ಮೈಸೂರು:ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ ಜಾರಿಗೆ ಬಂದು ಒಂದು ವಾರ ಕಳೆಯುವಷ್ಟರಲ್ಲಿ ನಾನಾ ಅವಾಂತರಗಳು ನಡೆದುಹೋಗಿವೆ.
ಈಗಾಗಲೇ ಬಸ್​ನಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಧಾವಿಸುತ್ತಿದ್ದು, ನಿರ್ವಾಹಕರು ಉಳಿದವರಿಗೆ ಟಿಕೆಟ್ ನೀಡಲಿಕ್ಕೂ ಪರದಾಡಬೇಕಾದಂಥ ಘಟನೆಗಳೂ ಜರುಗಿವೆ. ಪುರುಷರು ಟಿಕೆಟ್​ಗೆ ದುಡ್ಡು ಕೊಟ್ಟೂ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ, ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಂದ ಸೀಟ್​ಗಾಗಿ ಕಿತ್ತಾಟ ಮುಂತಾದವು ಕೂಡ ನಡೆದಿವೆ.
ಇದನ್ನೂ ಓದಿ:ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವಂತಿಲ್ಲ: ಕ್ರಿಯೇಟಿವ್ ಆಗಿಯೇ ಸೂಚನೆ ಕೊಟ್ಟ ಡಿಎಂಆರ್​ಸಿ
ಇದೀಗ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಮಹಿಳೆಯರು ಪ್ರಯೋಗಿಸಿದ ಶಕ್ತಿಗೆ ಬಸ್​ ಡೋರ್ ಕಿತ್ತು ಹೋದ ಪ್ರಕರಣವೂ ನಡೆದಿದೆ. ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಾರಾಂತ್ಯ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಹಿಳೆಯರು ತೋರಿದ ಶಕ್ತಿಗೆ ಬಸ್​ವೊಂದರ ಬಾಗಿಲು ಕಳಚಿ ಹೋಗಿದೆ.

ಇದು ದೇಶದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲೇ ಪ್ರಥಮ: ಈ ಆಸ್ಪತ್ರೆಯ ವೈದ್ಯರು ದೇಹದೊಳಗೇ ಓಡಾಡಿ ಪರೀಕ್ಷಿಸುತ್ತಾರೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
