತಿಯ ನಂತರ ತಮ್ಮ ಬದುಕನ್ನು ಬಡ ವಿದ್ಯಾರ್ಥಿಗಳ ಬದುಕಿನ ಏಳಿಗೆಗಾಗಿ ಮೀಸಲಿಟ್ಟಿರುವ ಈರಪ್ಪ ಸುಗೂರು ಪ್ರತ್ಯೇಕವಾಗಿ ಕಾಣುತ್ತಾರೆ. ಶಾಲಾ, ಕಾಲೇಜು ಓದುವ ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ದೂರ ಪ್ರತಿನಿತ್ಯ ಹೋಗುವುದನ್ನು ಕಂಡು ಸಿಂಧನೂರು ತಾಲೂಕು ಅಂಬಾಮಠದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ವಸತಿ ನಿಲಯವನ್ನು ಸ್ಥಾಪಿಸುವ ಮೂಲಕ 200 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕಿಗೆ 76 ವರ್ಷದ ಇಳಿ ವಯಸ್ಸಿನಲ್ಲಿಯೂ ಈರಪ್ಪ ಸುಗೂರು ಆಸರೆಯಾಗಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಈರಪ್ಪ ಸುಗೂರು, ವಾಣಿಜ್ಯ ತೆರಿಗೆ ಅಧಿಕಾರಿಗಾಗಿ ಸೇವೆ ಆರಂಭಿಸಿ ಬಳ್ಳಾರಿ, ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಸೇರಿ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸಿ 2002ರಲ್ಲಿ ನಿವೃತ್ತಿ ಹೊಂದಿದರು. ಸಿಂಧನೂರಿನ ಅಂಬಾಮಠಕ್ಕೆ ಅಂಬಾದೇವಿ ದರ್ಶನಕ್ಕೆ ಆಗಮಿಸುತ್ತಿದ್ದಾಗ ಮಕ್ಕಳು ನಡೆದುಕೊಂಡು ಶಾಲೆ, ಕಾಲೇಜಿಗೆ ಹೋಗುತ್ತಿರುವುದನ್ನು ಕಂಡು ಅವರಿಗಾಗಿ ವಸತಿ ನಿಲಯ ಆರಂಭಿಸುವ ಚಿಂತನೆ ಮಾಡಿದರು.
ಅಂಬಾಮಠದ ಹತ್ತಿರ ಜಾಗ ಖರೀದಿ ಮಾಡಿ ನಿವೃತ್ತಿ ನಂತರ ಬಂದ 20 ಲಕ್ಷ ರೂ.ನ್ನು ತೊಡಗಿಸಿ 2004ರಲ್ಲಿ ಆರಂಭವಾದ ವಸತಿ ನಿಲಯ 50 ಬಾಲಕಿಯರಿಂದ ಆರಂಭವಾಗಿದ್ದು, ಪ್ರಸ್ತುತ 170 ಬಾಲಕಿಯರು ಹಾಗೂ 30 ಬಾಲಕರಿಗೆ ಆಶ್ರಯ ಕಲ್ಪಿಸಿದೆ. ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ಅಂಬಾಮಠದಲ್ಲಿರುವ ಶಾಲೆ, ಕಾಲೇಜುಗಳಲ್ಲಿ ಓದುವ ಸುತ್ತಮುತ್ತಲ ಸಿಂಗಾಪುರ, ಮುಕುಂದ, ಸೋಮಲಾಪುರ, ರೌಡಕುಂದಾ, ಗೊರೆಬಾಳ, ಸಾಲಗುಂದಾ ಸೇರಿ ಹಲವು ಗ್ರಾಮಗಳ ಮಕ್ಕಳು ವಸತಿ ನಿಲಯದಲ್ಲಿದ್ದು ಅಭ್ಯಾಸ ಮಾಡುತ್ತಿದ್ದಾರೆ. ಈರಪ್ಪ ಸುಗೂರು ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಶ್ರೀ ಅಂಬಾದೇವಿ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ 1 ರಿಂದ 7ನೇ ತರಗತಿವರೆಗೆ ಶಾಲೆಯನ್ನು ಆರಂಭಿಸಿದ್ದಾರೆ.
ಈರಪ್ಪರ ಸೇವಾ ಕಾರ್ಯವನ್ನು ಕಂಡು ಕಟ್ಟಡ ನಿರ್ವಣಕ್ಕಾಗಿ ಹಿಂದೆ ಕೊಪ್ಪಳ ಸಂಸದರಾಗಿದ್ದ ಎಚ್.ಜಿ.ರಾಮುಲು, ಶಿವರಾಮೇಗೌಡ ಹಾಗೂ ಮಾಜಿ ಶಾಸಕ ಹಂಪನಗೌಡ ಬಾರ್ದಲಿ ತಲಾ ಐದು ಲಕ್ಷ ರೂ.ಗಳನ್ನು ನೀಡಿದ್ದಾರೆ. ಜತೆಗೆ ಸರ್ಕಾರ 2006-07ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಮಾಸಿಕ ತಲಾ ಒಂದು ಸಾವಿರ ರೂ.ನಂತೆ ನೀಡಲು ಆರಂಭಿಸಿದೆ.
ಈರಪ್ಪ ಸುಗೂರು ಆರಂಭದಲ್ಲಿ ವಸತಿ ನಿಲಯ ಆರಂಭಿಸಿದಾಗ ಸುತ್ತಮುತ್ತಲ ಗ್ರಾಮಸ್ಥರು ವ್ಯವಹಾರಿಕ ದೃಷ್ಟಿಯಿಂದ ವಸತಿ ನಿಲಯ ಆರಂಭಿಸಿರಬುದು ಎಂದು ಭಾವಿಸಿದ್ದರು. ಆದರೆ ಆರ್ಥಿಕ ಸಂಕಷ್ಟದ ನಡುವೆಯೂ ಈರಪ್ಪ ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ನೀಡುತ್ತಿರುವ ಪ್ರೋತ್ಸಾಹ, ಸೌಲಭ್ಯಗಳನ್ನು ಕಂಡು ಅವರ ಬೆಂಬಲಕ್ಕೆ ನಿಲ್ಲಲು ಆರಂಭಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 9 =
Remember me
