ನಾಗಪುರ(ಮಹಾರಾಷ್ಟ್ರ):ವಿದ್ಯೆಯಿಂದ ಪ್ರಬುದ್ಧತೆ ಬೆಳೆಯಬೇಕು.ಆದರೆ ಆಧುನಿಕ ವಿದ್ಯೆ,ತಂತ್ರಜ್ಞಾನಗಳು ಪ್ರಬುದ್ಧತೆಗಿಂತ ಅಸತ್ಯವನ್ನು ಬೆಂಬಲಿಸುವಂತಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರ ವಿಕಾಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚುನಾವಣೆ ಎನ್ನುವುದು ದೇಶದಲ್ಲಿ ಒಮ್ಮತ ಮೂಡಿಸುವ ಪ್ರಕ್ರಿಯೆ.ಸಂಸತ್ತಿನಲ್ಲಿ ಯಾವುದೇ ಪ್ರಶ್ನೆ ಎದ್ದಾಗ ಎರಡೂ ಕಡೆಯವರು ಸಮಾನ ಮನಸ್ಕರಾಗಿ ಯೋಚಿಸಬೇಕಾದ ವ್ಯವಸ್ಥೆ ಬರಬೇಕು.ಆದರೆ ಚುನಾವಣಾ ಪ್ರಚಾರದಲ್ಲಿ ಪರಸ್ಪರ ಟೀಕಿಸುವುದು,ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುವುದು ಉತ್ತಮ ಬೆಳವಣಿಗೆಯಲ್ಲ.
ಒಮ್ಮತದಿಂದ ಕೆಲಸ ಮಾಡುವುದು ನಮ್ಮ ಸಂಸ್ಕೃತಿ.ನಾವು ಎಷ್ಟೇ ಸಬಲರಾದರೂ ಉತ್ತಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕು.ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಲು ನಮ್ಮ ಪೂರ್ವಜರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂಬುದನ್ನು ಯುವ ಪೀಳಿಗೆ ಮರೆಯಬಾರದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜಸ್ಥಾನದ ಶ್ರೀಕ್ಷೇತ್ರ ಗೋದಾವರಿ ಧಾಮದ ಪೀಠಾಧೀಶ ಮಹಂತ ಗುರುದೇವ ಶ್ರೀರಾಮಗಿರಿ ಮಹಾರಾಜರು ಮಾತನಾಡಿ,ಅನುಕೂಲ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಮರ್ಪಣಾ ಭಾವ,ಸಮೃದ್ಧಿ ಹಾಗೂ ಸಾಮಾಜಿಕ ಸಮರಸತೆಯ ಮಾರ್ಗವನ್ನೇ ಅನುಸರಿಸಬೇಕು ಎನ್ನುವುದನ್ನು ಆರ್‌ಎಸ್‌ಎಸ್ ನೀಡಿರುವ ಕೊಡುಗೆ ಎಂದರು.
ಇದು ಯುದ್ಧಭೂಮಿಯಲ್ಲ,ಬುದ್ಧನ ಭೂಮಿ,ಪ್ರಭು ರಾಮಚಂದ್ರನ ಭೂಮಿ.ರಾಮಚಂದ್ರನ ಆದರ್ಶವನ್ನು ಈ ಸಂಸ್ಕೃತಿ ನಮಗೆ ನೀಡಿದೆ.ಪಿತೃವಚನ ಪಾಲನೆಗಾಗಿ ರಾಜ್ಯವನ್ನು ತ್ಯಾಗ ಮಾಡುವ ಆದರ್ಶ,ಪ್ರಾಣ ಹೋದರೂ ಸರಿ ವಚನವನ್ನು ಬಿಡಬಾರದು ಎನ್ನುವುದನ್ನು ಈ ಸಂಸ್ಕೃತಿ ಕಲಿಸಿದೆ.ತನ್ನ ಐವರು ಪುತ್ರರನ್ನು ಕೊಂದ ಅಶ್ವತ್ಥಾಮನನ್ನು ಕೊಂದರೆ ಆತನ ತಾಯಿಗೆ ನೋವಾಗುತ್ತದೆ ಎಂದು ಹೇಳುವ ದ್ರೌಪದಿಯ ಮಾತನ್ನು ನಮ್ಮ ಸಂಸ್ಕೃತಿ ಮಾತ್ರ ಕಾಣಬಹುದು.ಆದರೆ ಇಂದು ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಕಳಿಸುವ ಕಾರ್ಯ ನಡೆಯುತ್ತಿರುವುದು ಬೇಸರದ ವಿಚಾರ ಎಂದು ನುಡಿದರು.
ಸಮಾರಂಭದಲ್ಲಿ ಸರ್ದಾರ್ ಇಕ್ಬಾಲ್ ಸಿಂಗ್ ಉಪಸ್ಥಿತರಿದ್ದರು.ಕರ್ನಾಟಕದ44ಶಿಕ್ಷಾರ್ಥಿಗಳು ಸೇರಿದಂತೆ ದೇಶದ ವಿವಿಧ ಪ್ರಾಂತ್ಯಗಳಿಂದ ಒಟ್ಟು932ಶಿಕ್ಷಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 3 =
Remember me
