| ವೆಂಕಟೇಶ ಹೂಗಾರ್ ರಾಯಚೂರು
ಅಕ್ರಮವಾಗಿ ಕೃಷಿ ಕೋಟಾದಡಿ ಬಿಎಸ್ಸಿ ಸೇರಿ ಇತರ ಪದವಿಗಳನ್ನು ಪಡೆದ ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ್ ಪುತ್ರ ವಿನಯ್ ಪಾಟೀಲ್​ರ ಎಲ್ಲ ಪದವಿಗಳನ್ನು ರದ್ದುಪಡಿಸಿ, ಇದಕ್ಕೆ ತಗುಲಿರುವ ವೆಚ್ಚ 10 ಲಕ್ಷ ರೂ. ಅನ್ನು ವಿವಿಗೆ ಭರಿಸುವಂತೆ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎನ್.ಲಕ್ಷ್ಮಣಗೌಡ ಆದೇಶಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸಿಲ್ಲ
ವಿವಿ ಕುಲಪತಿಗೆ ಮೇ 21ರಂದು ಪತ್ರ ಬರೆದು ಆದೇಶಿಸಿರುವ ಅಧೀನ ಕಾರ್ಯದರ್ಶಿ, ಆರ್​ಟಿಐ ಕಾರ್ಯಕರ್ತ ಟಿ.ಮಾರೆಪ್ಪ ಹೈಕೋರ್ಟ್​ಗೆ ಸಲ್ಲಿಸಿದ ರಿಟ್​ನಲ್ಲಿನ ಆರೋಪ ಸಾಬೀತಾಗಿದೆ. ಡಾ.ಬಿ.ವಿ.ಪಾಟೀಲ್ ಕುಲಪತಿಯಾಗಿದ್ದ ಸಂದರ್ಭ ವಿನಯ್ ಪಾಟೀಲ್ ಕೃಷಿ ಕೋಟಾದಡಿ ಬಿಎಸ್ಸಿ ಕೃಷಿ ಪದವಿಗೆ ಅಕ್ರಮವಾಗಿ ಪ್ರವೇಶ ಪಡೆದಿರುವುದು ಸ್ಪಷ್ಟವಾಗಿದೆ. ಇಲ್ಲಿ ಪಡೆದಿರುವ ಬಿಎಸ್ಸಿ ಪದವಿ, ಎಂಎಸ್ಸಿ ಹಾಗೂ ಪಿಎಚ್.ಡಿ ಎಲ್ಲ ಪ್ರಮಾಣ ಪತ್ರಗಳನ್ನು ತಕ್ಷಣದಿಂದ ರದ್ದುಪಡಿಸುವುದು. ಕೃಷಿ ಆದಾಯ ಪ್ರಮಾಣಪತ್ರ ತಿದ್ದಿದ ಕ್ರಿಮಿನಲ್ ಅಪರಾಧಕ್ಕಾಗಿ ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ಡೆಡ್ಲಿ ಕೋವಿಡ್​-19ನಿಂದ ತುಮಕೂರಿನಲ್ಲಿ ವೃದ್ಧೆ ಸಾವು; ರಾಜ್ಯದಲ್ಲಿ 43ಕ್ಕೇರಿದ ಮೃತರ ಸಂಖ್ಯೆ
2020-21ನೇ ಸಾಲಿಗೆ ಕೃಷಿ ಕೋಟಾದಡಿ ಪ್ರವೇಶ ಪಡೆವ ಓರ್ವ ವಿದ್ಯಾರ್ಥಿಯ ಬಿಎಸ್ಸಿ ಪದವಿಗೆ ತಗಲುವ ಸಂಪೂರ್ಣ ವೆಚ್ಚವನ್ನು ವಿನಯ್ ಪಾಟೀಲ್​ನಿಂದ ಭರಿಸುವಂತೆ ಆದೇಶಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ನಿಯಮಾನುಸಾರ ಕ್ರಮ ಕೈಗೊಂಡು ತಿಂಗಳೊಳಗೆ ದಾಖಲೆಗಳೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಧೀನ ಕಾರ್ಯದರ್ಶಿಯ ಆದೇಶ ಪರಿಣಾಮ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ಕುಲಸಚಿವರಿಂದ ವಿನಯ್ ಪಾಟೀಲ್​ಗೆೆ ಮೇ 22ರಂದೇ ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 17 =
Remember me
