ಬೆಂಗಳೂರು:ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ 23,251 ಕೋಟಿ ರೂ. ಮೊತ್ತದ ಪರಿಷ್ಕೃತ ಯೋಜನಾ ವರದಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈ ಯೋಜನೆ ಆರಂಭಿಸುವ ಸಂದರ್ಭದಲ್ಲಿ 12,000 ಕೋಟಿ ಆಗಬಹುದೆಂದು ನಿರೀಕ್ಷೆ ಮಾಡಿದ್ದೆವು. ಟೆಂಡರ್, ಕಾಲ ಮುಂದೆ ಹೋದಂತೆಲ್ಲ ಈ ಮಟ್ಟಕ್ಕೆ ಬಂದಿದೆ. ಇದು ಅಂತಿಮವಾಗಬಹುದು ಎಂದು ತಿಳಿದುಕೊಂಡಿದ್ದೇವೆ. ಈಗಾಗಲೆ ಸುಮಾರು ಶೇ.99 ಟೆಂಡರ್ ಆಗಿವೆ ಎಂದರು.
ದರ ಹೆಚ್ಚಳ ಆಗುವುದು ಷೆಡ್ಯೂಲ್, ಮಾರುಕಟ್ಟೆ ದರ ಆದರಿಸುತ್ತದೆ. ಭೂಸ್ವಾಧೀನ ದರ ಹೆಚ್ಚಾದಾಗಲೂ ಯೋಜನಾ ವೆಚ್ಚ ಹೆಚ್ಚಾಗುತ್ತವೆ. ಈ ಯೋಜನೆ ಕೈಗೆತ್ತಿಕೊಂಡಾಗ ಭೂಮಿ ದರ 2 ರಷ್ಟಿತ್ತು. 2013ರ ಕಾಯ್ದೆ ಪ್ರಕಾರ 4 ಪಟ್ಟಾಗಿದೆ. ಭೂಸ್ವಾಧೀನದಿಂದಲೇ ದರ ಹೆಚ್ಚಾಗಿದೆ. ಕಬ್ಬಿಣ, ಸಿಮೆಂಟ್, ಮರಳು ದರ ಏರಿಕೆ ಕೂಡ ಎತ್ತಿನಹೊಳೆ ಯೋಜನೆ ದರ ಪರಿಷ್ಕರಣೆಗೆ ಕಾರಣವಾಗಿದೆ ಎಂದು ಹೇಳಿದರು.
ಸಿವಿಲ್ ಸೇವೆ ತಿದ್ದುಪಡಿ:
ರಾಜ್ಯ ಸಿವಿಲ್ ಸೇವಾ ನೌಕರರು ಆಸ್ತಿ ವಿವರ ಸಲ್ಲಿಸುವ ನಿಯಮ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ರಾಜ್ಯ ಸಿವಿಲ್ ಸೇವಾ ನೌಕರರು ಪ್ರತಿ ವರ್ಷದ ಡಿಸೆಂಬರ್ ಅಂತ್ಯಕ್ಕೆ ಆಸ್ತಿ ವಿವರ ಸಲ್ಲಿಸಬೇಕಿತ್ತು. ಈಗ ಅದನ್ನು ಮಾರ್ಚ್ ಅಂತ್ಯಕ್ಕೆ ಸಲ್ಲಿಸುವ ಕುರಿತು ಕರ್ನಾಟಕ ಸಿವಿಲ್ ಸೇವೆಗಳು(ನಡತೆ)(2ನೇ ತಿದ್ದುಪಡಿ) ನಿಯಮಗಳು-2022ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.
39 ಮೊಕದ್ದಮೆ ವಾಪಸ್:
ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ 39 ಮಂದಿ ವಿರುದ್ಧದ ವಿವಿಧ ಮೊಕದ್ದಮೆ ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂಪಡೆದುಕೊಂಡ ಮೊಕದ್ದಮೆಗಳು ಗಂಭೀರ ಸ್ವರೂಪದ್ದಲ್ಲ, ಜನ ಪರ ಹೋರಾಟದಲ್ಲಿ ಪಾಲ್ಗೊಂಡವರ ವಿರುದ್ಧ ದಾಖಲಾಗಿದ್ದ ಸಾಮಾನ್ಯ ಪ್ರಕರಣಗಳಾಗಿವೆ. ಒಟ್ಟು 41 ಪ್ರಕರಣಗಳಲ್ಲಿ 2 ಪ್ರಕರಣಗಳು ಜನ ಪ್ರತಿನಿಧಿ ಕಾಯ್ದೆ ವ್ಯಾಪ್ತಿಯಲ್ಲಿ ಇರುವುದರಿಂದ ಅವನ್ನು ವಾಪಸ್ ಪಡೆಯುತ್ತಿಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಹೋರಾಟ, ಪ್ರತಿಭಟನೆ, ದೊಂಬಿಯಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲಿನ ಸಣ್ಣ ಪುಟ್ಟ ಮೊಕದ್ದಮೆಗಳನ್ನು ವಾಪಾಸು ಪಡೆಯಲಾಗಿದೆ. ಕೊಲೆ, ಕೊಲೆ ಯತ್ನ, ಅತ್ಯಾಚಾರದಂಥ ಪ್ರಕರಣಗಳು ಇದರಲ್ಲಿ ಒಳಗೊಂಡಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ನಷ್ಟ ಭರಿಸಲು ನಿರ್ಧಾರ:
ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ಸಂಪುಟ ಸಭೆ ನಿರ್ಧರಿಸಿದ್ದು, ಸರ್ಕಾರದಿಂದ 8,064 ಕೋಟಿ ರೂಪಾಯಿ ಹಣಕಾಸು ನೆರವು ನೀಡಲಾಗುತ್ತಿದೆ. ಅಮೃತ ಸ್ವಾಭಿಮಾನ ಯೋಜನೆ ಅನುಷ್ಠಾನಕ್ಕೂ ಸಂಪುಟ ಒಪ್ಪಿಗೆ ನೀಡಿದ್ದು, ಯೋಜನೆಯಡಿ 92 ಕೋಟಿ ರೂ. ಸಹಾಯಧನ ಘೊಷಣೆ ಮಾಡಲಾಗಿದೆ. ಕೆಇಬಿಗೆ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಖಾತರಿಯಾಗಿದ್ದು, 3,000 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಖಾತರಿ ಪಡಿಸಿದೆ.
ರಾಜ್ಯದಲ್ಲಿ ಖಾಸಗಿ ಹೂಡಿಕೆ ಆಧಾರದ ಮೇಲೆ ಗ್ರಿಡ್ ಬೆಂಬಲಿತ 1000 ಮೆ.ವಾಟ್ ಪಂಪ್ ಹೈಡ್ರೋಸ್ಟೋರೇಜ್ ವಿದ್ಯುತ್ ಯೋಜನೆಯನ್ನು ವಿದ್ಯುತ್ ಕಾಯ್ದೆ -2003 ಕಲಂ 63ರ ಅಡಿ ಪಿಸಿಕೆಎಲ್ ಸಂಸ್ಥೆಯವರಿಂದ 4000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲು ತೀರ್ವನಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆ ಅಧಿಕಾರಿಗಳ ದರ್ಜೆ-3ರ ಮೇಲ್ವಿಚಾರಕ ಸಿಬ್ಬಂದಿ, ದರ್ಜೆ-2, ದರ್ಜೆ-1(ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಯಾ ಸಾರಿಗೆ ಸಂಸ್ಥೆಗಳಿಗೆ ಶಾಶ್ವತ ಹಂಚಿಕೆ ಮಾಡಿ, ದರ್ಜೆ 1(ಹಿರಿಯ ಶ್ರೇಣಿ) ಮತ್ತು ಮೇಲ್ಪಟ್ಟ ವೃಂದಗಳ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮುಂದುವರಿಸಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ.
ಪ್ರಮುಖ ಅನುಮೋದನೆಗಳು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five − one =
Remember me
