ಬೆಂಗಳೂರು:ಬಿಜೆಪಿ ರೂಪಿಸಲಿರುವ ವಿಧಾನಸಭೆ 2023ರ ಚುನಾವಣಾ ಪ್ರಣಾಳಿಕೆ ಭಗವದ್ಗೀತೆಯಷ್ಟೇ‌ ನಂಬಿಕೆಗೆ ಅರ್ಹ, ನೈಜ ಹಾಗೂ ಜನರ ಧ್ವಮಿಯಾಗಿರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆದ ಪಕ್ಷದ ಚುನಾವಣಾ ಸಲಹಾ ಸಮಿತಿ ಸಂಚಾಲಕ ಡಾ.ಕೆ.ಸುಧಾಕರ್‌ ವಿಶ್ಲೇಷಿಸಿದರು.
ಪಕ್ಷದ ರಾಜ್ತ ಕಚೇರಿಯಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು‌ ಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ ಘೋಷವಾಕ್ಯದಡಿ ಸಲಹೆ ಸಂಗ್ರಹಿಸುವ ಅಭಿಯಾನವನ್ನು ಬುಧವಾರ ಆರಂಭಿಸಿದ್ದು, ಮಾ.25ರವರೆಗೆ ನಡೆಯಲಿದೆ.
ಇದನ್ನೂ ಓದಿ:ಬಿಜೆಪಿ ಪ್ರಣಾಳಿಕೆ ಭಗವದ್ಗೀತೆಯಷ್ಟೇ ನಂಬಿಕೆಗೆ ಅರ್ಹ: ಸಚಿವ ಡಾ.ಕೆ.ಸುಧಾಕರ್ ವ್ಯಾಖ್ಯಾನ
ಈ ಅಭಿಯಾನದ ಮೂಲಕ ಜನಸಾಮಾನ್ಯರು ಸೇರಿ ವಿವಿಧ ಕ್ಷೇತ್ರಗಳ ತಜ್ಞರು, ಅನುಭವಿಗಳ ಅಭಿಪ್ರಾಯ‌ ಸಂಗ್ರಹಿಸುವ ಮುಖೇನ ಒಂದು ಕೋಟಿ ಜನರನ್ನು ತಲುಪುವ ಗುರಿಯಿದೆ ಎಂದರು.
ಪಕ್ಷದ ವಿವಿಧ ಪ್ರಕೋಷ್ಠಗಳು, ಮೋರ್ಚಾಗಳನ್ನು ಈ ಕಾರ್ಯಕ್ಕೆ ಜೋಡಿಸಿಕೊಳ್ಳಲಾಗುವುದು. ಪ್ರತಿ ಮಂಡಲದಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಲಾಗುವುದು. ಅಲ್ಲದೆ, ಕೃಷಿ, ಮಹಿಳೆ, ಯುವ ಒಳಗೊಂಡು 50 ಸೆಕ್ಟರ್‌ಗಳ ಸಭೆಗಳು ರಾಜ್ಯದ ಆಯ್ದ 50 ಸ್ಥಳಗಳಲ್ಲಿ ನಡೆಯಲಿದ್ದು, ಕೇಂದ್ರ- ರಾಜ್ಯ ಸಚಿವರು, ಹಿರಿಯ ನಾಯಕರು ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ವಿಫಲಕಾಂಗ್ರೆಸ್ ಪಕ್ಷ 2013ರ ಚುನಾವಣಾ ಪ್ರಣಾಳಿಕೆಯಲ್ಲಿ‌ ನೀಡಿದ್ದ 173 ಭರವಸೆಗಳಲ್ಲಿ ಶೇಕಡ‌ 38ರಷ್ಟು ಈಡೇರಿಸುವಲ್ಲಿ ವಿಫಲವಾಗಿ ಶೇ.98ರಷ್ಟು ಈಡೇರಿಸಿದ್ದೇವೆ ಎಂದು ಸುಳ್ಳು ಹೇಳಿ ಜನರು ದಾರಿ ತಪ್ಪಿಸಲು ಹವಣಿಸುತ್ತಿದೆ ಎಂದು ಡಾ.ಕೆ.ಸುಧಾಕರ್ ಟೀಕಿಸಿದರು.
ಇದನ್ನೂ ಓದಿ:ಕಂಡಕ್ಟರ್ 1 ರೂ. ಚಿಲ್ಲರೆ ನೀಡಿಲ್ಲ ಅಂತ ಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ ಸಿಕ್ಕಿತು 2000 ರೂ. ಪರಿಹಾರ!
ತೌಡು ಕುಟ್ಟುವ ಕೆಲಸ ಮಾಡಿದ್ದೀರಿ ಎಂದು ಪ್ರತಿಪಕ್ಷ ನಾಯಕ ನಮ್ಮ ಸರ್ಕಾರವನ್ನು ಟೀಕಿಸಿದ್ದಾರೆ. ಆದರೆ ಭತ್ತ, ಅಕ್ಕಿ, ತೌಡು ಕೊಟ್ಡವರು ಯಾರು ಎಂದು ಜನರು ತೀರ್ಮಾನಿಸಲಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಅಕ್ಕಿಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಹಂಚಿ ಅನ್ನಭಾಗ್ಯ ಎಂದು ಬ್ರ್ಯಾಂಡ್ ಮಾರ್ಕೆಟಿಂಗ್ ಮಾಡಿಕೊಂಡದ್ದೂ ಜನರಿಗೆ ಗೊತ್ತಿದೆ ಎಂದು ಕುಟುಕಿದರು.
ಸಾರಾ ಮಹೇಶ್​-ರೋಹಿಣಿ ಸಿಂಧೂರಿ ರಾಜಿ ಹಿಂದಿನ ರಹಸ್ಯ ಬಯಲು: ತಪ್ಪನ್ನು ಒಪ್ಪಿಕೊಂಡ ಐಎಎಸ್​ ಅಧಿಕಾರಿ

ಚಿಕ್ಕೋಡಿ: ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
