ಮೈಸೂರು:ಬೆಂಗಳೂರಿನಲ್ಲಿ ಯಾರು ಎಷ್ಟು ಅತಿಕ್ರಮಣ ಮಾಡಿಕೊಂಡಿದ್ದಾರೆ ಅನ್ನುವ ಪಟ್ಟಿಯನ್ನು ದಾಖಲೆ ಸಮೇತ ಕೊಡ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ಬಡವರ ಮೇಲೆ ಮಾತ್ರ ಅಧಿಕಾರಿಗಳು ಪ್ರತಾಪ ತೋರುತ್ತಾರೆ, ಶ್ರೀಮಂತರ ಮೇಲಲ್ಲ. ಬಡವರ ಆಸ್ತಿಯನ್ನು ಬುಲ್ಡೋಜರ್​ನಿಂದ ಒಡೆದು ಹಾಕಿ ಏನು ಮಾಡುತ್ತೀರಿ ಎಂದು ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾರೋ ಬಡವ ಫುಟ್ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿರುತ್ತಾನೆ. ನಮ್ಮ ಅಧಿಕಾರಿಗಳು ಅದನ್ನು ಜೆಸಿಬಿ ತಂದು ಹೊಡೆದು ಹಾಕ್ತಾರೆ. ಅದೇ ಶ್ರೀಮಂತರು ಎಷ್ಟೇ ಅಕ್ರಮ ಮಾಡಿದ್ದರೂ ಕ್ರಮ ವಹಿಸಲ್ಲ. ಇದು ನಿಮ್ಮ ಸರ್ಕಾರದ ನಡೆಯೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಯಾರು ಎಷ್ಟು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಪಟ್ಟಿಯನ್ನು ದಾಖಲೆ ಸಮೇತ ನೀಡುತ್ತೇನೆ. ಅಂತಹವರ ಆಸ್ತಿಯನ್ನು ಬುಲ್ಡೋಜರ್​ ನಿಂದ ಕೆಡವಲು ಸಾಧ್ಯವಾಗುತ್ತಾ ಎಂದು ಸವಾಲು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಲವು ಅವಕಾಶವಿದೆ. ನಿಜವಾಗಲೂ ಆಸಕ್ತಿ ಇದ್ದರೆ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯವರು ಕೋಮು ಸೌಹಾರ್ದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ, ಕಾಂಗ್ರೆಸ್‌ನವರು ಪೆಟ್ರೋಲ್ ಸುರಿಯುತ್ತಿದ್ದಾರೆ.ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಎರಡೂ ಪಕ್ಷಗಳು ಜಂಟಿಯಾಗಿಯೇ ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
