ಬೆಂಗಳೂರು: ಕರೊನಾ ಸೋಂಕು ತಡೆಗಟ್ಟುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದ್ದರೇ ಲಾಕ್​ಡೌನ್​ನಿಂದ ಸಮಸ್ಯೆಗೆ ಸಿಲುಕಿದ ಬಡವರಿಗೆ ಮತ್ತು ನಿರ್ಗತಿಕರಿಗೆ ತುರ್ತು ಸೇವೆ ಒದಗಿಸುವುದು ದೊಡ್ಡ ತಲೆನೋವಾಗಿದೆ.
ಪಡಿತರ, ಆಹಾರ, ಹಾಲು ಇನ್ನಿತರ ಆಹಾರ ಪದಾರ್ಥ ವಿತರಣೆ ವೇಳೆ ಗಲಾಟೆ, ಕಿತ್ತಾಟ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೈ ಮರೆತಿರುವುದು ಸಾಮಾನ್ಯವಾಗಿದೆ. ಅದನ್ನು ನಿಯಂತ್ರಿಸಲು ಪೊಲೀಸರಿಗೆ ಮತ್ತು ಇತರ ಅಧಿಕಾರಿಗಳಿಗೆ ಎರಡನೇ ಸವಾಲಾಗಿದೆ.
ಬೆಂಗಳೂರು ಸೇರಿ ಎಲ್ಲ ಜಿಲ್ಲೆಗಳಲ್ಲಿ ಉಚಿತ ಪಡಿತರ ವಿತರಣೆ ಕಾರ್ಯ ಶುರುವಾಗಿದೆ. ಎಪಿಎಲ್, ಬಿಪಿಎಲ್ ಮತ್ತು ಕಾರ್ಡ್ ಇಲ್ಲದೆ ಇರುವ ಬಡವರಿಗೂ ಪಡಿತರ ವಿತರಿಸಲು ಸರ್ಕಾರ ಸೂಚಿಸಿದೆ. ಪಟ್ಟಣ ಹಳ್ಳಿ ಎನ್ನದೆ ಪಡಿತರ ಪಡೆಯಲು ರೇಷನ್ ಅಂಗಡಿ ಮುಂಭಾಗ ಜನ ಸಾಲುಗಟ್ಟಿ ನಿಲ್ಲುತ್ತಿದ್ದು,
ಕೆಲವೆಡೆ ಮಕ್ಕಳನ್ನು ಸರದಿಗೆ ನಿಲ್ಲಿಸುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಜಾಗ ಗುರುತು ಮಾಡಿದ್ದರೂ ಅಲ್ಲಿ ಅಲ್ಲಿ ಕೈಚೀಲಗಳನ್ನು ಇಟ್ಟು ಒಂದೆಡೆ ಗುಂಪು ಸೇರುತ್ತಾರೆ.
ಮತ್ತೊಂದೆಡೆ, ಹಾಲಿನ ಉತ್ಪನ್ನಗಳ ಶೇಖರಣೆ ಕಡಿಮೆ ಮಾಡಲು ಬಡವರಿಗೆ ಉಚಿತವಾಗಿ ಹಾಲು ವಿತರಣೆ ಸಹ ನಡೆಯುತ್ತಿದೆ. ಜನರು ಹಾಲು ಪಡೆಯಲು ಒಬ್ಬರ ಮೇಲೊಬ್ಬರು ಬೀಳುತ್ತಿದ್ದಾರೆ. ಸಾಮಾಜಿಕ ಅಂತರ ಪರಿಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತಿದೆ.
ಪಡಿತರ ಮತ್ತು ಹಾಲು ವಿತರಣೆಯಲ್ಲಿ ರಾಜಕೀಯ ಸ್ವರೂಪ ಪಡೆಯುತ್ತಿದೆ. ಇದೇ ವಿಚಾರಕ್ಕೆ ಜನರಲ್ಲಿ ಪರಸ್ಪರ ಗಲಾಟೆ, ದ್ವೇಷ ಮನೋಭಾವನೆ ಹೆಚ್ಚಾಗುತ್ತಿದೆ. ಹಲವೆಡೆ ಕೈಕೈ ಮಿಲಾಯಿಸಿಕೊಂಡು ಹಲವು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಹಳ್ಳಿಗಳಲ್ಲಿ ಒಂದೇ ಪಕ್ಷದ, ಜಾತಿಯ ಜನರಿಗೆ ಮಾತ್ರ ಹಾಲು ವಿತರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕರೊನಾ ಸೋಂಕು ಬದಲಿಗೆ ತುರ್ತು ಸಾಮಗ್ರಿಗಳ ವಿತರಣೆಯೇ ದೊಡ್ಡ ಸಮಸ್ಯೆಯಾದರೆ ಸರ್ಕಾರಕ್ಕೂ ಮುಜುಗರ ಉಂಟಾಗಲಿದೆ.
ಬಗೆಹರಿಯದ ಪಡಿತರ ಗೊಂದಲ
ಬಯೋಮೆಟ್ರಿಕ್ ರದ್ದು ಮಾಡಿದ ಸರ್ಕಾರ, ಕೇವಲ ನೋಂದಾಯಿತ ಮೊಬೈಲ್​ಗೆ ಬರುವ ಒಟಿಪಿ ಅಥವಾ ಸಹಿ ಪಡೆದು ಪಡಿತರ ವಿತರಣೆ ಮಾಡಬೇಕೆಂದು ಸೂಚಿಸಿದೆ. ಆದರೆ, ಕೆಲವೆಡೆ ಹೆಬ್ಬೆಟ್ಟು ಪಡೆಯುವುದು ಅಥವಾ ಒಟಿಪಿ ಬರುವವರೆಗೂ ಕಾಯಲಾಗುತ್ತಿದೆ. ಇದರಿಂದ ಚುರುಕಾಗಿ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಸರತಿ ಸಾಲು ಹೆಚ್ಚಾಗಿ ಅಂತರ ಕಾಯ್ದುಕೊಳ್ಳುವಲ್ಲಿ ಜನ ಮೈಮರೆಯುತ್ತಿದ್ದಾರೆ.
ನಗರದಲ್ಲಿ ನಡೆದ ಘಟನೆಗಳು
ಏ.7: ಚನ್ನಪ್ಪರೆಡ್ಡಿ ಲೇಔಟ್​ನಲ್ಲಿ ಹಾಲು ವಿತರಣೆ ವೇಳೆ ಮಹಿಳೆಯನ್ನು ನಿಂದಿಸಿ ಹಲ್ಲೆ ನಡೆಸಿದ ಸಂಬಂಧ ನಾಲ್ವರು ಯುವಕರ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.
ಏ.5: ದಾಸರಹಳ್ಳಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ಆಹಾರ ಹಂಚುತ್ತಿದ್ದ ಸ್ವರಾಜ್ ಅಭಿಯಾನ್ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಸಂಬಂಧ ಮೂವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಏ.5: ಸಂಜಯನಗರದಲ್ಲಿ ಬಡವರಿಗೆ ದಿನಸಿ ಹಂಚುವ ವಿಚಾರಕ್ಕೆ 2 ಗುಂಪುಗಳು ನಡುವೆ ಗಲಾಟೆ ನಡೆದು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಸಿಯುನಿಂದ ಹೊರಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​: ಆರೋಗ್ಯದಲ್ಲಿ ಸುಧಾರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
