ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮಂತ್ರವನ್ನು ಅಳವಡಿಸಿಕೊಂಡಿರುವ 2022-23ರ ಬಸವರಾಜ ಬೊಮ್ಮಾಯಿಯವರ ಚೊಚ್ಚಲ ಅಯ-ವ್ಯಯ ರಾಜ್ಯದ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿದೆ.
ಕೋವಿಡ್-19 ರ ಎರಡನೇ ಮತ್ತು ಮೂರನೇ ಅಲೆಗಳ ನಂತರ ಚೇತರಿಕೆಯಲ್ಲಿರುವ ಅರ್ಥ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಹೊಸ ತೆರಿಗೆಯನ್ನು ಹೇರಿಲ್ಲ. ಹಾಗೆಯೇ ಕಳೆದ ನವೆಂಬರ್​ನಲ್ಲಿ ಕೇಂದ್ರ ಸರಕಾರ ಪೆಟ್ರೊಲ್ ಮತ್ತು ಡೀಸೆಲ್​ಗಳ ಮೇಲಿನ ಆಮದು ಸುಂಕವನ್ನು ಇಳಿಸಿದಾಗ, ರಾಜ್ಯ ಸರ್ಕಾರವು ಮಾರಾಟ ತೆರಿಗೆಯನ್ನು ಇಳಿಸಿತ್ತು, ಇದನ್ನು ಮುಂದುವರಿಸಲಾಗಿದೆ. ಇದು ಸ್ವಾಗತಾರ್ಹ ನಡೆ. ಆದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ರಿಯಾಯಿತಿ ಅಗತ್ಯವಾಗಿತ್ತು. ಆದರೆ ನೀಡಿಲ್ಲ. ಇದು ಖೇದಕರ. ವೃತ್ತಿ ತೆರಿಗೆ ಸರಳೀಕರಣದ ಬಗ್ಗೆ ಹಲವು ವಾಣಿಜ್ಯ ಸಂಘಗಳು ಮನವಿ ಸಲ್ಲಿಸಿದ್ದರೂ ಪುರಸ್ಕರಿಸಲಾಗಿಲ್ಲ. ಈ ತೆರಿಗೆಗಳನ್ನು ಸರಳೀಕರಣ ಮಾಡಿದ್ದರೆ, ಅಭಿವೃದ್ಧಿಗೆ ಹೆಚ್ಚಿನ ಆದಾಯ ಸಂಗ್ರಹಕ್ಕೆ ಅವಕಾಶಗಳಿದ್ದವು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ವಿತರಿಸಲಾದ ಎಲ್ಲಾ ಸಾಲಗಳಿಗೆ ಸಂಬಂಧಿಸಿದ ಸಾಲ ಒಪ್ಪಂದಗಳ ಮೇಲಿನ ಮುದ್ರಾಂಕ ಶುಲ್ಕಗಳಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಸುಮಾರು ಎರಡು ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ. ಇದು ಕೋವಿಡ್-19 ರ ಪರಿಣಾಮ ಹೆಚ್ಚಿನ ತೊಂದರೆಗೊಳಗಾದ ಬೀದಿಬದಿ ವ್ಯಾಪಾರಿಗಳಿಗೆ ಸಣ್ಣ ಪರಿಹಾರವಾಗಿದೆ. ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತನ್ನು ಈ ಆಯ-ವ್ಯಯದಲ್ಲಿ ನೀಡಲಾಗಿದೆ. 2022-23 ಸಾಲಿಗೆ ಕೇಂದ್ರ ಸರ್ಕಾರವು ತನ್ನ ಕೇಂದ್ರ ಆಯವ್ಯಯದಲ್ಲಿ ವಿತ್ತೀಯ ಕೊರತೆಯನ್ನು ಶೇ 3.5 ರವರೆಗೆ ಹೆಚ್ಚಿಸಲು ಅವಕಾಶ ನೀಡಿದ್ದರೂ ಇದನ್ನು ಶೇ 3.26ಕ್ಕೆ ಸೀಮಿತಗೊಳಿಸುವ ಮೂಲಕ ಆರ್ಥಿಕ ಶಿಸ್ತನ್ನು ಮತ್ತು ಮುಂದಾಲೋಚನೆಯನ್ನು ಪ್ರದರ್ಶಿಸಿದೆ. ಹಾಗೆಯೇ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಯವ್ಯಯದ ಅಂದಾಜಿನ ಸುಮಾರು 4,000 ಕೋಟಿ ಸಾಲವನ್ನು ಕಡಿಮೆ ಪ್ರಸ್ತಾಪಿಸಲಾಗಿದೆ. ಇದು ಸ್ವಾಗತಾರ್ಹ ನಡೆ. ಒಟ್ಟಿನಲ್ಲಿ ಚೊಚ್ಚಲ ಅಯ-ವ್ಯಯವಾದರೂ ತಮ್ಮ ಎಲ್ಲಾ ರಾಜಕೀಯ ಅನುಭವ ಮತ್ತು ಜಾಣ್ಮೆಯನ್ನು ಮುಖ್ಯಮಂತ್ರಿಗಳು ಈ ಅಯ-ವ್ಯಯದಲ್ಲಿ ತೋರಿದ್ದಾರೆ.
ಕೃಷಿ ಮತ್ತು ಪೂರಕ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಅಳವಡಿಸಲಾಗಿದೆ. ಕರೊನಾ ದಿಸೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಕೈಗಾರಿಕಾ ವಲಯ, ಸೇವಾ ವಲಯ, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಪೋ›ತ್ಸಾಹಕ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೇಂದ್ರದ ಮಾದರಿಯಲ್ಲಿ ಸೆಮಿಕಂಡಕ್ಟರ್ ತಯಾರಿಕರಿಗೆ ಹೆಚ್ಚಿನ ಪೋ›ತ್ಸಾಹ ನೀಡಲಾಗಿದೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಅನುದಾನವನ್ನು ಕೊಡಲಾಗಿದೆ. ಹೆಚ್ಚಿನ ಆದ್ಯತೆ ರಾಜ್ಯದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ – ಅದರಲ್ಲೂ ಬೆಂಗಳೂರಿನ ಅಭಿವೃದ್ಧಿಗೆ – ಒತ್ತನ್ನು ನೀಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸಮಗ್ರವಾಗಿ ನೋಡಿದರೆ ಇದೊಂದು ಸಂತುಲಿತ ಆಯ-ವ್ಯಯ.
ರಾಯರ ಸನ್ನಿಧಿಯಲ್ಲಿ ನಟ ಸುದೀಪ್​; ಶ್ರೀಸುಬುಧೇಂದ್ರ ತೀರ್ಥರಿಂದ ಸನ್ಮಾನ..

70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − four =
Remember me
