ಬೆಂಗಳೂರು:ಕರೊನಾ ವೈರಸ್​ ವ್ಯಾಪಕವಾಗಿ ಹರಡುತ್ತಿರುವ ಕಾರಣಕ್ಕೆ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಮುಂದಿನ ಒಂದು ವಾರ ಆರೋಗ್ಯ ತುರ್ತುಪರಿಸ್ಥಿತಿಯ ಕ್ರಮಗಳನ್ನು ಕೈಗೊಂಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಏನೇನು ಇರುತ್ತದೆ, ಏನು ಇರೋದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಶಾಲಾ, ಕಾಲೇಜುಗಳು, ಬೇಸಿಗೆ ಶಿಬಿರಗಳು, ಸಭೆ, ಸಮಾರಂಭ, ಕ್ರೀಡಾಕೂಟಗಳಂತಹ ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸಬಾರದು ಎಂದಿದ್ದಾರೆ.ಇಂದು ಅರಣ್ಯ ಸಚಿವ ಆನಂದ್ ಸಿಂಗ್​ ಟ್ವೀಟ್ ಮಾಡಿ, ಮಾ.15ರಿಂದ 23ರವರೆಗೆ ಮೈಸೂರು ಮೃಗಾಲಯವೂ ಸೇರಿ 9 ಮೃಗಾಲಯಗಳನ್ನು ತೆರೆಯುವುದಿಲ್ಲ ಎಂದಿದ್ದಾರೆ.
ಅತಿಥಿಗಳ ಯೋಗಕ್ಷೇಮ, ಸುರಕ್ಷತೆಗೆ ನಮ್ಮ ಬದ್ಧತೆ, ಆದ್ಯತೆ. ಸಾರ್ವಜನಿಕ ಹಿತದೃಷ್ಟಿಯಿಂದ, ಕರೊನಾ ವೈರಸ್​ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಕರ್ನಾಟಕ ಪ್ರಾಧಿಕಾರದಡಿ ಬರುವ ಎಲ್ಲ 9 ಮೃಗಾಲಯಗಳನ್ನೂ ಮಾ.15ರಿಂದ 23ರವರೆಗೆ ಮುಚ್ಚಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬಂದ್​ ಆಗಿರುವ ಝೂಗಳು:ಮೈಸೂರು, ಬನ್ನೇರುಘಟ್ಟ, ಶಿವಮೊಗ್ಗ, ಗದಗ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ, ಹಂಪಿ ಹಾಗೂ ಆನಗೋಡು
ಒಂದು ವಾರ ಕರ್ನಾಟಕ ಬಂದ್​: ಏನು ಇರುತ್ತೆ, ಏನಿರಲ್ಲ ಇಲ್ಲಿದೆ ಮಾಹಿತಿ..

ಏಪ್ರಿಲ್​ 1ರ ನಂತರ ದುಬಾರಿಯಾಗಲಿವೆ ಮೊಬೈಲ್​ ಫೋನ್​ಗಳು; ಬೇಕಿದ್ದರೆ ಈಗಲೇ ಖರೀದಿ ಮಾಡಿಬಿಡಿ…

‘ನಾನೇನೂ ಕದ್ದುಮುಚ್ಚಿ ಮಾಡಲಿಲ್ಲ..ಎಲ್ಲವನ್ನೂ ಬಹಿರಂಗವಾಗಿಯೇ ಮಾಡಿದ್ದೇನೆ..’ : ಆಗೊಮ್ಮೆ ಸೈಲೆಂಟ್​ ಆಗಿ ಬಿಜೆಪಿ ಬೆಂಬಲಿಸಿದ್ದ ಅಜಿತ್ ಪವಾರ್​ಗೆ ಈಗೇನಾಯ್ತು?

VIDEO: ‘ಕರೊನಾ ಭಜನೆ’ ನೀವು ಕೇಳಿದ್ದೀರಾ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಅದ್ಭುತ ಮ್ಯೂಸಿಕ್​ನೊಂದಿಗಿನ ಈ ಹಾಡು ಕಾಮಿಡಿನಾ? ನಾನ್​ಸೆನ್ಸಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 15 =
Remember me
