ದಾವಣಗೆರೆ:ದಾವಣಗೆರೆ ಎಂದ ಕೂಡಲೇ ಬೆಣ್ಣೆ ದೋಸೆ ಜತೆಗೆ ಮಂಡಕ್ಕಿ ಮೆಣಸಿನಕಾಯಿ ಸಹಜವಾಗಿ ನೆನಪಾಗುತ್ತದೆ. ಆದರೆ ಸದ್ಯ ಕರೊನಾ ವೈರಸ್​ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆಯಾಗಿರುವ ಕಾರಣ ಇವುಗಳ ಮಾರಾಟವೂ ಬಂದ್​ ಆಗಿದೆ.
ಹೀಗಿದ್ದೂ ಜಿಲ್ಲೆಯ ಹರಿಹರದ ಭರಂಪುರದಲ್ಲಿ ವ್ಯಕ್ತಿಯೊಬ್ಬ ಮೆಣಸಿನಕಾಯ ಬಜ್ಜಿ ಮಾರಾಟದ ಕಾಯಕವನ್ನು ಎಂದಿನಂತೆ ಶುಕ್ರವಾರವೂ ಮುಂದುವರಿಸಿದ್ದ. ಲಾಕ್​ಡೌನ್​ ಇದ್ದರೂ ಮನೆಯಲ್ಲೇ ಇದ್ದು ಬೇಸರಗೊಂಡಿದ್ದ ಜನರು ತಮ್ಮ ಜಿಹ್ವಾ ಚಪಲ ತೀರಿಸಿಕೊಳ್ಳಲು ಮೆಣಸಿನಕಾಯಿ ಬಜ್ಜಿ, ಮಂಡಕ್ಕಿ ತಿನ್ನಲು ಮುಗಿಬಿದ್ದಿದ್ದರು.
ವಿಷಯ ತಿಳಿದ ತಹಸೀಲ್ದಾರ್​ ರಾಮಚಂದ್ರಪ್ಪ ನಗರಸಭೆ ಆಯುಕ್ತರ ಜತೆಗೂಡಿ ಸ್ಥಳಕ್ಕೆ ತೆರಳಿ, ಮೆಣಸಿನಕಾಯ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಗೆ ವ್ಯಾಪಾರ ನಿಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾರಾದರೂ ಮನೆಯಿಂದ ಹೊರಬರುವ ದುಸ್ಸಾಹ ಮತ್ತೊಮ್ಮೆ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ನರ್ಸ್​ ಸರಸ್ವತಿ ಕ್ವಾರಂಟೈನ್​ನಲ್ಲಿದ್ದರು, ಬಹಿಷ್ಕಾರ ಹಾಕಿಲ್ಲ: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 7 =
Remember me
