ಬೆಂಗಳೂರು:ಮಹಾಮಾರಿ ಕರೊನಾದಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಸಿನಿ ಕಲಾವಿದರಿಗೆ ನೆರವು ನೀಡುವ ಉದ್ದೇಶದಿಂದ ಕಮರ್ ಫಿಲಂ ಫ್ಯಾಕ್ಟರಿ (ಕೆಎಫ್​ಎಫ್) ಸಂಸ್ಥೆಯು ನವೆಂಬರ್ ಕೊನೆಯ ವಾರದಲ್ಲಿ ವಿನೂತನ ಇಂಡಿಯನ್ ಬೌಲಿಂಗ್ ಲೀಗ್ ಆಯೋಜಿಸಿದೆ.
ಲೀಗ್​ನಲ್ಲಿ ಪಾಲ್ಗೊಳ್ಳುವ 10 ತಂಡಗಳಲ್ಲಿ ನಾಲ್ವರು ಪುರುಷರು ಹಾಗೂ ನಾಲ್ವರು ಮಹಿಳಾ ಆಟಗಾರರು ಸೇರಿ 8 ಮಂದಿ ಇರಲಿದ್ದಾರೆ. ಬಿನ್ನಿಮಿಲ್ ಬಳಿಯ ಇಟಿಎ ಮಾಲ್​ನಲ್ಲಿ ಒಂದು ವಾರ 24 ಪಂದ್ಯಗಳು ನಡೆಯಲಿವೆ. ಅಂದಾಜು 80 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ತಜ್ಞ ಅಂಪೈರ್​ಗಳು ಅಂಕ ಆಧಾರದಲ್ಲಿ ತಂಡಗಳ ಫಲಿತಾಂಶ ನಿರ್ಧರಿಸಲಿದ್ದಾರೆ. ಮಾಧ್ಯಮ ತಂಡ ಕೂಡ ಇರಲಿದೆ. ಆ ತಂಡ ಒಂದು ಪಂದ್ಯ ಮಾತ್ರ ಆಡಲಿದೆ. ಗೆದ್ದ ತಂಡಗಳು ಮುಂದಿನ ಹಂತ ಪ್ರವೇಶಿಸಲಿವೆ. ಫೈನಲ್ ಹಣಾಹಣಿಯಲ್ಲಿ ಗೆಲ್ಲುವ ತಂಡಕ್ಕೆ ನಗದು ಬಹುಮಾನ ಸಹಿತ ಟ್ರೋಫಿ ನೀಡಲಾಗುತ್ತದೆ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೂ ಬಹುಮಾನ ಇರಲಿದೆ ಎಂದು ಶನಿವಾರ ಇಟಿಎ ಮಾಲ್​ನಲ್ಲಿ ನಡೆದ ಗೋಷ್ಠಿಯಲ್ಲಿ ಕೆಎಫ್​ಎಫ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಮರ್ ತಿಳಿಸಿದರು.
ಶೀಘ್ರ ಲಾಂಛನ ಬಿಡುಗಡೆ: ಕಳೆದ ಬಾರಿ ಬಾಕ್ಸ್ ಕ್ರಿಕೆಟ್ ಲೀಗ್ ಆಯೋಜಿಸಲಾಗಿತ್ತು. ಲೀಗ್​ನಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ಕಲಾವಿದರಿಗೆ ಭರಪೂರ ಮನರಂಜನೆ ಸಿಕ್ಕಿತ್ತು. ಕರೊನಾದಿಂದಾಗಿ ಕಲಾವಿದರು ಮತ್ತು ತಂತ್ರಜ್ಞರು ಸೇರಿ ಎಲ್ಲರೂ ಅತಂತ್ರ
ಸ್ಥಿತಿಯಲ್ಲಿದ್ದಾರೆ. ಅಂಥವರಿಗೆ ನೆರವಾಗಲು ಹಾಗೂ ಒತ್ತಡ ನಿವಾರಣೆಗೆ ವಿನೂತನ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಕೆಲ ಮಾನದಂಡಗಳ ಆಧಾರದಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ. ಕೆಲ ತಂಡಗಳನ್ನು ಮಾಲೀಕರು ಈಗಾಗಲೇ ಖರೀದಿಸಿದ್ದಾರೆ. ಶೀಘ್ರದಲ್ಲೇ ತಂಡದ ಲಾಂಛನ ಬಿಡುಗಡೆ ಮಾಡಲಾಗುವುದು ಎಂದು ಕಮರ್ ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ಬಿ. ಬಾಬು, ನಟ ನಿರಂಜನ್, ನಟಿ ದೀಪಿಕಾ ದಾಸ್, ಜಾಕ್​ಫ್ರೂಟ್ ಮೀಡಿಯಾ ಮಾಲೀಕ ಸುಧಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಭರಪೂರ ಮನರಂಜನೆ
ಕೆಎಫ್​ಎಫ್ ಸಂಸ್ಥೆ ಈ ಹಿಂದೆ ಆಯೋಜಿಸಿದ್ದ ಬಾಕ್ಸ್ ಕ್ರಿಕೆಟ್​ನಲ್ಲಿ ಪಾಲ್ಗೊಂಡು ತುಂಬಾ ಆನಂದಿಸಿದ್ದೆ. ಜತೆಗೆ, ಸಾಕಷ್ಟು ಮನರಂಜನೆ ಸಿಕ್ಕಿತ್ತು. ಊಟ ಮುಗಿದ ಬಳಿಕ ನಾನು, ಪತಿ ಉಪೇಂದ್ರ ಹಾಗೂ ಮಕ್ಕಳು ಸೇರಿ ಬೌಲಿಂಗ್ ಆಡುತ್ತೇವೆ. ಕರೊನಾದಿಂದ ಎದುರಾಗಿರುವ ಸಂಕಷ್ಟ ಅದಷ್ಟೂ ಬೇಗ ತೊಲಗಲಿ ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + three =
Remember me
