ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೂ ಕರೊನಾ ಭೀತಿ ಶುರುವಾಗಿದೆ. ಯಾವಾಗ ಯಾರಿಂದ ಸೋಂಕು ತಗುಲುತ್ತದೆಯೋ ಎಂಬ ಭಯದ ವಾತಾವಣದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಜನರು ಸಂಕಷ್ಟ ಕೇಳಲು ಮತ್ತು ಪರಿಹರಿಸುವ ಪೊಲೀಸ್ ಠಾಣೆಗಳಿಗೆ ಕನಿಷ್ಠ ದಿನಕ್ಕೆ 40 ರಿಂದ 50 ನಾಗರಿಕರು ಭೇಟಿ ನೀಡುತ್ತಾರೆ. ಅದರಲ್ಲಿ ಪರಿಚಿತರು ಮತ್ತು ಅಪರಿಚಿತರು ಸಹ ಸೇರಿದ್ದು, ಅವರ ಪೂರ್ವಾಪರ ತಿಳಿಯದೆ ಅವರೊಂದಿಗೆ ಪೊಲೀಸರು ವ್ಯವಹರಿಸಬೇಕಾಗಿದೆ.
ದೂರು ಕೊಡಲು ಅಥವಾ ಮತ್ಯಾವುದೋ ವಿಚಾರಕ್ಕೆ ಠಾಣೆಗೆ ಜನರು ಹೋದರೆ ಸಾಕು ಗಂಟೆಗಟ್ಟಲೇ ಕಾಯಿಸುವ ಪರಿಸ್ಥಿತಿ ಸಾಮಾನ್ಯ. ಇಲ್ಲಿಗೆ ರೋಗಿಗಳು, ಆರೋಗ್ಯವಂತರು ಠಾಣೆ ಮೆಟ್ಟಿಲೇರಬೇಕಾಗುತ್ತದೆ. ದೂರು ಕೊಡಬೇಕಾದರೆ ಪತ್ರ ವ್ಯವಹಾರ, ಸಹಿ ಮಾಡಬೇಕಾಗುತ್ತದೆ. ಈ ವೇಳೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹೇಳಿಕೆ.
ವಾಹನಗಳ ನೋಂದಣಿ, ಚಾಲನಾ ಪರವಾನಗಿ ಸೇರಿ ಹತ್ತು ಹಲವು ವಿಚಾರಕ್ಕೆ ಆರ್​ಟಿಒ ಕಚೇರಿಗೆ ನಿತ್ಯ ನೂರಾರು ಮಂದಿ ವ್ಯಾವಹಾರಿಕವಾಗಿ ಭೇಟಿ ಕೊಡುತ್ತಿದ್ದಾರೆ. ಬೇಗ ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ಇಲ್ಲೂ ನಿತ್ಯ ಜನಜಂಗುಳಿ ಇರುತ್ತದೆ. ಇಲ್ಲಿನ ಅಧಿಕಾರಿ, ಸಿಬ್ಬಂದಿ ಪ್ರತಿಯೊಬ್ಬ ನಾಗರಿಕರ ದಾಖಲೆ ಪರಿಶೀಲನೆ ನಡೆಸಿ ದಾಖಲೆಗೆ ಸಹಿ ಮಾಡಬೇಕಾಗಿರುತ್ತದೆ. ಡ್ರೖೆವಿಂಗ್ ಟೆಸ್ಟ್ ವೇಳೆ ಚಾಲಕನ ಪಕ್ಕದಲ್ಲೇ ಆರ್​ಟಿಒ ಅಧಿಕಾರಿ ಕುಳಿತು ಆತನ ಚಾಲನೆಯನ್ನು ಗಮನಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕರೊನಾ ಸೋಂಕು ಎಲ್ಲಿ ಅಂಟಿಕೊಳ್ಳುತ್ತದೆ ಎಂಬುದು
ಆರ್​ಟಿಒ ಅಧಿಕಾರಿ, ಸಿಬ್ಬಂದಿ ಆತಂಕವಾಗಿದೆ. ಇನ್ನು ಜಿಲ್ಲಾ ದಂಡಾಧಿಕಾರಿ(ಡಿಸಿ), ತಾಲೂಕು ಕಚೇರಿಗಳಂತೂ ಸದಾಕಾಲ ಜನರಿಂದ ಗಿಜಿಗುಡುತ್ತಿರುತ್ತವೆ. ಜತೆಗೆ ಜಿಲ್ಲಾಧಿಕಾರಿ ಕೋರ್ಟ್ ಮಧ್ಯಾಹ್ನ 3 ಗಂಟೆಗೆ ಶುರುವಾಗುತ್ತದೆ. ಕೋರ್ಟ್ ಕಲಾಪಕ್ಕೆ ತಪ್ಪದೆ ಪ್ರಕರಣದ ವಾದಿ-ಪ್ರತಿವಾದಿಗಳು ಬರಬೇಕಾಗುತ್ತದೆ. ಇಲ್ಲಿಗೆ ಹೆಚ್ಚಾಗಿ ರೈತರೇ ಭೇಟಿ ನೀಡುವ ಹಿನ್ನೆಲೆಯಲ್ಲಿ ಹಳ್ಳಿಗಾಡಿಗೂ ಸೋಂಕು ಹರಡುವ ಸಂಭವ ಇರುತ್ತದೆ. ಇಲ್ಲಿನ ಅಧಿಕಾರಿ, ಸಿಬ್ಬಂದಿಯಲ್ಲೂ ಕರೊನಾ ವೈರಸ್ ಭಯ ಮನೆ ಮಾಡಿದೆ.
ಸೋಂಕು ತಡೆಗೆ ಸಿಎಂ ತಾಕೀತು
ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರೊನಾ ಸೋಂಕು ಹರಡದಂತೆ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದರು. ಎಲ್ಲ್ಲ ಜಿಲ್ಲೆಗಳ ಡಿಸಿಗಳು, ಸಿಇಒಗಳು, ಡಿಎಚ್ ಒ, ಎಸ್ಪಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಸೋಂಕು ಜಾಸ್ತಿ ಇದೆ. ಗಡಿ ಜಿಲ್ಲೆ ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚು ಗಮನ ಕೊಡಬೇಕು. ಹೈದರಾಬಾದ್ ಮತ್ತು ಮುಂಬೈ ಕಡೆಯಿಂದ ಬರುವವರ ಬಗ್ಗೆ ಗಮನ ಇಡಿ ಎಂದು ಸೂಚಿಸಿದರು. ವಿಮಾನ ನಿಲ್ದಾಣ, ಬಂದರು ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಾಗಿ ಪರಿಶೀಲಿಸಬೇಕು. ತೊಂದರೆ ಇದ್ದರೆ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ. ಏನೇ ವಿಚಾರಗಳಿದ್ದರೂ ಮುಕ್ತ ವಾಗಿ ತಿಳಿಸಿ ಎಂದು ಹೇಳಿದರು ಸಂವಾದದಲ್ಲಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆರೋಗ್ಯ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಇದ್ದರು.
ಹೆಬ್ಬೆಟ್ಟು ಇಲ್ಲದೆ ಆಗೋದಿಲ್ಲ
ಉಪನೋಂದಣಿ ಕಚೇರಿಗಳು ಕರೊನಾ ಸೋಂಕು ಹರಡುವ ಕೇಂದ್ರಗಳಾಗಿವೆ ಎಂದರೆ ತಪ್ಪಾಗದು. ಬಯೋಮೆಟ್ರಿಕ್ ಯಂತ್ರಕ್ಕೆ ನೋಂದಣಿಗೆ ಬರುವರು ಹೆಬ್ಬೆಟ್ಟು ಕೊಟ್ಟರೆ ಮಾತ್ರ ಕರಾರು ಒಪ್ಪಂದ ಪೂರ್ಣವಾಗಲಿದೆ. ಇಲ್ಲದಿದ್ದರೆ, ಯಾವುದೇ ದಾಖಲೆ ಅಧಿಕೃತವಾಗುವುದಿಲ್ಲ. ನಿತ್ಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಕಷ್ಟಕ್ಕೆಂದು ಭೂಮಿ, ಸೈಟ್, ಮನೆ ಇನ್ನಿತರ ಆಸ್ತಿಗಳನ್ನು ಮಾರಾಟ ಮಾಡಿ ಹಣ ಪಡೆದಿರುವ ಮತ್ತು ಲಕ್ಷಾಂತರ ರೂ. ಬಂಡವಾಳ ಹೂಡಿಕೆ ಮಾಡಿರುವ ಖರೀದಿದಾರರು ಕರೊನಾ ಭೀತಿ ಇದ್ದರೂ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅನಿವಾರ್ಯವಾಗಿ ಬರಬೇಕಾಗಿದೆ. ಬಯೋಮೆಟ್ರಿಕ್ ಯಂತ್ರಕ್ಕೆ ಹೆಬ್ಬೆಟ್ಟು ಕೊಡುತ್ತಿರುವ ಹಿನ್ನೆಲೆಯಲ್ಲಿ ನೂರಾರು ಮಂದಿ ಒಂದೇ ಯಂತ್ರಕ್ಕೆ ಬೆರಳು ಮುದ್ರೆ ಒತ್ತುವುದರಿಂದ ಸೋಂಕು ಹರಡುವ ಸಾಧ್ಯತೆಗಳಿವೆ. ಅದಕ್ಕಾಗಿ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕೆಂದು ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪಡಿತರ ಕೇಂದ್ರಗಳಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿರá-ವುದರಿಂದ ಮುಂಜಾಗ್ರತೆ ಅತ್ಯಗತ್ಯವಾಗಿದೆ.
ವೈರಸ್ ತಡೆಗೆ ಎನ್​ಡಿಆರ್​ಎಫ್ ಹಣ ಬಳಕೆ
ಕರೊನಾ ಸೋಂಕು ತಡೆಗೆ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿ 84 ಕೋಟಿ ರೂ. ಬಳಸಿಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಕರೊನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೊಷಿಸಿದೆ. ಈ ಸೋಂಕು ನಿಯಂತ್ರಣಕ್ಕೆ ಬೇಕಾದ ಔಷಧಗಳು, ಸ್ವಚ್ಛತೆ, ಉಪಕರಣಗಳ ಖರೀದಿ, ಪೊಲೀಸ್ ಭದ್ರತೆ ಹಾಗೂ ಅಗ್ನಿಶಾಮಕ ಇಲಾಖೆಗೆ ಈ ಹಣವನ್ನು ಬಳಸಿಕೊಳ್ಳುವಂತೆ ಕೇಂದ್ರ ಸೂಚನೆ ನೀಡಿದೆ. ಇಂತಹ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ಹಣ ವ್ಯಯಿಸಬೇಕಿತ್ತು. ಆದರೆ, ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕರೊನಾ ಸೋಂಕು ನಿಯಂತ್ರಣಕ್ಕೆ ಹಣ ಬಿಡುಗಡೆ ಮಾಡಿದೆ ಎಂದು ವಿಧಾನಸಭೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
https://www.vijayavani.net/%e0%b2%aa%e0%b2%be%e0%b2%aa%e0%b3%81-%e0%b2%8e%e0%b2%82%e0%b2%a6%e0%b3%87-%e0%b2%96%e0%b3%8d%e0%b2%af%e0%b2%be%e0%b2%a4%e0%b2%b0%e0%b2%be%e0%b2%97%e0%b2%bf%e0%b2%a6%e0%b3%8d%e0%b2%a6-%e0%b2%b9/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 6 =
Remember me
