ವಿಜಯಪುರ:ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಸುಕ್ಷೇತ್ರ ಉತ್ನಾಳ ಶ್ರೀಮಹಾಲಕ್ಷ್ಮಿ ದೇವಿಯ ವಾರ್ಷಿಕ ಜಾತ್ರೆಯು ಇದೇ ಮೇ 14ಕ್ಕೆ ನಡೆಯಲಿದೆ. ಈಗಾಗಲೇ ಕಳೆದ ಹತ್ತು ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಶಿವಪುತ್ರಯ್ಯಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಐತಿಹಾಸಿಕ ಪವಾಡಪುರುಷ ಬಾಳು ಮಾಮ ಅವರ ಪುರಾಣ ಪ್ರವಚನ ನಡೆಯುತ್ತಿದೆ.
ಮೇ 12ರಂದು ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿರುವ ಕೃಷಿಮೇಳ ಮತ್ತು ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಜಿಲ್ಲೆಯ ರೈತರಿಗಾಗಿ ಸಿರಿಧಾನ್ಯ ಮೇಳ, ಸಾವಯವ ಕೃಷಿ ಜಾಗೃತಿ, ವಿವಿಧ ಗೋಷ್ಠಿಗಳು ನಡೆಯಲಿವೆ. ಮೇ 13ಕ್ಕೆ ಶರಣ ಚಿಂತನಾಗೋಷ್ಠಿ ಮತ್ತಿತರ ಕಾರ್ಯಕ್ರಮಗಳು ನಡಯಲಿವೆ.
ವಿಶೇಷವಾಗಿ ಮೇ14ರಂದು ವಾರ್ಷಿಕ ಜಾತ್ರೆಯ ಅಂಗವಾಗಿ ಬೆಳಗಿನಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಾತಃಕಾಲ ಮಹಾಲಕ್ಷ್ಮಿ ದೇವಿ ಮಂಗಳಮೂರ್ತಿಗೆ ರುದ್ರಾಭಿಷೇಕ ಮತ್ತು ಸಹಸ್ರ ಕುಂಕುಮಾರ್ಚನೆ ನಡೆಯಲಿದೆ. ನಂತರ ಚಂಡಿಹೋಮ ನಡೆಯಲಿದೆ. ಹೋಮದ ಪೂರ್ಣಾಹುತಿಯಾದ ಮೇಲೆ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಲಿದೆ. ಇದೇ ವೇಳೆ ಸುಮಾರು 5 ಸಾವಿರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾತೋಶ್ರೀ ಶಶಿಕಲಾ ಹಿರೇಮಠ ಅವರು ಚಾಲನೆ ನೀಡಲಿದ್ದಾರೆ.
ನಂತರ ನಡೆಯುವ ಧರ್ಮಸಭೆಯಲ್ಲಿ ಸಿಂಧಗಿ ಸಾರಂಗಮಠ, ಸಂತೆಕೆಲ್ಲೂರು ಮಠ, ನಂದವಾಡಗಿ ಮಠ, ಕರಿಭಂಟನಾಳ ಹಿರೇಮಠದ ಪೂಜ್ಯರು ಪಾಲ್ಗೊಳ್ಳಲಿದ್ದು, ನಾಡಿನ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಶ್ರೀಮಹಾಲಕ್ಷ್ಮಿ ಶಕ್ತಿಪೀಠದ ಸಂಚಾಲಕರಾದ ಸಂಗಮೇಶ ಹಿರೇಮಠ ತಿಳಿಸಿದ್ದಾರೆ.
ಶ್ರೀಮಹಾಲಕ್ಷ್ಮೀ ದೇವಿಯ ನೂತನ ಶಿಲಾ ದೇಗುಲದ ಕಾಮಗಾರಿ ಭರದಿಂದ ಸಾಗಿದೆ. ಕರೊನಾ, ಚುನಾವಣೆ ನೀತಿಸಂಹಿತೆ ಇತ್ಯಾದಿ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಸರಳವಾಗಿ ಆಚರಿಸಲಾಗಿದ್ದ ಕ್ಷೇತ್ರದ ಜಾತ್ರೆಯನ್ನು ಈ ವರ್ಷ ಯಥಾ ಪ್ರಕಾರ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀಕ್ಷೇತ್ರದ ಕಾರ್ಯದರ್ಶಿ ಡಾ. ಮಹಾಂತೇಶ ಹಿರೇಮಠ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
