ಬೆಂಗಳೂರು:ದೇಶದಲ್ಲಿ 1 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟು ಬ್ಯಾನ್​ ಆಗಿ ಮೂರು ವರ್ಷ ಕಳೆದಿದೆ. ಆದರೀಗ ನಿಷೇಧಿತ 1 ಸಾವಿರ ರೂ. ಮುಖಬೆಲೆಯ ನೋಟುಗಳು ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡುತ್ತಿವೆ.
ಜಾಲಹಳ್ಳಿ ಎಚ್​ಎಂಟಿ ಸವಿರ್ಸ್​ ರಸ್ತೆಯಲ್ಲಿ ಮಾರುತಿ ಸುಜುಕಿ ಕಾರಿನಲ್ಲಿದ್ದ ಒಂದು ಸಾವಿರ ಮುಖಬೆಲೆಯ 30 ಲಕ್ಷ ರೂ. ಹಳೆಯ ನೋಟನ್ನು ಜಾಲಹಳ್ಳಿ ಪೊಲೀಸರು ಜಪ್ತಿ ಮಾಡಿದ್ದು, ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿರಿಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ
ಜು. 28ರ ಮಧ್ಯಾಹ್ನ 12.30ರ ಸುಮಾರಿನಲ್ಲಿ 1 ಸಾವಿರ ರೂ. ಮುಖಬೆಲೆಯ 30 ಲಕ್ಷ ರೂಪಾಯಿ ನೋಟುಗಳೊಂದಿಗೆ ಮೂವರು ಮಾರುತಿ ಸುಜುಕಿ ಕಾರಿನಲ್ಲಿದ್ದರು. ಈ ವೇಳೆ ದಾಳಿ ಮಾಡಿದ ಪೊಲೀಸರು ನಿಷೇಧಿತ 30 ಲಕ್ಷ ರೂ. ನೋಟುಗಳನ್ನು ವಶಕ್ಕೆ ಪಡೆದು ಕಾರಿನಲ್ಲಿದ್ದ ಮಾಗಡಿ ರಸ್ತೆ ಕೆ.ಪಿ.ಅಗ್ರಹಾರ ನಿವಾಸಿ ಕಿರಣ್​ಕುಮಾರ್​ (31), ನಾಗರಬಾವಿಯ ಪ್ರವಿಣ್​ಕುಮಾರ್​ (29) ಮತ್ತು ಕಾಮಾಕ್ಷಿಪಾಳ್ಯದ ಪವನ್​ಕುಮಾರ್​ (24) ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ, ಮಾಗಡಿ ರಸ್ತೆಯ ಮಾಳಗಾಳದ ಹನುಮಂತೇ ಗೌಡ ಮತ್ತು ವಿಜಯನಗರದ ರಾಜಶೇಖರ್​ ಎಂಬುವರು ನಮಗೆ ನಿಷೇಧಿತ ನೋಟುಗಳನ್ನು ಚಲಾವಣೆಗೆಂದು ಕೊಟ್ಟಿದ್ದರು. ಜನರ ಕಡೆಯಿಂದ ಶೇ.10 ರಂತೆ ಹೊಸ ನೋಟು ಪಡೆದು ಅವರಿಗೆ ಹಳೇ ನೋಟು ಮಾರಾಟ ಮಾಡಲು ಅವರೇ ಸೂಚಿಸಿದ್ದರು. ಅದರಂತೆ ಹಳೇ ನೋಟು ಚಲಾವಣೆಗೆ ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ.
ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ, ಎರಡೂ ಕುಟುಂಬಗಳ ದ್ವೇಷದ ಜ್ವಾಲೆಗೆ ಹಾಡಹಗಲೇ ಹೊತ್ತಿ ಉರಿದ ಮನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
